Advertisement

ರಾಜಕೀಯ ಪ್ರಚಾರಕ್ಕೆ ಅರಸು ಹೆಸರು ಬಳಸಬೇಡಿ

09:54 PM Aug 20, 2019 | Team Udayavani |

ಮೈಸೂರು: ರಾಜಕೀಯ ಹಾಗೂ ಪ್ರಚಾರಕ್ಕಾಗಿ ಮಹಾನ್‌ ವ್ಯಕ್ತಿಗಳನ್ನು ಬಳಸಿಕೊಳ್ಳುವುದು ಸರಿಯಲ್ಲ. ಹಿಂದಿನ ಸರ್ಕಾರಗಳು ದೇವರಾಜ ಅರಸು ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು, ಅವರ ಹೆಸರಿನ ಯಾವ ಕೆಲಸವನ್ನು ಪರಿಪೂರ್ಣಗೊಳಿಸಲಿಲ್ಲ ಎಂದು ಶಾಸಕ ತನ್ವೀರ್‌ ಸೇಠ್ ಬೇಸರ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಗರದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು 104ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

Advertisement

10 ವರ್ಷಗಳ ಹಿಂದೆ ಸರ್ಕಾರ ದೇವರಾಜ ಅರಸು ಅವರ ಹುಟ್ಟುರು ಕಲ್ಲಹಳ್ಳಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೊಳಿಸಬೇಕು. ಆದರ್ಶ ಗ್ರಾಮ ಮಾಡುತ್ತೇವೆ ಎಂದು ಘೋಷಿಸಿಲಾಗಿತ್ತು. ಆದರೆ, ಅಂದಿನಿಂದ ಸರಿಯಾದ ಕೆಲ ಆಗಿಲ್ಲ. ಈಗ ತುಸು ಕೆಲಸ ಆಗುತ್ತಿದೆ. ರಾಜಕೀಯಕ್ಕಾಗಿ ಅರಸು ಅವರ ಹೆಸರನ್ನು ಬಳಸಿಕೊಂಡರು. ಯಾವುದೇ ಮಹಾನ್‌ ವ್ಯಕ್ತಿಯನ್ನು ರಾಜಕೀಯಕ್ಕಾಗಿ ಹಾಗೂ ಪ್ರಚಾರಕ್ಕೆ ದುರ್ಬಳಕೆ ಮಾಡಬಾರದು. ಆದರೆ, ಹಿಂದಿನ ಸರ್ಕಾರವೊಂದು ದುರ್ಬಳಕೆ ಮಾಡಿಕೊಂಡಿತ್ತು. ಇದಕ್ಕೆ ನನ್ನ ತೀವ್ರ ಆಕ್ಷೇಪವಿದೆ. ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ಹೋದರೆ ಸಾಕು. ಹಿಂದೆಯೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅರಸು ಭವನ ನಿರ್ಮಿಸುತ್ತೇವೆ ಎಂದಿದ್ದರು ಅದು ಕೈಗೂಡಲಿಲ್ಲ ಎಂದು ವಿಷಾದಿಸಿದರು.

ಅರಸು ಪ್ರತಿಮೆ: ದೇವರಾಜ ಅರಸು ರಸ್ತೆ ನಿರ್ಮಿಸುವ ಸಂದರ್ಭ ರಸ್ತೆ ಬಳಿ ಅರಸು ಅವರ ಪ್ರತಿಮೆ ನಿರ್ಮಿಸಬೇಕೆಂದು ಅರಸು ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ನೀಡಿದವು. ಆದರೆ ಟ್ರಾಫಿಕ್‌ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಇದುವರೆಗೆ ಈ ಕೋರಿಕೆ ಈಡೇರಲಿಲ್ಲ. ಅರಸು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ದತ್ತಿಯ ಅಧ್ಯಕ್ಷನಾಗಿದ್ದೇನೆ. ನಾವೇ ಖಾಸಗಿಯಾಗಿ ಸರ್ಕಾರದ ನೆರವಿಲ್ಲದೆ ರೈಲು ನಿಲ್ದಾಣದ ಬಳಿ ಇರುವ ಇಂದಿರಾ ಭವನ(ಕಾಂಗ್ರೆಸ್‌ ಭವನ)ದ ಮುಂಭಾಗ ಪ್ರತಿಮೆ ನಿರ್ಮಿಸಲಾಗುವುದು ಎಂದರು.

