Advertisement
ದುರ್ವಾಸನೆ, ನಾಯಿ ಕಾಟಮೊದಲು ರಸ್ತೆ ಬದಿ ಡಬ್ಬಿ ಇಟ್ಟು, ಪ್ರತಿದಿನ ಪೌರಕಾರ್ಮಿಕರು ಲಾರಿಯಲ್ಲಿ ಬಂದು ಕಸ ತೆರವು ಮಾಡುತ್ತಿದ್ದರು. ಇದರ ಸಮಸ್ಯೆ ಏನೆಂದರೆ, ತ್ಯಾಜ್ಯ ಸುರಿಯುತ್ತಿದ್ದ ರಸ್ತೆ ಬದಿಯಿಂದ ನಡೆದುಕೊಂಡು ಹೋಗಲಾಗದಷ್ಟು ಕೆಟ್ಟ ವಾಸನೆ ಬೀರುತ್ತಿತ್ತು. ನಾಯಿಗಳ ಉಪಟಳವೂ ಹೆಚ್ಚಾಗಿತ್ತು. ಇದಕ್ಕೆ ಪರಿಹಾರ ನೀಡಲು ಮುಂದಾದ ನಗರಸಭೆ, ಡಬ್ಬಿಗಳನ್ನು ತೆರವು ಮಾಡಿ, ಮನೆ- ಅಂಗಡಿಗಳ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸುವ ಹೊಸ ವ್ಯವಸ್ಥೆಗೆ ಬುನಾದಿ ಹಾಡಿತು.
ಹಲವು ರಸ್ತೆಗಳ ಬದಿ ತ್ಯಾಜ್ಯ ರಾಶಿ ಹಾಗೆಯೇ ಬಿದ್ದುಕೊಂಡಿದೆ. ಇದಕ್ಕೆ ಕಾರಣ ಹುಡುಕಿದಾಗ, ತ್ಯಾಜ್ಯ ಕೊಂಡೊಯ್ಯುವ ಲಾರಿ ಕೆಟ್ಟು ನಿಂತಿರುವುದು ಗಮನಕ್ಕೆ ಬಂದಿದೆ. ಪುತ್ತೂರು ನಗರಸಭೆಯಲ್ಲಿ ಒಟ್ಟು 14 ಪೌರ ಕಾರ್ಮಿಕರಿದ್ದಾರೆ. ಇದರಲ್ಲಿ ಹತ್ತು ಮಂದಿ ಮನೆ- ಅಂಗಡಿ ಬಾಗಿಲಿನಿಂದ ಕಸ ಸಂಗ್ರಹಿಸಲು ತೆರಳುತ್ತಾರೆ. ಉಳಿದ ನಾಲ್ವರನ್ನು, ರಸ್ತೆ ಬದಿಯ ತ್ಯಾಜ್ಯ ಸಂಗ್ರಹಕ್ಕೆಂದೇ ನೇಮಿಸಲಾಗಿದೆ. ಇವರು ಲಾರಿಯಲ್ಲಿ ಕಸ ತುಂಬಿ, ಡಂಪಿಂಗ್ ಯಾರ್ಡ್‌ಗೆ ಸುರಿಯಬೇಕು. ಆದರೆ ಲಾರಿ ಕೆಟ್ಟು ನಿಂತಿರುವುದರಿಂದ ಕಸ ಸಂಗ್ರಹ ಸಾಧ್ಯವಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
Related Articles
ಮೇ ಪ್ರಥಮ ವಾರದಿಂದಲೇ ಪ್ರತಿ ಮನೆ, ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಆದರೆ ಪೌರಕಾರ್ಮಿಕರಿಗೆ ಇದು ಹೊಸ ಕೆಲಸವಾದ ಕಾರಣ, ಇನ್ನೂ ಸಮರ್ಪಕ ಕೆಲಸಕ್ಕೆ 15 ದಿನ ಬೇಕು ಎನ್ನುತ್ತಾರೆ ಪೌರಾಯುಕ್ತರು.
Advertisement
ಕಸ ಪ್ರತ್ಯೇಕಿಸಿಯೇ ನೀಡಬೇಕುಈ ಯೋಜನೆಯಡಿ 11,500 ಡಸ್ಟ್ ಬಿನ್‌ಗಳನ್ನು ತರಿಸಿಕೊಳ್ಳಲಾಗಿದೆ. ಇದನ್ನು ಇಡಿಯ ಪುತ್ತೂರಿನ ಮನೆ, ಅಂಗಡಿಗಳಿಗೆ ಅಗತ್ಯದಷ್ಟು ವಿತರಿಸಲಾಗುವುದು. ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿಯೇ ಕಸ ನೀಡಬೇಕು. ಆದರೆ ಈ ವ್ಯವಸ್ಥೆ ಇನ್ನೂ ಜಾರಿಗೇ ಬಂದಿಲ್ಲ. ಸದ್ಯ ಚುನಾವಣೆ ಮುಗಿಯುವವರೆಗೆ ಇದನ್ನು ಜಾರಿಗೆ ತರುವುದು ಸುಲಭದ ಮಾತಲ್ಲ. ಏನಿದ್ದರೂ ಚುನಾವಣೆ ಮುಗಿದ ಬಳಿಕವಷ್ಟೇ ಕ್ರಮ ಕೈಗೊಳ್ಳಬೇಕು. ಇದರ ಬೆನ್ನಿಗೇ ಪೊಲೀಸರ ಸಹಕಾರ ಪಡೆದುಕೊಂಡು ತ್ಯಾಜ್ಯ ರಾಶಿ ಬೀಳುವ ಸ್ಥಳಗಳ ಬಳಿ ಸಿಸಿ ಕೆಮರಾ ಹಾಕಲಾಗುವುದು. ಇದರ ಮೂಲಕ ಕಸ ರಾಶಿ ಹಾಕುವವರನ್ನು ಪತ್ತೆ ಹಚ್ಚಿ, ದಂಡ ವಿಧಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಟಿಪ್ಪರ್ ದುರಸ್ತಿ
ರಸ್ತೆ ಬದಿ ತ್ಯಾಜ್ಯ ಎಸೆಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಪಾಯಿಂಟ್‌ಗಳನ್ನು ಗುರುತಿಸಿ ಸಿಸಿ ಕೆಮರಾ ಹಾಕಲಾಗುವುದು. ಇದರಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ, ದಂಡ ವಿಧಿಸಲಾಗುವುದು. ಸದ್ಯ ರಸ್ತೆ ಬದಿಯ ತ್ಯಾಜ್ಯ ಸಂಗ್ರಹಕ್ಕೆ ಟಿಪ್ಪರ್ ಹಾಳಾಗಿದೆ. ಸರಿಪಡಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ.
– ರೂಪಾ ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ — ಗಣೇಶ್ ಎನ್. ಕಲ್ಲರ್ಪೆ