Advertisement

June 14: ತುಳುನಾಡಿನಾದ್ಯಂತ “ತುಡರ್‌’ ತೆರೆಗೆ

11:36 PM Jun 11, 2024 | Team Udayavani |

ಮಂಗಳೂರು: ಸುಮುಖ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ತಯಾರಾದ “ತುಡರ್‌’ ತುಳು ಸಿನೆಮಾ ಜೂ. 14ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.

Advertisement

ಮಂಗಳೂರಿನಲ್ಲಿ ರೂಪವಾಣಿ, ಭಾರತ್‌ ಸಿನೆಮಾಸ್‌, ಪಿವಿಆರ್‌, ಸಿನೆಪೊಲಿಸ್‌, ಸುರತ್ಕಲ್‌ನಲ್ಲಿ ಸಿನೆಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಭಾರತ್‌ ಸಿನೆಮಾಸ್‌, ಉಡುಪಿಯಲ್ಲಿ ಕಲ್ಪನ, ಭಾರತ್‌ ಸಿನೆಮಾಸ್‌, ಮಣಿಪಾಲದಲ್ಲಿ ಐನಾಕ್ಸ್‌, ಭಾರತ್‌ ಸಿನೆಮಾಸ್‌, ಕಾರ್ಕಳದಲ್ಲಿ ಪ್ಲಾನೆಟ್‌, ರಾಧಿಕಾ, ಪುತ್ತೂರಿನಲ್ಲಿ ಭಾರತ್‌ ಸಿನೆಮಾಸ್‌, ಬೆಳ್ತಂಗಡಿಯಲ್ಲಿ ಭಾರತ್‌ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಸಂಭಾಷಣೆ-ಸಾಹಿತ್ಯ ಬರೆದ ಮೋಹನ್‌ ರಾಜ್‌ ಮಾತನಾಡಿ, ಈಗಾಗಲೇ ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಕೂಡ ನಮ್ಮ ಪ್ರಯತ್ನವನ್ನು ಮೆಚ್ಚಿದ್ದಾರೆ. ಸುಮುಖ ಬ್ಯಾನರ್‌ನಲ್ಲಿ ಬಂದಿರುವ ಮೊದಲ ಸಿನೆಮಾ ಇದಾಗಿದ್ದು ಎಲ್ಲರೂ ಸಿನೆಮಾವನ್ನು ಶ್ಲಾಘಿಸಿದ್ದಾರೆ. ಇದು ನಮ್ಮ ಕೆಲಸಕ್ಕೆ ಇನ್ನಷ್ಟು ಸ್ಫೂರ್ತಿ ನೀಡಿದೆ ಎಂದರು.

ನಾಯಕ ನಟ ಸಿದ್ಧಾರ್ಥ್ ಶೆಟ್ಟಿ ಮಾತನಾಡಿ, “ತುಡರ್‌ ಸಿನೆಮಾ ವಿದೇಶದಲ್ಲಿ ನಡೆದ ಪ್ರೀಮಿಯರ್‌ ಶೋದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ. ಕಥೆ-ಪ್ರತಿಯೊಬ್ಬರ ನಟನೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ ಎಂದರು.

ನಿರ್ದೇಶಕ ತೇಜೇಶ್‌ ಪೂಜಾರಿ ಮಾತನಾಡಿ, ನಾನು ಬಾಲಿವುಡ್‌ನ‌ಲ್ಲಿ ಕಳೆದ 25 ವರ್ಷಗಳಿಂದ ಸಿನೆಮಾಗಳಲ್ಲಿ ತೊಡಗಿದ್ದೇನೆ. ಈ ಸಿನೆಮಾವನ್ನು ಪ್ರೀತಿಯಿಟ್ಟು ಮಾಡಿದ್ದೇವೆ ಎಂದರು.

Advertisement

ಸಿನೆಮಾಕ್ಕೆ ವಿಲ್ಸನ್‌ ರೆಬೆಲ್ಲೊ, ಹರೀಶ್‌ ಶೆಟ್ಟಿ, ವಿದ್ಯಾ ಸಂಪತ್‌ ಬಂಡವಾಳ ಹೂಡಿದ್ದಾರೆ. ತೇಜೇಶ್‌ ಪೂಜಾರಿ ಎಲ್ಟನ್‌ ಮಸ್ಕರೇನಸ್‌ ನಿರ್ದೇಶಕರಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ ಮೋಹನ್‌ ರಾಜ್‌ ಅವರದ್ದು. ಅರವಿಂದ ಬೋಳಾರ್‌ ಸಹಿತ ಪ್ರಖ್ಯಾತ ಕಲಾವಿದರು ಸಿನೆಮಾದಲ್ಲಿದ್ದಾರೆ.

ನಿರ್ಮಾಪಕ ವಿಲ್ಸನ್‌ ರೆಬೆಲ್ಲೋ , ವಿದ್ಯಾ ಸಂಪತ್‌, ಹರೀಶ್‌ ಶೆಟ್ಟಿ, ನಟ ಸಿದ್ಧಾರ್ಥ ಶೆಟ್ಟಿ, ವಿಕಾಸ್‌ ಪುತ್ರನ್‌, ಉದಯ… ಪೂಜಾರಿ, ನಿರ್ದೇಶಕ ತೇಜೇಶ್‌ ಪೂಜಾರಿ, ಹಂಚಿಕೆದಾರ ಸಚಿನ್‌ ಎಸ್‌. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next