Advertisement

ಸಿನೆಮಾ ತಾರೆಯರಿಗೆ ಒತ್ತಡ ಹೇರಬೇಡಿ: ರವಿಚಂದ್ರನ್‌

11:36 PM May 25, 2024 | Team Udayavani |

ಬೆಂಗಳೂರು: ಸಿನೆಮಾ ತಾರೆಗಳು ವರ್ಷಕ್ಕೆ 3-4 ಸಿನೆಮಾ ಮಾಡಬೇಕೆಂದು ಒತ್ತಡ ಹೇರುವಂತಿಲ್ಲ. ಈ ಆಯ್ಕೆ ಅವರವರಿಗೆ ಬಿಟ್ಟದ್ದು ಎಂದು ನಟ-ನಿರ್ದೇಶಕ ರವಿಚಂದ್ರನ್‌ ಹೇಳಿದ್ದಾರೆ.

Advertisement

ಸಂಕಟದಲ್ಲಿ ಇರುವ ಚಂದನವನಕ್ಕೆ ಸೂಕ್ತ ಪರಿಹಾರ ಹುಡುಕುತ್ತಿ ರುವ ಬೆನ್ನಲ್ಲೇ ರವಿಚಂದ್ರನ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರ ಮಂದಿರಕ್ಕೆ ಪ್ರೇಕ್ಷಕರು ಬರಬೇಕಾದರೆ ಸ್ಟಾರ್‌ಗಳು ವರ್ಷಕ್ಕೆ 3-4 ಸಿನೆಮಾ ಮಾಡಬೇಕು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, “ಕಾಸು ಕೊಟ್ಟ ತತ್‌ಕ್ಷಣ ಸಿನೆಮಾ ಒಪ್ಪಿಕೊಂಡು ಮಾಡಲು ಸಾಧ್ಯವಿಲ್ಲ. ಕಥೆ ಸಮ್ಮತವಾಗಬೇಕು. ಯಶ್‌, ದರ್ಶನ್‌ ವರ್ಷಕ್ಕೆ ಮೂರ್‍ನಾಲ್ಕು ಸಿನೆಮಾ ಮಾಡಿದರೆ ನೀವೇ ಅವರನ್ನು ಎರಡು ವರ್ಷಗಳಲ್ಲಿ ಮನೆ ಕಳುಹಿಸುತ್ತೀರಿ. ಯಾವುದೇ ನಟ ತಮ್ಮದೇ ಆದ ಇಮೇಜ್‌, ಬ್ರ್ಯಾಂಡ್‌, ಬಜೆಟ್‌ ಬಗ್ಗೆ ಯೋಚಿಸುತ್ತಾರೆ. ಹೀಗಿರುವಾಗ ನಾವು ವರ್ಷಕ್ಕೆ 3-4 ಸಿನೆಮಾ ಮಾಡಬೇಕೆಂದು ಒತ್ತಡ ಹಾಕುವಂತಿಲ್ಲ. ಸಿನೆಮಾ ಆಗುವುದು ದುಡ್ಡಿನಿಂದಲ್ಲ, ಒಳ್ಳೆಯ ಕಥೆಯಿಂದ. ಮೊದಲು ಹೀರೋಗಳಿಗೆ ಒಳ್ಳೆಯ ಕಥೆ ರೂಪಿಸಿ ನೀಡಿ’ ಎಂದು ರವಿಚಂದ್ರನ್‌ ಹೇಳಿದ್ದಾರೆ.

ಕಥೆ ಎಲ್ಲಿಂದ ಬಂದರೇನು?
ಮಲಯಾಳಿ ಸಿನೆಮಾ ಬಗ್ಗೆ ಮಾತನಾಡು ವವರು ಅಲ್ಲಿಯ ಬರಹಗಾರರಿಂದ ಕಥೆ ಬರೆಸಿ ತಂದು ಕನ್ನಡದಲ್ಲಿ ಸಿನೆಮಾ ಮಾಡಲಿ. ಒಳ್ಳೆಯ ಕಥೆ ಎಲ್ಲಿಂದ ಬಂದರೇನಂತೆ ಎಂದು ರವಿಚಂದ್ರನ್‌ ಪ್ರಶ್ನಿಸಿದರು. ಚಿತ್ರರಂಗದಲ್ಲಿ ಸಮಸ್ಯೆ ಇದೆ ಎನ್ನುತ್ತಾರೆಯೇ ವಿನಾ ಏನು ಸಮಸ್ಯೆ ಇದೆ ಎಂದು ಯಾರೂ ಹೇಳುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next