Advertisement

ಕೋವಿಡ್ ಆತಂಕ ಬೇಡ: ಡಾ|ಅಶೋಕ್‌ಕುಮಾರ್‌

07:51 AM Jul 31, 2020 | mahesh |

ಶಿವಮೊಗ್ಗ: ಕೋವಿಡ್ ವೈರಾಣು ಅತ್ಯಂತ ದುರ್ಬಲವಾಗಿದ್ದು, ಇದರ ಬಗ್ಗೆ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಆದರೆ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯವಾಗಿದೆ ಎಂದು
ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ| ಬಿ.ಎನ್‌. ಅಶೋಕ್‌ಕುಮಾರ್‌ ಹೇಳಿದರು.

Advertisement

ಶಾಂತಲಾ ಸ್ಪೇರೋಕಾಸ್ಟ್‌ ಸಮೂಹ ಸಂಸ್ಥೆಗಳ ವತಿಯಿಂದ ನಗರದ ಮಾಚೇನಹಳ್ಳಿಯ 2ನೇ ತಿರುವಿನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿರುವ ಶಾಂತಲಾ ಸ್ಪೇರೋಕಾಸ್ಟ್‌ ಸಂಸ್ಥೆ ಸಭಾಂಗಣದಲ್ಲಿ ನಡೆದ ಕೋವಿಡ್‌ ರೋಗ ನಿರೋಧಕ ಹಾಗೂ ಶಕ್ತಿವರ್ಧನ ಔಷ ಧಗಳ ಮಾಹಿತಿ ಮತ್ತು ಉಚಿತ ಔಷ ಧ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಪ್ರಪಂಚಾದ್ಯಂತ ಕೊರೊನಾ ವೈರಸ್‌ ವ್ಯಾಪಕವಾಗಿ ಹರಡಿದೆ. ಆದರೆ ಈ ವೈರಾಣು ಅತ್ಯಂತ ದುರ್ಬಲ ಹಾಗೂ ಹಗುರವಾಗಿದೆ. ಇದರ ಬಗ್ಗೆ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮಗಳನ್ನು ವಹಿಸಿದರೆ ಇದರಿಂದ ಪಾರಾಗಬಹುದು ಎಂದು ಅಭಿಪ್ರಾಯಪಟ್ಟರು.

ಆಯುರ್ವೇದ ಔಷಧಿಯನ್ನು ಕಾಯಿಲೆ ಇದ್ದವರಿಗೆ ಕೊಡುವ ಪ್ರಮಾಣ ಹೆಚ್ಚಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅದೇ ಔಷಧಿಯನ್ನು ಕಡಿಮೆ ಪ್ರಮಾಣದಲ್ಲಿ ಕೊಡಲಾಗುತ್ತದೆ. ಆಯುರ್ವೇದ ಔಷಧಗಳನ್ನು ಸೇವಿಸುವ ಮೂಲಕ ತಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕೈಗಾರಿಕೋದ್ಯಮಿಗಳ ಸಂಘದ
ಅಧ್ಯಕ್ಷ ಎಂ.ಎ. ರಮೇಶ್‌ ಹೆಗಡೆ, ಕೈಗಾರಿಕೋದ್ಯಮಿ ಗಳಾದ ಬಿ.ಸಿ. ನಂಜುಂಡ ಶೆಟ್ಟಿ, ಸುಬ್ರಮಣ್ಯ, ಮಹೇಂದ್ರಕುಮಾರ್‌, ಡಿ.ಎಸ್‌. ಚಂದ್ರಶೇಖರ್‌, ಹರ್ಷಾ ರುದ್ರೇಗೌಡ ಮತ್ತಿತರರು ಇದ್ದರು.

ರೋಗ ಬರದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ, ರಾಜಕಾರಣಿಗಳು, ವಿವಿಧ ಸಂಘ- ಸಂಸ್ಥೆಗಳು ಹಾಗೂ ಕೈಗಾರಿಕೋದ್ಯಮಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ
ಶಾಂತಲಾ ಸ್ಪೇರೋಕಾಸ್ಟ್‌ ಸಮೂಹ ಸಂಸ್ಥೆಗಳ ಮೂಲಕ 2000 ಕಾರ್ಮಿಕರಿಗೆ 35 ಲಕ್ಷ ರೂ. ವೆಚ್ಚದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುರ್ವೇದ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಎಸ್‌. ರುದ್ರೇಗೌಡ, ವಿಧಾನ ಪರಿಷತ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next