Advertisement

Karnataka ರಾಜ್ಯ ಹಾಳು ಮಾಡದೇ, ಅಭಿವೃದ್ಧಿಗೆ ಸಹಕಾರ ಕೊಡಿ: ಕೇಂದ್ರ ಸಚಿವ ಕುಮಾರಸ್ವಾಮಿ

08:00 PM Aug 13, 2024 | Team Udayavani |

ಬೆಂಗಳೂರು: ನನ್ನ ಮೇಲೆ ದ್ವೇಷ ಮಾಡಿ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ನಾನು ರಾಜ್ಯದ ಕಾರ್ಖಾನೆಗೆ ಜೀವ ಕೊಡಬೇಕೆಂದು ಶ್ರಮ ಪಡುತ್ತಿದ್ದೇನೆ. ಸಾಕು ಲೂಟಿ ಮಾಡಿದ್ದು, ಸಹಕಾರ ಕೊಡಿ, ಸಣ್ಣತನ ಬಿಡಿ ಎಂದು ಕಾಂಗ್ರೆಸ್‌ ಸರಕಾರದ ವಿರುದ್ಧ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

Advertisement

ಬೆಂಗಳೂರಿನ ಎಚ್​ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ ಮಾತನಾಡಿ  ಬೆಂಗಳೂರು ನಗರದ ಪುಟ್ಟೇನಹಳ್ಳಿ ಕೆರೆ ಮುಚ್ಚಿ 53 ಎಕರೆ ಮುಚ್ಚಿ ಹಾಕಿ ಡಾಲರ್ಸ್ ಕಾಲನಿ ಮಾಡಿದ್ರು. ಮಳೆಗೆ 3-4 ಅಡಿ ನೀರು ನಿಲ್ಲುತ್ತಿತ್ತು.  2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ನಾನು ಅಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಂಡು ಕೆಲಸ  ಮಾಡಿ ತೋರಿಸಿದೆ. ಆದರೆ ನೀವು ದಿನ ರೌಂಡ್ಸ್ ಮಾಡ್ತೀರಲ್ಲಾ, ಜನರಿಗೆ ಏನ್ ಮಾಡಿದ್ದೀರಾ? ನನಗೆ ಪ್ರತಿ ಬಾರಿಯೂ ಲಾಟರಿ ಸಿಸ್ಟಮ್​ನಲ್ಲೇ  ಅಧಿಕಾರ ಸಿಕ್ಕಿದೆ. ಆ ಲಾಟರಿ ಅಧಿಕಾರದಲ್ಲೇ ಜನರಿಗೆ ಆದಷ್ಟು ಒಳ್ಳೆಯ ಕೆಲಸ ಮಾಡ್ತಿದ್ದೇನೆ. ಆದರೆ ನೀವೇನು ಮಾಡಿದ್ದೀರಿ ಎಂದು ಡಿ.ಕೆ.ಶಿವಕುಮಾರ್ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.


ಸಿದ್ದರಾಮಯ್ಯ ಸರಕಾರ ಅನುಮತಿ ಕೊಟ್ಟಿತ್ತು:
ಕೇಂದ್ರ ಸಚಿವನಾಗಿ ದೇವದಾರ ಗಣಿಗಾರಿಕೆಗೆ ನಾನು ಕಡತಕ್ಕೆ ಸಹಿ ಹಾಕಿದಕ್ಕೆ ಗೊಂದಲ ಮಾಡಿದ್ರು. ಕುಮಾರಸ್ವಾಮಿ ಪರಿಸರ ಹಾಳು ಮಾಡೋಕೆ ಹೊರಟಿದ್ದಾರೆ ಎಂದು ಹೇಳಿದ್ದರು. ಇದೇ ಸಿದ್ದರಾಮಯ್ಯ ಸರ್ಕಾರ 2014, 15, 16ರಲ್ಲಿ ಸಂಡೂರಿನಲ್ಲಿ ದೇವದಾರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಹಿಂದೆ ಸರ್ಕಾರದಲ್ಲಿ ಯಾವ ಭೂಮಿ ಅನುಮತಿ ನೀಡಲು ಶಿಫಾರಸ್ಸು ಮಾಡಿದ್ರು. ಅಲ್ಲಿ ದೊಡ್ಡ ಮಟ್ಟದ ಮರಗಳಿಲ್ಲ. ಕೆಐಒಸಿಎಲ್‌ ಪರಿಸರ ರಕ್ಷಣೆಗೆ 192 ಕೋಟಿ ವರ್ಗಾವಣೆ ಮಾಡಿದೆ. ಕೆಲವೊಂದು ತಾಂತ್ರಿಕ ತಪ್ಪುಗಳು ಆಗಿವೆ. ಅದನ್ನು ಸರಿಪಡಿಸಿಕೊಳ್ಳಲು ಸಂಸ್ಥೆ ರೆಡಿ ಇದೆ ಎಂದರು.

