Advertisement

ಉದ್ದೀಪನಕ್ಕೆ ಇನ್ನೆಷ್ಟು ಬಲಿ?

09:29 PM Feb 21, 2020 | Team Udayavani |

ಉದ್ದೀಪನ ಸೇವನೆ ನಿಯಂತ್ರಣ ಕ್ರೀಡಾ ಲೋಕಕ್ಕೆ ದೊಡ್ಡ ಸವಾಲು. ಈ ವಿಷವರ್ತುಲಕ್ಕೆ ಸಿಲುಕಿ ರಷ್ಯಾದ ಅಥ್ಲೀಟ್‌ಗಳೆಲ್ಲ ನಿಷೇಧಗೊಂಡಿದ್ದರು. ಜಾಗತಿಕ ಕೂಟದಿಂದ ಇಡೀ ರಷ್ಯಾವೇ ಅಮಾನತಾಗಿತ್ತು. ಅಷ್ಟೊಂದು ದೊಡ್ಡ ಶಿಕ್ಷೆಯನ್ನು ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ನೀಡಿದ್ದರೂ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ದೀಪನ ಅಬ್ಬರ ಇನ್ನೂ ನಿಂತಿಲ್ಲ.

Advertisement

ಹಾಗಂತ ನಮ್ಮ ದೇಶದಲ್ಲಿ ಉದ್ದೀಪನ ಸೇವನೆಯಂತಹ ಪ್ರಕರಣಗಳು ಇಲ್ಲವೇ ಇಲ್ಲ ಎಂದಲ್ಲ. ಹಲವಾರು ಪ್ರಕರಣಗಳು ಇಲ್ಲೂ ಬೆಳಕಿಗೆ ಬಂದು ಪ್ರಮುಖ ಅಥ್ಲೀಟ್‌ಗಳು ಜೀವನವನ್ನೇ ಕಳೆದುಕೊಂಡಿದ್ದಾರೆ. ಇಂತಹ ಅಥ್ಲೀಟ್‌ಗಳ ಸಾಲಿಗೆ ಇದೀಗ ಜಾವೆಲಿನ್‌ ತಾರೆ ಅಮಿತ್‌ ದಹಿಯಾ ಕೂಡ ಸೇರಿಕೊಂಡಿದ್ದಾರೆ. ಹೌದು, ಹರ್ಯಾಣ ಅಥ್ಲೀಟ್‌ ನಾಡಾ (ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ) ಬಲೆಗೆ ಬಿದ್ದು ಈಗ ನಾಲ್ಕು ವರ್ಷ ನಿಷೇಧಕ್ಕೆ ಗುರಿಯಾಗಿದ್ದಾರೆ.

ಕಳೆದ ವರ್ಷ ರಾಷ್ಟ್ರೀಯ ಜಾವೆಲಿನ್‌ ಕೂಟದ ವೇಳೆ ಅಮಿತ್‌ ದಹಿಯಾ ರಕ್ತ ಹಾಗೂ ಮೂತ್ರದ ಮಾದರಿಯನ್ನು ಪಡೆದುಕೊಳ್ಳಲಾಗಿತ್ತು. ಇದರ ಸಂಪೂರ್ಣ ವರದಿ ಬಂದಿರುವ ಹಿನ್ನೆಲೆಯಲ್ಲಿ ಅಮಿತ್‌ ದಹಿಯಾಗೆ ಶಿಕ್ಷೆ ವಿಧಿಸಲಾಗಿದೆ. ತನ್ನ ಬದಲಿಗೆ ಮತ್ತೂಬ್ಬನನ್ನು ಪರೀಕ್ಷೆ ವೇಳೆ ಕಳಿಸಿದ್ದ ಅಮಿತ್‌ ವಿರುದ್ಧ ವಂಚನೆ ಪ್ರಕರಣವೂ ದಾಖಲಾಗಿದೆ. ಒಟ್ಟಾರೆ ಏನೋ ಮಾಡಲು ಹೋಗಿ ಅದು ಮತ್ತೂಂದಾಗಿ ಇಡೀ ಕ್ರೀಡಾ ಜೀವನವನ್ನೇ ಅಮಿತ್‌ ದಹಿಯಾ ಕಳೆದುಕೊಂಡಿದ್ದಾರೆ.

ಅತಿಯಾಸೆಗೆ ಬಿದ್ದು ಹೀಗೆ ಜೀವನ ಕಳೆದುಕೊಂಡವರಿಗೆ ಆರಂಭದಲ್ಲಿ ಇದೆಲ್ಲದರ ಪರಿಣಾಮ ಅರಿವಿರುವುದಿಲ್ಲ. ಮುಂದೆ ಬುದ್ದಿ ಬಂದಾಗ ಕಾಲ ಅವರದಾಗಿರುವುದಿಲ್ಲ. ಹೀಗಾಗಿ ಅಥ್ಲೀಟ್‌ಗಳು ಇಂತಹುದರ ಸುಳಿಗೆ ಸಿಲುಕುವ ಮೊದಲೇ ಎಚ್ಚರಿಕೆಯಿಂದ ಇರುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next