Advertisement
ಪಟ್ಟಣದ ಜಯದೇವ ಪೆಟ್ರೋಲ್ ಬಂಕ್ ಬಳಿಯಲ್ಲಿರುವ ಆವರಣದಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ನೇತೃತ್ವದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಯುವ ಚೈತನ್ಯ ಸಮಾವೇಶ ಉದ್ಘಾಟಿಸಿದ ನಂತರ ಜನರನ್ನುದ್ದೇಶಿಸಿ ಮಾತನಾಡಿ, ಬಡ ಜನರ ಆರೋಗ್ಯದ ದೃಷ್ಟಿಯಿಂದ ನಮ್ಮ ಕ್ಷೇತ್ರದಲ್ಲಿ ಉಚಿತ ಡಯಾಲಿಸಸ್ ಕೇಂದ್ರಗಳನ್ನು ಸ್ಥಾಪಿಸಿ, ಅವಕಾಶ ಮಾಡಿಕೊಟ್ಟಿರುವೆ. ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಡಬಲ್ ಇಂಜಿನ್ ಭಾಗ್ಯದ ಕರ್ನಾಟಕದ ಹಳ್ಳಿ ಹಳ್ಳಿಯ ಜನತೆಗೆ ನೇರವಾಗಿ ತಲುಪುತ್ತಿವೆ.
Related Articles
Advertisement
ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಕೊಳ್ಳೆ ಹೊಡೆಯಲಿದ್ದಾರೆ. ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು. ಕಮಿಷನ್ ಶಾಸಕನನ್ನು ಕಂಪ್ಲಿ ಕ್ಷೇತ್ರದಿಂದ ತೊಲಗಿಸಲು ಸಂಕಲ್ಪ ಮಾಡಬೇಕು ಎಂದರು.
ಮಾಜಿ ಶಾಸಕ ಟಿ.ಎಚ್.ಸುರೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ಬಂದಿದ್ದಾರೆ. ಇಡೀ ದೇಶದಲ್ಲಿ ಯುವಕರಿಗೆ ಶಕ್ತಿ ತುಂಬುತ್ತಿದ್ದಾರೆ. ಯುವಕರನ್ನು ಬೆಳೆಸುವ ಪಾರ್ಟಿ ಬಿಜೆಪಿಯಾಗಿದೆ. ಯುವಕರಿಗೆ ಬಿಜೆಪಿ ಹೆಚ್ಚಿನ ಆಧ್ಯತೆ ನೀಡಿದೆ. ಕಂಪ್ಲಿ ಕ್ಷೇತ್ರಕ್ಕೆ ಕೋಟ್ಯಾಂತರ ಅನುದಾನ ಕೊಟ್ಟಿರುವಂತಹ ಸರ್ಕಾರ ಬಿಜೆಪಿಯಾಗಿದೆ. ಕೇವಲ ಒಂದು ತಿಂಗಳು ಇದೆ. ಈಗಾಗಲೇ ಕಾಂಗ್ರೆಸ್ಗೆ ನಡುಕ ಹುಟ್ಟಿದೆ. ಬಿಜೆಪಿ ಜನರ ಮನಸ್ಸಿನಲ್ಲಿದೆ. ಕೆಲವರು ಬಿಜೆಪಿ ಪಕ್ಷದ ಬ್ಯಾನರ್ಗಳನ್ನು ತೆಗೆಸುವ ಕೆಲಸ ಮಾಡುತ್ತಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರು ಕಂಪ್ಲಿಗೆ ಬಂದಿದ್ದರಿಂದ ಯುವಕರಲ್ಲಿ ಉತ್ಸವ, ಹುಮ್ಮಸ್ಸು ಬಂದಿದೆ. ಕಾಂಗ್ರೆಸ್ ಪಾರ್ಟಿಗೆ ಗ್ಯಾರಂಟಿ ಇಲ್ಲ. ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಕಾಂಗ್ರೆಸ್ ನವರು ಅಧಿಕಾರ ಹಿಡಿಯುವ ಹುಚ್ಚುತನ ಕಾಣುತ್ತಿದ್ದಾರೆ.
ನಮ್ಮ ಎರಡು ಅವಧಿಯಲ್ಲಿ ಸಾಕಷ್ಟು ಅನುದಾನ ತಂದು ಕಂಪ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿರುವೆ. ಕಂಪ್ಲಿ ಮತ್ತು ಕುರುಗೋಡು ತಾಲೂಕು ಮಾಡಿದೆ ಕೀರ್ತಿ ಬಿಜೆಪಿಯಾಗಿದೆ. ಹಾಲಿ ಶಾಸಕರು ನಾನು ಅನುದಾನ ತಂದಿದ್ದೇನೆ ಎಂದು ಜಂಬಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರದಿಂದ ಹಾಗೂ ಸಚಿವ ಬಿ.ಶ್ರೀರಾಮುಲು ಅವರು ಕೊಟ್ಟಂತಹ ಅನುದಾನದಿಂದ ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಕಂಪ್ಲಿ ಕ್ಷೇತ್ರವನ್ನು ಕಮಿಷನ್ ಕ್ಷೇತ್ರವನ್ನಾಗಿ ಮಾಡಿದ್ದಾರೆ.
