Advertisement
ವೇತನ ಆಧಾರಿತ ಟಿಡಿಎಸ್:ಒಬ್ಬ ವೇತನದಾರ ನೌಕರ 2018-19ನೇ ಹಣಕಾಸು ವರ್ಷದ ಟಿಡಿಎಸ್ ಕಟ್ಟಿರುವುದಿಲ್ಲ. ಹಾಗೆಯೇ, 2019-20ರಲ್ಲೂ ಆತ ಟಿಡಿಎಸ್ ಪಾವತಿಯಿಂದ ದೂರ ಉಳಿಯುತ್ತಾನೆ. ಇದರ ಜತೆಗೆ, 2018-19 ಹಾಗೂ 2019-20ರ ವರ್ಷದಲ್ಲಿ ಪ್ರತೀ ವರ್ಷ ಆತನ ಟಿಡಿಎಸ್ 50,000 ರೂ.ಗಳಿಗೂ ಮೀರಿ ರುತ್ತದೆ ಎಂದಿಟ್ಟುಕೊಳ್ಳೋಣ. ಅಂಥವರ ಮೇಲೆ ದಂಡ ಪ್ರಯೋಗ ವಾಗುತ್ತದೆ. ಅವರು, ದುಪ್ಪಟ್ಟು ಟಿಡಿಎಸ್ ಕಟ್ಟಬೇಕಿರುತ್ತದೆ.
ಒಬ್ಬ ವ್ಯಕ್ತಿ ನಿರ್ದಿಷ್ಟ ಬ್ಯಾಂಕ್‌ನ ಖಾತೆಗೆ ಕಂಪೆನಿಯೊಂದರ ಲಾಭಾಂಶ ಆಧಾರಿತ ಬಡ್ಡಿ, ನಿಶ್ಚಿತ ಠೇವಣಿ, ರೆಕರಿಂಗ್ ಡೆಪಾಸಿಟ್ ಮೇಲೆ ಬಡ್ಡಿ ಮೇಲೆ ಟಿಡಿಎಸ್ ಕಡಿತವಾಗಿದ್ದರೂ, ಅದರ ತೆರಿಗೆಯನ್ನು ಸಲ್ಲಿಸದೇ ಇದ್ದರೂ ದುಪ್ಪಟ್ಟು ಟಿಡಿಎಸ್ ಕಟ್ಟಬೇಕಿರುತ್ತದೆ. ಅಲ್ಲದೆ, ಈ ಮಾದರಿಯ ರಿಟರ್ನ್ಸ್ ಸಲ್ಲಿಸದೇ ಇರುವುದರ ಬಗ್ಗೆ ಆಯಾ ಬ್ಯಾಂಕ್‌ಗಳೇ ಸರಕಾರಕ್ಕೆ ಮಾಹಿತಿ ನೀಡುವುದು ಇನ್ನು ಕಡ್ಡಾಯವಾಗಲಿದೆ.