ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿರುವ ನಡುವೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಬೆದರಿಕೆ ಒಡ್ಡಿರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾನೆ.
ಪನ್ನು ಬಿಡುಗಡೆ ಮಾಡಿದ ವಿಡಿಯೋದಲ್ಲಿ ನವೆಂಬರ್ 19 ರಂದು ಏರ್ ಇಂಡಿಯಾ ವಿಮಾನದಲ್ಲಿ ಸಿಖ್ಖರು ಪ್ರಯಾಣಿಸಬೇಡಿ ಒಂದು ವೇಳೆ ಪ್ರಯಾಣಿಸಿದರೆ ನಿಮಗೆ ಅಪಾಯ ಸಂಭವಿಸಲಿದೆ ಎಂದು ಹೇಳಿರುವ ಬೆದರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಷ್ಟುಮಾತ್ರವಲ್ಲದೆ ನವೆಂಬರ್ 19 ರಂದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಮತ್ತು ಅದರ ಹೆಸರನ್ನು ಬದಲಾಯಿಸಲಾಗುವುದು ಎಂದು ಪನ್ನು ಹೇಳಿದ್ದಾರೆ. ಅದಲ್ಲದೆ ಕ್ರಿಕೆಟ್ ವಿಶ್ವಕಪ್‌ನ ಅಂತಿಮ ಪಂದ್ಯ ಕೂಡ ಇದೇ ದಿನ ನಡೆಯಲಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಹೈಲೈಟ್ ಮಾಡಿದ್ದಾನೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದಾಳಿ ನಡೆಸುವುದಾಗಿ ಭಯೋತ್ಪಾದಕ ಬೆದರಿಕೆ ಹಾಕಿದ್ದು, ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧದ ರೀತಿಯ ಪರಿಸ್ಥಿತಿ ಭಾರತದಲ್ಲೂ ಉಂಟಾಗಬಹುದು ಎಂದು ಹೇಳಿದ್ದ.
ಇದನ್ನೂ ಓದಿ: GPS Anklet: ಜಾಮೀನಿನ ಮೇಲಿರುವ ಶಂಕಿತ ಉಗ್ರರ ಚಲನವಲನ ಪತ್ತೆಗೆ ಪೊಲೀಸರಿಂದ ನೂತನ ಕ್ರಮ