Advertisement

ಚಗಟೆ/ಚಗತೆ ಸೊಪ್ಪಿನ ಉಪ್ಪುಳಿ ದೋಸೆ

09:50 PM Sep 13, 2019 | mahesh |

ಬೇಕಾಗುವ ಸಾಮಗ್ರಿ
ಹೆಚ್ಚಿದ ಸೊಪ್ಪು 2 ಹಿಡಿ.
ಬೆಳ್ತಿಗೆ ಅಕ್ಕಿ- ಒಂದೂವರೆ ಪಾವು
ಕೊತ್ತಂಬರಿ-2 ಚಮಚ
ಜೀರಿಗೆ-2 ಚಮಚ
ಒಣಮೆಣಸು 2-3,
ಉಪ್ಪು, ಹುಳಿ ಸ್ವಲ್ಪ,
ತೆಂಗಿನಕಾಯಿ ಕಾಲು ಹೋಳು,
ಈರುಳ್ಳಿ 1 ಗಡ್ಡೆ,

Advertisement

ಮಾಡುವ ವಿಧಾನ:
ಅಕ್ಕಿಯನ್ನು 1 ಗಂಟೆ ನೀರಲ್ಲಿ ನೆನೆಸಿ ಬಳಿಕ ಸಾಮಾನುಗಳನ್ನೆಲ್ಲ ಹಾಕಿ ರುಬ್ಬಬೇಕು. ಹಿಟ್ಟಿಗೆ ಹೆಚ್ಚಿಟ್ಟ ಸೊಪ್ಪು, ಈರುಳ್ಳಿ ಸೇರಿಸಿ ದೋಸೆ ಹೊಯ್ಯಬೇಕು. ದೋಸೆಯನ್ನು ಎಣ್ಣೆ ಹಾಕಿ ಗರಿಗರಿ ಮಾಡಿದಲ್ಲಿ ರುಚಿ ಹೆಚ್ಚು.

ಸೊಪ್ಪಿನ ಇಡ್ಲಿ
ಮಾಡುವ ವಿಧಾನ:
ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆಹಾಕಬೇಕು. ಅನಂತರ ಅಕ್ಕಿಯನ್ನು ತೊಳೆದು ತೆಗೆದಿರಿಸಬೇಕು. ಸೊಪ್ಪನ್ನು ಶುಚಿಗೊಳಿಸಿ ಹೆಚ್ಚಿ, ಅಕ್ಕಿಯೊಡನೆ ರುಬ್ಬಬೇಕು, ಹಿಟ್ಟು ಉದ್ದಿನ ಇಡ್ಲಿಯ ಹಿಟ್ಟಿಗಿಂತ ಗಟ್ಟಿಯಾಗಿರಬೇಕು. ಹಿಟ್ಟನ್ನು ರಾತ್ರಿ ರುಬ್ಬಿಟ್ಟು ಬೆಳಿಗ್ಗೆ ಹಬೆಯಲ್ಲಿ ಬೇಯಿಸಬೇಕು. ಚಟ್ನಿಯ ಜತೆ ತಿನ್ನಲು ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿ:
ಅಕ್ಕಿ 1 ಪಾವು (ಕಾಲು ಸೇರು),
ಸೊಪ್ಪು 2 ಮುಷ್ಟಿ
ಮೆಂತ್ಯೆ-2ಚಮಚ
ಉಪ್ಪು.

ವಿದ್ಯಾನಾಯಕ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next