ಕಂಪ್ಲಿ ಕ್ಷೇತ್ರದಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು. ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸೋಣ. ಅಧಿಕಾರ ಇಲ್ಲದಿಂದದ್ದರೂ ಕಂಪ್ಲಿ ಕ್ಷೇತ್ರದ ಜನರ ಸಂಪರ್ಕದಲ್ಲಿರುವೆ. ಈ ಬಾರಿ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಬೇಕು. ಕಂಪ್ಲಿ ಕ್ಷೇತ್ರದಲ್ಲಿ ದೌರ್ಜನ್ಯ ನಡೆಯುತ್ತಿದೆ. ಹತ್ತು ವರ್ಷದ ವೈಭವವನ್ನು ಮತ್ತೇ ಮರುಕಳಿಸಬೇಕು. ಸಿಎಂ ಅವರು ನೂರು ಹಾಸಿಗೆ ಆಸ್ಪತ್ರೆ ಕಾಮಗಾರಿಗೆ ಅಡಿಗಲ್ಲು ಭೂಮಿ ಪೂಜೆ ಸಲ್ಲಿಸಿದರೂ, ಕಮಿಷನ್ ಗಾಗಿ ಮತ್ತೇ ಭೂಮಿ ಪೂಜೆಯನ್ನು ಹಾಲಿ ಶಾಸಕರು ಮಾಡುತ್ತಿದ್ದಾರೆ.
ಗ್ಯಾರಂಟಿ ಕಾರ್ಡಿನಿಂದ ಜನತೆಗೆ ಮಂಕುಬೂದಿ ಹಚ್ಚುವ ಕೆಲಸಕ್ಕೆ ಕೈಯಾಕಿದ್ದಾರೆ. ಕಾಂಗ್ರೆಸ್ ಸಿಎಂ ಪಟ್ಟಕ್ಕಾಗಿ ಜಟಾಪಾಟಿ ನಡೆದಿದೆ. ಹಾಲಿ ಶಾಸಕರಿಗೆ ಗೆಲ್ಲುವುದಕ್ಕೆ ಒಬ್ಬರು ಬೇಕು, ಈಗ ಟಿಕೆಟ್ ಗಾಗಿ ಮತ್ತೊಬ್ಬರು ಬೇಕಾಗಿದ್ದಾರೆ. ಶಿಸ್ತಿನ ಸಿಪಾಯಿ ಬಿಜೆಪಿ ಪಕ್ಷವಾಗಿದೆ. ಹಿಂದಿನ ಚುನಾವಣೆಯಲ್ಲಿ ಕೆಲವೊಂದು ತಪ್ಪಿನಿಂದಾಗಿ ಅಧಿಕಾರ ತಪ್ಪಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಒಳ್ಳೆಯ ಸ್ಥಾನಮಾನಗಳಿವೆ. ಮನೆ ಮಗನಂತೆ ಜನರು ಕಾಣುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮುರಾಹರಿಗೌಡ, ನಿಗಮ ಮಂಡಳಿ ಅಧ್ಯಕ್ಷ ಗುತ್ತಿಗೆನೂರು ವಿರೂಪಾಕ್ಷಗೌಡ, ಯುವ ಮೋರ್ಚದ ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್, ಯುವ ಘಟಕದ ಜಿಲ್ಲಾಧ್ಯಕ್ಷ ಆರ್.ಸೋಮಶೇಖರ್, ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವಿರೇಶ, ಪ್ರಧಾನ ಕಾರ್ಯದರ್ಶಿಗಳಾದ ಸುಧಾಕರ, ಕೆ.ಸುನೀಲ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಅಶೋಕ, ಕಂಪ್ಲಿ ಮಂಡಲ ಯುವ ಘಟಕ ಅಧ್ಯಕ್ಷ ನಟರಾಜಗೌಡ, ಮಹಿಳಾ ಮೋರ್ಚದ ಜಿಲ್ಲಾಧ್ಯಕ್ಷೆ ಸುಗುಣಾ, ಮುಖಂಡರಾದ ಶಿವಶಂಕರ, ಪ್ರಶಾಂತ್ ಕೆ.ವಿ, ಅಂಬರೀಶ, ಮುರ್ರೆಲಿಂಗನಗೌಡ, ಕೆ.ರಾಮಲಿಂಗಪ್ಪ, ಯರ್ರೆಂಗಳಿ ತಿಮ್ಮಾರೆಡ್ಡಿ, ಅಡಿವಿಸ್ವಾಮಿ, ಬಸವಲಿಂಗಪ್ಪ, ಎಂ.ರಾಜಣ್ಣ, ಎನ್.ಜಯದೇವಗೌಡ, ಜೆ.ಸೋಮಶೇಖರಗೌಡ, ಪ್ರವನ್ ಮೇಟಿ, ಪ್ರೇಮ್ ಕುಮಾರ್, ಬೆಸೇಜ್ ರೆಡ್ಡಿ, ಪ್ರಕಾಶಗೌಡ, ಸಂಜಯಗೌಡ, ಅರುಣ್ ಬಾಲಚಂದ್ರ, ತಿಮ್ಮಪ್ಪ, ಶರಣಗೌಡ್ರು, ಕೆ.ಹೂವಣ್ಣ, ಯರ್ರಿಸ್ವಾಮಿ, ಪ್ರಕಾಶಗೌಡ ಸೇರಿದಂತೆ ಸಾಕಷ್ಟು ಕಾರ್ಯಕರ್ತರು ಪಾಲ್ಗೊಂಡಿದ್ದರು.