ಸಮಾಜ ನಮಗೇನು ಕೊಟ್ಟಿದೆ ಎಂದು ಪ್ರಶ್ನಿಸುವ ಬದಲು ಸಮಾಜಕ್ಕೆ ನಾವೇನು ನೀಡಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಿ. ಜೀವನದುದ್ದಕ್ಕೂ ಅರಸು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಿ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೇಯರ್‌ ಪುಷ್ಪಲತಾ, ಸಾಹಿತಿ ಡಾ.ಮಳಲಿ ವಸಂತ ಕುಮಾರ್‌, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಎಸ್ಪಿ ರಿಷ್ಯಂತ್‌, ತಾಪಂ ಅಧ್ಯಕ್ಷೆ ಕಾಳಮ್ಮ, ಜಿಪಂ ಉಪಾಧ್ಯಕ್ಷೆ ಗೌರಮ್ಮ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಸೋಮಶೇಖರ್‌, ಅನ್ವೇಷಣಾ ಟ್ರಸ್ಟ್‌ ಅಧ್ಯಕ್ಷ, ಚುಟುಕು ಸಾಹಿತಿ ಡಾ.ಎಂ.ಜಿ.ಆರ್‌ .ಅರಸ್‌ ಇತರರಿದ್ದರು.

ಎಲ್ಲಾ ಜಾತಿಯವರನ್ನೂ ರಾಜಕೀಯಕ್ಕೆ ತಂದ ಅರಸು: ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ದೇವರಾಜ ಅರಸು ಧ್ವನಿ ಇಲ್ಲದವರಿಗೆ ದನಿ ಕೊಟ್ಟರು. ಹಿಂದುವಳಿ ವರ್ಗಗಳ ಅಭಿವೃದ್ಧಿಗೆ ಕ್ರಮ ವಹಿಸಿದ್ದಾರೆ. ಉಳುವವನೇ ಭೂಮಿಯ ಒಡೆಯ ಯೋಜನೆಗಳಿಂದ ಜನರ ಹಿತ ಕಾದಿದ್ದಾರೆ. ಇಂದು ಎಲ್ಲಾ ವರ್ಗದವರು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವುದಕ್ಕೆ ಅರಸು ಅವರ ಪ್ರೋತ್ಸಾಹ ಹಾಗೂ ಆಡಳಿತವೇ ಕಾರಣ ತಿಳಿಸಿದರು.

Advertisement

ಮೈಸೂರು ರಾಜವಂಶಸ್ಥರ ಆಡಳಿತದ ಸಮಯದಲ್ಲಿ 1940ರ ಸಮಯದಲ್ಲೇ ಪ್ರಜಾಪ್ರತಿನಿಧಿಯ ಚುನಾವಣೆ ನಿಂತು ಅವರ ರಾಜಕೀಯ ಗುರು ಸಾಹುಕರ್‌ ಚೆನ್ನಯ್ಯ ಅವರ ಮಾರ್ಗದರ್ಶನದಲ್ಲಿ ಶಾಸಕರಾಗಿದ್ದರು. ಅವರು ಆಡಳಿತ ನೀಡಿದ ಹುಣಸೂರು ಭಾರತವನ್ನು ಪ್ರತಿನಿಧಿಸುತ್ತದೆ. ಭಾರತದಲ್ಲಿರುವ ಧರ್ಮ, ಜಾತಿ ಮತು ವರ್ಗ ಹೀಗೆ ಎಲ್ಲಾ ವಿಷಯದಲ್ಲಿ ವೈವಿಧ್ಯತೆ ಹುಣಸೂರಿನಲ್ಲೂ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next