ಅಂದಿನ ಪ್ರಧಾನಿ ನೆಹರು ಅವರ ಕಾಲದಲ್ಲಿ ಎಚ್​ಎಂಟಿ‌ ಆರಂಭವಾಯ್ತು. ನೆಹರು ಕಾಲದಲ್ಲಿ ವಾಚ್ ಮತ್ತು ಬೆಲ್ಟ್ ತಯಾರು ಮಾಡಲು ಕಾರ್ಖಾನೆ ಆರಂಭವಾಗಿದ್ದು. ಪ್ರತಿ ವರ್ಷ ಹೊಸ ಯೂನಿಟ್ ಆರಂಭ ಮಾಡುತ್ತಿದ್ದರು. 1970ರಲ್ಲಿ ಎಚ್​ಎಂಟಿ  270 ಕೋಟಿ ವಾರ್ಷಿಕ ಆದಾಯ ಇತ್ತು. ದೇಶದ ಮಾರುಕಟ್ಟೆಯಲ್ಲಿ ಶೇ.90ರಷ್ಟು ಹಿಡಿತ ಸಾಧಿಸಿತ್ತು ಎಂದು ಹೇಳಿದರು.

ಎಚ್‌ಎಂಟಿ ಜಾಗದ ಬಗ್ಗೆ ನಿನ್ನೆ ಸಚಿವರು ಟಿಪ್ಪಣಿ ಬರೆದಿದ್ದು ಯಾವ ಕಾರಣಕ್ಕೆ? ಸಚಿವರು ಸೂಚನೆ ಕೊಟ್ಟ ಕೂಡಲೇ ಎಚ್​ಎಂಟಿ ಜಾಗ ವಶ ಪಡಿಸಿಕೊಳ್ಳಲು ಆಗುತ್ತಾ? 2020 ಡಿನೋಟಿಪೈ ಮಾಡಿದ್ದು ಯಾರು? ನಾನು ಎಚ್​ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟು ಅದನ್ನು ಉಳಿಸಬೇಕು.  ಹಾಗೆಯೇ ಸರ್‌.ಎಂ. ವಿಶ್ವೇಶ್ವರಯ್ಯರ ಕನಸಿನ ಕಾರ್ಖಾನೆ ಉಳಿಸಬೇಕೆಂದು ನನ್ನ ರೀತಿಯಲ್ಲಿ ಶ್ರಮ ಹಾಕುತ್ತಿದ್ದೇನೆ ಎಂದರು. ಕುಮಾರಸ್ವಾಮಿ ಎಚ್‌ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟ ಅನ್ನೋ ಕಾರಣಕ್ಕೆ ಈ ರೀತಿ ಅಡ್ಡಗಾಲು ಹಾಕಲಾಗಿದೆ. ಎಚ್‌ಎಂಟಿಗೆ  ನಾನು ಜಸ್ಟ್  ಭೇಟಿ ಕೊಟ್ಟಿದ್ದಕ್ಕೆ 45 ರೂ. ಇದ್ದ ಶೇರ್ ವ್ಯಾಲ್ಯೂ 92ಕ್ಕೆ ಏರಿಕೆ ಯಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next