Advertisement

ಜೇವರ್ಗಿ ತಾಲೂಕಿನಲ್ಲಿ 1500 ಕೋಟಿ ರೂ. ಅಭಿವೃದ್ಧಿ ಕಾಮಗಾರಿ

10:11 AM Feb 12, 2018 | Team Udayavani |

ಕಲಬುರಗಿ: ಜೇವರ್ಗಿ ತಾಲೂಕಿನಲ್ಲಿ ಪ್ರಮುಖವಾಗಿ ನಾಲ್ಕು ಸೇತುವೆಗಳ ನಿರ್ಮಾಣದ ಜತೆಗೆ ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಜೇವರ್ಗಿ ಶಾಸಕ ಡಾ| ಅಜಯಸಿಂಗ್‌ ತಿಳಿಸಿದರು. ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಕೋನಹಿಪ್ಪರಗಾ-ಸರಡಗಿ ಸೇತುವೆ ಪೂರ್ಣಗೊಂಡಿರುವುದು ಹಾಗೂ ನರಿಬೋಳ ಚಾಮನಾಳ ಸೇತುವೆಗೆ ಚಾಲನೆ ನೀಡಿರುವುದು ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ತಿಳಿಸಿದರು.

Advertisement

ಜೇವರ್ಗಿಯಲ್ಲಿ ಈಗಾಗಲೇ ಅತ್ಯಂತ ಎತ್ತರದ ರಾಷ್ಟ್ರಧ್ವಜ ಸ್ಥಂಭ ನಿರ್ಮಿಸಲಾಗಿದೆ. ಯಡ್ರಾಮಿ ಹೊಸ ತಾಲೂಕು ರಚನೆ ಪ್ರಗತಿಯಲ್ಲಿದೆ. 10 ಕೋಟಿ ರೂ. ಒದಗಿಸಲಾಗಿದೆ. ಜೇವರ್ಗಿ ಪಟ್ಟಣದಲ್ಲಿ 2.94 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್‌ ಭವನದ ನಿರ್ಮಾಣ ಕೈಗೊಳ್ಳಲಾಗಿದೆ. ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು, ತಿಂಗಳಲ್ಲಿ ಕಾಮಗಾರಿ  ರ್ಣಗೊಳ್ಳಲಿದೆ ಎಂದು ತಿಳಿಸಿದರು. ಜೇವರ್ಗಿ ಪಟ್ಟಣಕ್ಕೆ ಸೋಮವಾರ ಮಧ್ಯಾಹ್ನ 3:20ಕ್ಕೆ ರಾಹುಲ್‌ಗಾಂಧಿ ಅವರು ಆಗಮಿಸುವರು. ಒಂದು ತಾಸು ಅಲ್ಲಿಯೇ ಕಳೆದು ಬೃಹತ್‌ ಸಮಾವೇಶದಲ್ಲಿ ಪಾಲ್ಗೊಳ್ಳುವರು. ಸುಮಾರು 40, 000 ಜನರು ಭಾಗವಹಿಸುವ ನಿರೀಕ್ಷೆ ಇದೆ. ಜೇವರ್ಗಿ ಪಟ್ಟಣದ ರಸ್ತೆ ವಿಭಜಕದಲ್ಲಿ ಸಿದ್ಧಪಡಿಸಿದ ಮರಗಳನ್ನು ಧರ್ಮಸಿಂಗ್‌ ಫೌಂಡೇಷನ್‌ನಡಿ ಹಚ್ಚಲಾಗಿದೆ. 

ಇದು ಸರ್ಕಾರದಿಂದ ಹಾಗೂ ನನ್ನ ಶಾಸಕರ ಅನುದಾನದಿಂದ ಆಗಲಿ ಅಲ್ಲ ಎಂದು ಸ್ಪಷ್ಠಪಡಿಸಿದರು. ಜೇವರ್ಗಿ ಪಟ್ಟಣವು ಮರಗಳಿಂದಾಗಿ ಸಿಂಗಾರಗೊಂಡಿದೆ. ಇಂತಹ ಗಿಡಗಳನ್ನು ನಾನು ಬೆಂಗಳೂರಿನ ವಿಧಾನಸೌಧದ ಮುಂದೆ ನೋಡಿದ್ದೆ. ಅದೇ ರೀತಿಯ ಗಿಡಗಳನ್ನು ಇಲ್ಲಿ ವೈಯಕ್ತಿಕವಾಗಿ ಬೆಳೆಸಿದ್ದೇನೆ. ಅವುಗಳ ನಿರ್ವಹಣೆಯನ್ನೂ ಫೌಂಡೇಶನ್‌ ಮಾಡಲಿದೆ.  ವಿಧಾನಸೌಧದ ಮುಂದಿನ ಗಿಡಗಳಿಗೆ ಇರುವ ಲೈಟಿಂಗ್‌ ವ್ಯವಸ್ಥೆಯನ್ನೂ ರಸ್ತೆ ವಿಭಜಕದ ಗಿಡಗಳಿಗೂ ಮಾಡಲಾಗುವುದು. ಈ ಕುರಿತಾದ 1.8 ಕೋಟಿ ರೂ. ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದೆ. ಯಡ್ರಾಮಿಯಲ್ಲಿಯೂ ಇಂತಹ ಗಿಡಗಳನ್ನು ಬೆಳೆಸಲಾಗಿದೆ. ಆರಂಭದಲ್ಲಿ ಅವು ಒಣಗಿದಂತೆ ಕಂಡು ಬಂದರು ನಂತರ ಅವು ಚಿಗುರೊಡೆಯುತ್ತವೆ ಎಂದು ಅವರು ತಿಳಿಸಿದರು. ಮಾಜಿ ಪ್ರಧಾನಿ ದಿ| ಇಂದಿರಾಗಾಂಧಿ ಅವರು ಕಳೆದ 40 ವರ್ಷಗಳ ಹಿಂದೆ ಭೇಟಿ ನೀಡಿದ ಜಿಲ್ಲೆಯ ಜೇವರ್ಗಿ ಪಟ್ಟಣಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಸೋಮವಾರ ಆಗಮಿಸುತ್ತಿರುವುದು ಕ್ಷೇತ್ರದ ಸೌಭಾಗ್ಯವಾಗಿದೆ ಎಂದು ಶಾಸಕ ಡಾ| ಅಜಯಸಿಂಗ್‌ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಪ್ರಚಾರ ಸಮಿತಿ ಅಧ್ಯಕ್ಷ ಜಗನ್ನಾಥ ಗೋ ಧಿ, ಮುಖಂಡರಾದ ಭೀಮರಾವ ಟಿ.ಟಿ. ದೇವೆಂದ್ರಪ್ಪ ಮರತೂರ, ಶೌಕತ್‌ ಅಲಿ ಆಲೂರ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next