Advertisement

ಬ್ರಿಕ್ಸ್‌ ಎನ್‌ಎಸ್‌ಎ ಸಭೆ: ಚೀನ ಅಧ್ಯಕ್ಷರನ್ನು ಭೇಟಿಯಾಗುವ ದೋವಾಲ್‌

06:07 PM Jul 26, 2017 | udayavani editorial |

ಬೀಜಿಂಗ್‌ : ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್‌ಲಾಂ ಪ್ರದೇಶದಲ್ಲಿ ಭಾರತ ಮತ್ತು ಚೀನ ಸೇನೆ ಕಳೆದ ಎರಡು ತಿಂಗಳಿಂದ ಮುಖಾಮುಖೀಯಾಗಿ ಉದ್ವಿಗ್ನತೆಗೆ ಕಾರಣವಾಗಿರುವ ನಡುವೆಯೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಾಲ್‌ ಅವರು ಬ್ರಿಕ್ಸ್‌ ದೇಶಗಳ ಉನ್ನತ ಭದ್ರತಾ ಅಧಿಕಾರಿಗಳ ಜತೆಗೆ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು  ಇದೇ ಶುಕ್ರವಾರ ಜು.28ರಂದು ಭೇಟಿಯಾಗಲಿದ್ದಾರೆ. 

Advertisement

ಬೀಜಿಂಗ್‌ ನಡೆಯಲಿರುವ ಎರಡು ದಿನಗಳ ಎನ್‌ಎಸ್‌ಎ ಸಭೆಯಲ್ಲಿ ಪಾಲ್ಗೊಳ್ಳುವ ದೋವಾಲ್‌ ಅವರು ಚೀನ ಅಧ್ಯಕ್ಷರೊಂದಿಗೆ ಭೇಟಿ ನಡೆಸುವುದನ್ನು ಉನ್ನತ ಅಧಿಕಾರಿಗಳು ದೃಢೀಕರಿಸಿದ್ದಾರೆ. 

ಬ್ರಿಕ್ಸ್‌ ದೇಶಗಳ ಭದ್ರತಾ ವಿಷಯಗಳಿಗೆ ಸಂಬಂಧಿಸಿಂತೆ ಎನ್‌ಎಸ್‌ಎ ಸಮೂಹವು ಚೀನದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಿದ್ದು ಆ ಸಂದರ್ಭದಲ್ಲಿ ದೋವಾಲ್‌ ಅವರು ಡೋಕ್‌ಲಾಂ ಬಿಕ್ಕಟ್ಟಿನ ಕುರಿತಾಗಿ ಚರ್ಚಿಸಲಿದ್ದಾರೆಂದು ಗೊತ್ತಾಗಿದೆ. 

ಪ್ರಕೃತ ಚೀನ ಬ್ರಿಕ್ಸ್‌ ಅಧ್ಯಕ್ಷತೆಯನ್ನು ಹೊಂದಿದ್ದು 2017ರ ಬ್ರಿಕ್ಸ್‌ ಶೃಂಗ ಸಭೆಯನ್ನು ಕ್ಸಿಯಾಮನ್‌ ನಗರದಲ್ಲಿ ನಡೆಸಿಕೊಡಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next