ದೋಟಿಹಾಳ: ಗ್ರಾಮದ ಕೈಮಗ್ಗ ನೇಕಾರ ಸಹಕಾರ ಉತ್ಪಾದಕರು ಮತ್ತು ಮಾರಾಟ ಸಂಘಕ್ಕೆ ಆಡಳಿತಾಧಿಕಾರಿಯಾಗಿ ನೇಮಕಗೊಂಡ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ವೆಂಕರೆಡ್ಡಿಯವರು ಸೋಮುವಾರ ಅಧಿಕಾರ ವಹಿಸಿಕೊಂಡರು.
ಈ ಸಂಘದ ಆಡಳಿತ ಮಂಡಳಿ ಹಾಗು ಸಿಬ್ಬಂದಿಯೊಬ್ಬರ ಮಧ್ಯೆ ವಿವಾದ ಉಂಟಾಗಿ ಸಹಕಾರಿ ಸಂಘಗಳ ನಿಬಂಧಕರಿಗೆ ದೂರು ನೀಡಿಲಾಗಿತು. ಇದರ ಬಗ್ಗೆ ವಿಚಾರಣೆ ನಡೆಸಿದ ಉಪನಿಬಂಧಕರು ಎಪ್ರಿಲ್ 11 ರಂದು ಈಗಿರುವ ಆಡಳಿತ ಮಂಡಳಿಯನ್ನು ರದ್ದು ಮಾಡಿ, ಸಂಘಕ್ಕೆ ನೂತನ ಆಡಳಿತಾಧಿಕಾರಿಯಾಗಿ ವೆಂಕರೆಡ್ಡಿಯವರು ನೇಮಿಸಿ ಆದೇಶ ನೀಡಿದ್ದರು.
ಆದರೆ ನೇಮಕವಾದ ಆಡಳಿತಾಧಿಕಾರಿಗಳು ಕಳೆದ 10 ದಿನಗಳಿಂದ ಸಂಘಕ್ಕೆ ಬಾರದೆ ಇರುವುದರಿಂದ ಸಂಘದ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿತ್ತು ಪರಿಣಾಮ ನೇಕಾರರು ಹಣವಿಲ್ಲದೆ ಒಂದುವಾರ ಸಂಕಷ್ಟ ಅನುಭವಿಸಬೇಕಾಯಿತು. ಇದರ ಬಗ್ಗೆ ಏ:23 ಉದಯವಾಣಿ ವೆಬ್‌ನಲ್ಲಿ ಹಾಗೂ ಏ:24 ‘ಉದಯವಾಣಿ’ ಪತ್ರಿಕೆಯಲ್ಲಿ “ಸಹಕಾರ ಸಂಘದತ್ತ ಮುಖ ಮಾಡದ ಅಧಿಕಾರಿ” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಣೆ ಮಾಡಲಾಗಿತ್ತು.
ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಹೆಸರಿಡಿ: ವಚನಾನಂದ ಶ್ರೀ
ವರದಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು.. ನಾನು ಕಳೆದ ಒಂದು ವಾರದಿಂದ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಕರ್ತವ್ಯದಲ್ಲಿರುವ ಕಾರಣ ಸಂಘಕ್ಕೆ ಭೇಟಿ ನೀಡಿ ಅಧಿಕಾರವಹಿಸಿಕೊಳ್ಳಲು ತಡವಾಗಿದೆ. ಇನ್ನೂ ಮುಂದೆ ನೇಕಾರರಿಗೆ ಯಾವುದೇ ತೊಂದರೆಗಳು ಆಗುವುದಿಲ್ಲ ಎಂದು ಸಂಘದ ಆಡಳಿತಾಧಿಕಾರಿ ವೆಂಕರೆಡ್ಡಿಯವರು ಅವರು ಹೇಳಿದರು.