ಜೇವರ್ಗಿ: ಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಡಾ| ಅಜಯಸಿಂಗ್ ಅವರು ಮಾಡುವ ನಾಟಕ ಹಾಗೂ ಚಮತ್ಕಾರಗಳಿಗೆ ತಾಲೂಕಿನ ಜನರು ಮರುಳಾಗಬಾರದು ಎಂದು ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮನವಿ ಮಾಡಿದರು. ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರದ ವೇಳೆ ಡಾ| ಅಜಯಸಿಂಗ್ ಅವರು ಅಪಘಾತದ ಸುಳ್ಳು ಸುದ್ಧಿ ಹರಡಿಸಿ ತಾಲೂಕಿನ ಮುಗª ಜನರನ್ನು ವಂಚಿಸಿದ್ದಾರೆ. ಮೋಸದಿಂದ ಗೆದ್ದು ಬಂದರೂ ತಮ್ಮ ಅವಧಿಯಲ್ಲಿ ಅವರು ಮಾಡಿರುವ ಸಾಧನೆ ಮಾತ್ರ ಶೂನ್ಯ. ಬರುವ ಚುನಾವಣೆಯಲ್ಲಿ ಹೊಸ ನಾಟಕದೊಂದಿಗೆ ಶಾಸಕರು ಆಗಮಿಸುವ ನಿರೀಕ್ಷೆ ಇದ್ದು, ಜನ ಮೋಸ ಹೋಗಬಾರದು.
ತಾಲೂಕಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದ್ದು, ಬಿಜೆಪಿ ನಗಣ್ಯವಾಗಲಿದೆ. ರೈತರು, ದೀನ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಅಭಿವೃದ್ಧಿ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದು ಹೇಳಿದರು. ತಾಲೂಕಿನಲ್ಲಿ ಅಲ್ಪಸಂಖ್ಯಾತರು ಶಾಸಕರ ನಡೆಗೆ ಬೇಸತ್ತು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜೆಡಿಎಸ್ ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ತಾಲೂಕಿನಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಖಂಡರಾದ ಮಹ್ಮದ್ ಶಫಿಕ್ ಗುತ್ತೇದಾರ, ರಹೀಮ್ ಸೇಠ ಬಾಗವಾನ, ಯೂನುಸ್ ತೀಸರಿ ಮಂಜಿಲ್, ಯೂಸಫ್ ಚಿತ್ತಾ, ಖಾಜಾ ಖುರೇಷಿ, ಶಬ್ಬೀರ್ ಆಹಿ, ಜಾಫರ್ ಬಡಾಗರ, ಸಾಬೀರ್ ಬಡಾಗರ್, ಯೂನುಸ್ ಇನಾಮದಾರ ಸೇರಿದಂತೆ ನೂರಾರು ಜನ ಜೆಡಿಎಸ್ ಸೇರ್ಪಡೆಯಾದರು.
ಜಿಲ್ಲಾ ಮುಖಂಡರಾದ ದೇವೇಗೌಡ ತೆಲ್ಲೂರ, ಶಿವುಕುಮಾರ ನಾಟಿಕಾರ, ಸಮೀರ್ ಬಾಗವಾನ, ಎಸ್.ಎಸ್. ಸಲಗರ, ಬಸವರಾಜ ಖಾನಗೌಡರ, ಮಲ್ಲಿಕಾರ್ಜುನ ಕುಸ್ತಿ, ಅಲ್ಲಾಬಕ್ಷ ಬಾಗವಾನ, ಎಸ್.ಕೆ. ಹೇರೂರ, ಚಂದ್ರಶೇಖರ ಮಲ್ಲಾಬಾದ, ದಾವೂದ್ ಬಡಾಗರ್, ಮಹಿಬೂಬ್ ಇನಾಮದಾರ, ಶಿವಶಂಕರ ಜವಳಗಿ, ಗೊಲ್ಲಾಳಪ್ಪ ಕಡಿ, ಮಹಿಬೂಬ್ ಪಟೇಲ ಹೂಡಾ, ಅಲ್ಲಾ ಪಟೇಲ್ ಹೂಡಾ, ನಿಂಗಣ್ಣಗೌಡ ನಂದಿಹಳ್ಳಿ, ನಿಂಗಣ್ಣ ರದ್ದೇವಾಡಗಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.