Advertisement

ಸೋತಾಗ ಎದೆಗುಂದಬೇಡಿ: ಭಾಸ್ಕರ್‌ ರಾವ್‌

12:35 AM Feb 16, 2020 | Lakshmi GovindaRaj |

ಟಿ.ದಾಸರಹಳ್ಳಿ: ಸೋತಾಗ ಕುಗ್ಗದೆ, ಗೆದ್ದಾಗ ಬೀಗದೆ ಸೋಲು ಗೆಲುವು ಎರಡನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದರು.

Advertisement

ಜಾಲಹಳ್ಳಿಯ ಸೇಂಟ್‌ ಕ್ಲಾರೆಟ್‌ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಯೂರಿಕ -2020ರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ರಂಗದಲ್ಲೂ ಪೈಪೋಟಿ ಇದೆ. ಹಾಗಾಗಿ ಯುವ ಜನತೆ ಹಿಡಿದ ಕಾರ್ಯದಲ್ಲಿ ಸೋತರೆ ಎಲ್ಲ ಮುಗಿಯಿತು ಎಂದು ಎದೆಗುಂದ ಬಾರದು. ಬದಲಾಗಿ ಸೋಲೇ ಗೆಲುವಿನ ಮೆಟ್ಟಿಲು ಎಂದು ತಿಳಿದು ಗೆಲುವಿಗೆ ಹಾತೊರೆಯಬೇಕು ಎಂದು ಸಲಹೆ ನೀಡಿದರು.

ಸುಮಾರು 65 ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರಾಂಶುಪಾಲ ಫಾದರ್‌ ಡಾ.ಸಾಬು ಜಾರ್ಜ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ರೆ.ಫಾದರ್‌ ಅಬ್ರಾಹಂ, ವ್ಯವಸ್ಥಾಪಕ ರೆ.ಫಾದರ್‌ ಬೆನ್ನಿಮಾಥು, ಫಾದರ್‌ ಜೋಸೆಫ್‌ ಮಾಥ್ಯೂ ಹಾಗೂ ಫಾದರ್‌ ಸೋಜನ್‌, ಮಾದೇಶ್‌, ಆರ್‌. ಜಯಲಕ್ಷ್ಮೀ, ಮರಿಯಾ ಡಿಸೋಜ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next