Advertisement

Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ

02:14 AM Oct 07, 2024 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಭಾರತದಲ್ಲಿ “ಡಿಜಿಟಲ್‌ ಬಂಧನ’ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಜನರಿಗೆ ತಲೆನೋವಾಗಿದೆ. ಇದೊಂದು ದೊಡ್ಡ ಹಗರಣ, ಬಲಿ ಬೀಳಬೇಡಿ ಎಂದು ಭಾರ ತೀಯ ಸೈಬರ್‌ ಅಪರಾಧ ಸಮ ನ್ವಯ ಕೇಂದ್ರ (14ಸಿ) ಎಚ್ಚರಿಕೆ ಸಂದೇಶ ಹೊರಡಿಸಿದೆ. ಸಿಬಿಐ, ಪೊಲೀಸ್‌, ಸುಂಕ, ಇಡಿ, ನ್ಯಾಯಾ ಧೀಶರು ವೀಡಿಯೋ ಕರೆಗಳನ್ನು ಮಾಡಿ ಜನರನ್ನು ಬಂಧಿಸುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.

Advertisement

ವಾಟ್ಸ್‌ಆ್ಯಪ್‌, ಸ್ಕೈಪ್‌ನಂತಹ ತಾಣಗಳು ಹಿಂದೆಯೇ ತಾವು ಜನರ ಸುರಕ್ಷೆ ಗಾಗಿ ಸರಕಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿವೆ ಎಂದು ಹೇಳ ಲಾ  ಗಿದೆ. ಒಂದು ವೇಳೆ ನಿಮಗೆ ವೀಡಿಯೋ ಕರೆಗಳು, ಸಂದೇಶಗಳು ಬಂದರೆ 1930 ಸಹಾಯ ವಾಣಿಗೆ ಕರೆ ಮಾಡಿ ಅಥವಾ www.cyber-crime.gov.in ವೆಬ್‌ಸೈಟ್‌ನಲ್ಲಿ ವರದಿ ಮಾಡಿ ಎಂದು ತಿಳಿಸಲಾಗಿದೆ. “ಡಿಜಿಟಲ್‌ ಬಂಧನ’ದ ವಂಚಕರು ವೀಡಿಯೋ ಕರೆ ಮಾಡಿ, ನಿಮ್ಮ ಬಂಧುಗಳು ಅಥವಾ ನೀವೇ ತನಿಖೆಯ ವೇಳೆ ವಂಚನೆ ಮಾಡಿದ್ದು ಸಾಬೀತಾಗಿದೆ. ನಿಮ್ಮನ್ನು ಕೂಡಲೇ ಬಂಧಿಸಲಾಗು­ವುದು, ಈ ಹಿನ್ನೆಲೆಯಲ್ಲಿ ಹಣ ನೀಡಿ ಎಂದು ಹೇಳುತ್ತಾರೆ. ಅದಕ್ಕೆ ಹೆದರಬೇಡಿ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next