Advertisement
ಎಐಸಿಸಿ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಹೈದ್ರಾಬಾದ್ ಕರ್ನಾಟಕ ಭಾಗದ ಮೂಲಕ ಪ್ರವೇಶಿಸಿ ಜನಾಶೀರ್ವಾದ ಆರಂಭಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ತೀವ್ರ ಸಂಚಲನ ಮೂಡಿದೆ. ಹೀಗಾಗಿ ರಾಹುಲ್ ಸ್ವಾಗತಕ್ಕೆ ಕಾತರದಿಂದ ಎದುರು ನೋಡುವಂತಾಗಿದೆ.
ಇದೇ ನೂತನ ವಿದ್ಯಾಲಯ ಮೈದಾನದಲ್ಲಿ 2009ರಲ್ಲಿ ರಾಹುಲ್ ಗಾಂಧಿ ಅವರು ಹೈದ್ರಾಬಾದ್ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಸಂವಿಧಾನ 371ನೇ (ಜೆ) ವಿಧಿ ಜಾರಿ ಮಾಡುವುದಾಗಿ ಹೇಳಿದ್ದರು. ಅವರ ನಡೆಯಂತೆ ಮುಂದಿನ ದಿನಗಳಲ್ಲಿ ಸಂವಿಧಾನ 371ನೇ(ಜೆ) ವಿಧಿ ಜಾರಿಗೆ ಬಂತು. ಈಗ ಏನು ಭರವಸೆ ಕೊಡ್ತಾರೆ ಎಂಬುದನ್ನು ಜನ ಕಾತರದಿಂದ ಕಾಯುತ್ತಿದ್ದಾರೆ. ಈ ಹಿಂದೆ 1978-79ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಜೇವರ್ಗಿಗೆ ಆಗಮಿಸಿದ್ದರು. ಆಗ ತಮ್ಮ ತಂದೆ ಧರ್ಮಸಿಂಗ್ ಅವರು ಪ್ರಥಮ ಸಲ ಶಾಸಕರಾಗಿದ್ದರು. 40 ವರ್ಷಗಳ ನಂತರ ಈಗ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಆಗಮಿಸುತ್ತಿದ್ದಾರೆ. ತಾವೂ ಈಗ ಪ್ರಥಮ ಸಲ ಶಾಸಕರಾಗಿದ್ದು, ಆವಾಗ ಇಂದಿರಾಗಾಂಧಿ ಅವರು ಜೇವರ್ಗಿಗೆ ಬಂದ ನಂತರ ರಾಜಕೀಯದಲ್ಲಿ ಮತ್ತೆ ಅಧಿಕಾರ ಗದ್ದುಗೆ ಏರಿದರು. ಈಗಲೂ ರಾಹುಲ್ ಗಾಂಧಿ ಅವರು ಭವಿಷ್ಯದ ನಾಯಕರಾಗಲಿದ್ದಾರೆ ಎಂದು ಜೇವರ್ಗಿ ಶಾಸಕ ಡಾ| ಅಜಯಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Related Articles
Advertisement
ಸೋಮವಾರ ರಾಹುಲ್ಗಾಂಧಿ ಅವರು ಭೇಟಿ ನೀಡುವ ಮೂಲಕ ಗತವೈಭವ ನೆನಪಿಸುತ್ತಿದ್ದಾರೆ ಎಂದು ಶಾಸಕರು ವಿವರಿಸಿದರು. ರಾಹುಲ್ ಗಾಂಧಿ ಅವರ ಬಹಿರಂಗ ಸಭೆಗೆ 40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಶಾಸಕ ಡಾ| ಅಜಯಸಿಂಗ್ ಧರ್ಮಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.