Advertisement

Dhruva Sarja ಫ್ಯಾನ್ಸ್‌ಗೆ ಡಬಲ್‌ ಧಮಾಕಾ; ಅಪ್‌ಡೇಟ್‌ ಕ್ಯೂನಲ್ಲಿ ಮಾರ್ಟಿನ್‌, ಕೆಡಿ

03:26 PM May 23, 2024 | Team Udayavani |

ಸ್ಟಾರ್‌ ಸಿನಿಮಾಗಳು ತೆರೆಕಾಣಬೇಕು, ಆ ಮೂಲಕ ಪ್ರೇಕ್ಷಕರನ್ನು ಸೆಳೆಯಬೇಕೆಂದು ಸಿನಿಮಾ ಮಂದಿ ಮಾತನಾಡುತ್ತಿರುವಾಗಲೇ ಇಲ್ಲಿ ಸ್ಟಾರ್‌ ನಟನೊಬ್ಬನ ಎರಡು ಸಿನಿಮಾಗಳು ಒಂದರ ಹಿಂದೊಂದರಂತೆ ಅಪ್‌ಡೇಟ್‌ ನೀಡಲು ಮುಂದಾಗಿವೆ. ಅದು ಧ್ರುವ ಸರ್ಜಾ ನಟನೆಯ “ಕೆಡಿ’ ಹಾಗೂ “ಮಾರ್ಟಿನ್‌’ ಚಿತ್ರಗಳು.

Advertisement

ಧ್ರುವ ಸರ್ಜಾ ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿ ನೇಶನ್‌ ನಲ್ಲಿ ಬರುತ್ತಿರುವ “ಕೆಡಿ’ ಚಿತ್ರತಂಡ ಸಿನಿಪ್ರೇಮಿಗಳಿಗೊಂದು ಅಪ್‌ ಡೇಟ್‌ ಕೊಡಲು ಮುಂದಾಗಿದೆ. ಮೇ 26ರಂದು ಈ ಅಪ್‌ಡೇಟ್‌ ಕೊಡುವುದಾಗಿ ಚಿತ್ರತಂಡ ಹೇಳಿಕೊಂಡಿದ್ದು, ಸದ್ಯ ಧ್ರುವ ಅಭಿಮಾನಿಗಳ ಕುತೂಹಲವಂತೂ ಹೆಚ್ಚಿದೆ.

ಪ್ರೇಮ್‌ ಹಾಗೂ ಧ್ರುವ ಕಾಂಬಿನೇಶನ್‌ನಲ್ಲಿ ಬರುತ್ತಿರುವ “ಕೆಡಿ’ ಚಿತ್ರವನ್ನು ಕೆವಿಎನ್‌ ಸಂಸ್ಥೆ ನಿರ್ಮಿಸಿದೆ. ಮೂಲಗಳ ಪ್ರಕಾರ, ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಅದ್ಧೂರಿ ಸೆಟ್‌ ಹಾಕಿ ಇಡೀ ಸಿನಿಮಾದ ಚಿತ್ರೀಕರಣ ನಡೆಸಿದ್ದು, ಈಗ ಸಿನಿಮಾ ಕುರಿತಾದ ಸುದ್ದಿಯೊಂದನ್ನು ನೀಡಲು ಮುಂದಾಗಿದೆ ತಂಡ.

ಮೇ 24ಕ್ಕೆ ಮಾರ್ಟಿನ್‌ ಅಪ್‌ಡೇಟ್‌

“ಕೆಡಿ’ ಚಿತ್ರದ ಅಪ್‌ಡೇಟ್‌ ಸುದ್ದಿ ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ “ಮಾರ್ಟಿನ್‌’ ತಂಡ ಕೂಡಾ ಸಿನಿಮಾ ಪ್ರೇಮಿಗಳಿಗೊಂದು ಅಪ್‌ಡೇಟ್‌ ಕೊಡುವುದಾಗಿ ಘೋಷಿಸಿಕೊಂಡಿದೆ. ಮೇ 24ರಂದು ಚಿತ್ರದ ಕುರಿತಾದ ಭರ್ಜರಿ ಸುದ್ದಿಯನ್ನು ನೀಡಲು ಮಾರ್ಟಿನ್‌ ತಂಡ ಮುಂದಾಗಿದೆ. ಸಿನಿಮಾದ ಟ್ರೇಲರ್‌ ಅಥವಾ ರಿಲೀಸ್‌ ಡೇಟ್‌ ಘೋಷಣೆ ಮಾಡುತ್ತಾ ಎಂಬ ಕುತೂಹಲವೂ ಕೆಲವರಿಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next