Advertisement

ಸೇತುವೆ ನಿರ್ಮಾಣದ ಕನಸು-ನನಸು

10:00 AM Mar 01, 2018 | Team Udayavani |

ಜೇವರ್ಗಿ: ಹಲವು ವರ್ಷಗಳ ಮಹತ್ವದ ಬೇಡಿಕೆಯಾದ ಕೋನಾಹಿಪ್ಪರಗಿ-ಸರಡಗಿ ಮಧ್ಯೆ ಭೀಮಾನದಿಗೆ ಅಡ್ಡಲಾಗಿ
ನಿರ್ಮಿಸಲಾಗುತ್ತಿರುವ ಸೇತುವೆ ನಿರ್ಮಾಣದ ಕನಸು ಶೀಘ್ರದಲ್ಲಿ ನನಸಾಗಲಿದೆ.

Advertisement

ಕಳೆದ ಎರಡು ದಶಕಗಳ ಬಳಿಕ ತಾಲೂಕಿನ ಕೋಳಕೂರ ಜಿಪಂ ವ್ಯಾಪ್ತಿಯ ಕೂಡಿ, ಕೋಬಾಳ, ಬಣಮಿ, ಮಂದ್ರವಾಡ,
ಕೋನಾಹಿಪ್ಪರಗಿ, ಹಂದನೂರ, ರಾಸಣಗಿ, ಗೌನಳ್ಳಿ, ಜನಿವಾರ, ಹರವಾಳ ಸೇರಿದಂತೆ ಹತ್ತಾರು ಗ್ರಾಮಗಳ ಜನರ ಬೇಡಿಕೆ ಕೈಗೂಡಿದೆ. ಕೆಆರ್‌ಡಿಸಿಎಲ್‌ ವತಿಯಿಂದ 54 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದ್ದು, ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಮಾರ್ಚ್‌ ಅಂತ್ಯದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಇದರಿಂದ
ಈ ಭಾಗದ ಜನರಿಗೆ ಕಡಿಮೆ ಸಮಯದಲ್ಲಿ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಸಂಚರಿಸಲು 20 ಕಿಮೀ ಅಂತರ ಕಡಿಮೆಯಾಗಲಿದೆ. 

ಶಾಸಕ ಡಾ| ಅಜಯಸಿಂಗ್‌ ಶಾಸಕರಾಗಿ ಆಯ್ಕೆಯಾದ ನಂತರ ಈ ಭಾಗದ ಮುಖಂಡರು ಹಾಗೂ ರೈತರನ್ನು
ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಒತ್ತಡ ಕೂಡ ಹಾಕಲಾಗಿತ್ತು. ಅದರ
ಪ್ರತಿಫಲವಾಗಿ 2016ರಿಂದ ಕಾಮಗಾರಿಗೆ ಚಾಲನೆ ಸಿಕ್ಕಿದೆ. ರಸ್ತೆ ಹೊರತುಪಡಿಸಿ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. 

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಡಾ| ಅಜಯಸಿಂಗ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಸೇತುವೆ
ಉದ್ಘಾಟನೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಎಂದು ಸೂಚಿಸಿದರು.

Advertisement

ಮುಖಂಡರಾದ ರಾಜಶೇಖರ ಸೀರಿ, ರುಕುಂ ಪಟೇಲ್‌ ಕೂಡಿ, ಮಹಿಬೂಬ್‌ ಪಟೇಲ್‌ ಕೋಬಾಳ, ಸುಭಾಶಗೌಡ
ಕೋನಾಹಿಪ್ಪರಗಾ, ಮೀರಸಾಬ್‌ ಕೂಡಿ, ನಿಂಗನಗೌಡ ಮಾಲಿಪಾಟೀಲ, ಕಾಶಿರಾಯಗೌಡ ಯಲಗೋಡ, ಚಂದ್ರಶೇಖರ ಹರನಾಳ, ನೀಲಕಂಠ ಅವುಂಟಿ, ರವಿ ಕೋಳಕೂರ, ಪ್ರಕಾಶ ಹಳಿಮನಿ, ಮೈಲಾರಿ ಬಣಮಿ, ಬಾಬು
ಪೂಜಾರಿ ಕೋಳಕೂರ, ಮರೆಪ್ಪ ಸರಡಗಿ, ತಿಪ್ಪಣ್ಣ ಕನಕ ಇದ್ದರು. 

ವಿಜಯಕುಮಾರ ಎಸ್‌.ಕಲ್ಲಾ

Advertisement

Udayavani is now on Telegram. Click here to join our channel and stay updated with the latest news.

Next