ಪೋರ್ಟ್ ಲ್ಯಾಂಡ್ : ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಿಂದ ಕ್ಯಾಲಿಫೋರ್ನಿಯಾದ ಒಂಟಾರಿಯೊಗೆ ಹಾರುತ್ತಿದ್ದ ಅಲಾಸ್ಕಾ ಏರ್‌ಲೈನ್ಸ್ ವಿಮಾನದ ಬಾಗಿಲು ತೆದುಕೊಂಡ ಪರಿಣಾಮ ಪೋರ್ಟ್‌ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತುರ್ತು ಲ್ಯಾಂಡ್ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ 174 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಹೇಳಲಾಗಿದ್ದು ಘಟನೆಯಿಂದ ಪ್ರಯಾಣಿಕರಿಗೆ ಗಾಯಗಳಾಗಿರುವ ಕುರಿತು ವರದಿಯಾಗಿಲ್ಲ ಎನ್ನಲಾಗಿದೆ.
ಅಲಾಸ್ಕಾ ಏರ್‌ಲೈನ್ಸ್ ಫ್ಲೈಟ್ 1282 ವಿಮಾನದಲ್ಲಿ ಈ ಘಟನೆ ಸಂಭವಿಸಿದ್ದು ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದ ಬಾಗಿಲು ಗಾಳಿಯ ಹೊಡೆತಕ್ಕೆ ಸಿಡಿದು ಹಾರಿ ಹೋಗಿದೆ ಪರಿಣಾಮ ವಿಮಾನದ ಒಳಗೆ ಬಲವಾದ ಗಾಳಿ ಬಿಸಿದ್ದು ಪ್ರಯಾಣಿಕರು ಕಂಗಾಲಾಗಿದ್ದಾರೆ ಕೂಡಲೇ ವಿಮಾನವನ್ನು ಪೋರ್ಟ್‌ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.
ಯುಎಸ್ ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ (ಎನ್‌ಟಿಎಸ್‌ಬಿ) ಎಕ್ಸ್‌ನಲ್ಲಿನ ಮಾಡಿದ ಪೋಸ್ಟ್‌ನಲ್ಲಿ ಅಲಾಸ್ಕಾ ಏರ್‌ಲೈನ್ಸ್ ಫ್ಲೈಟ್ 1282 ನಲ್ಲಿ ನಡೆದ ಘಟನೆ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.