Advertisement

ಕಳೆದ ಬಾರಿಯಂತೆ ಈ ಬಾರಿ ನಿರೀಕ್ಷೆ ಹುಸಿ ಆಗದಿರಲಿ

10:59 AM Feb 01, 2021 | Team Udayavani |

ದೇವನಹಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಲೋಕಸಭೆಯಲ್ಲಿ ಬಜೆಟ್‌ ಮಂಡಿಸಲಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನಿರೀಕ್ಷೆಗಳು ಹೆಚ್ಚಿದ್ದು ಈ ಬಾರಿಯಾದರೂ ಸ್ಪಂದನೆ ಸಿಗುತ್ತಾ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.

Advertisement

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾದ ನದಿ ಜೋಡಣೆ ಯೋಜನೆ ಎದುರು ನೋಡುವಂತೆ ಆಗಿದೆ. ಬರದ ಜಿಲ್ಲೆಯಲ್ಲಿ ಯಾವುದೇ ಶಾಶ್ವತ ನದಿ, ನಾಲೆ ಇಲ್ಲ. ಆದರೂ, ಕೃಷಿಯೇ ಪ್ರಧಾನ ಕಸುಬಾಗಿದೆ. ಜಿಲ್ಲೆಗೆ ರಾಜ್ಯ ಸರ್ಕಾರ ರೂಪಿಸಿರುವ ಎತ್ತಿನಹೊಳೆ ಯೋಜನೆ, ಎಚ್‌.ಎನ್‌.ವ್ಯಾಲಿ ಯೋಜನೆಗಳು ಆಮೆಗತಿಯಲ್ಲಿ ಸಾಗಿವೆ.

ಹೀಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರರೂಪಿಸಿರುವ ನೀರಾವರಿ ಯೋಜನೆಗಳಿಗೆ ಹಣಕಾಸು ನೆರವು ಕೊಡುತ್ತದೆಯೇ ಎಂಬುವುದನ್ನು ಕಾದು  ನೋಡಬೇಕಿದೆ. ಅಲ್ಲದೇ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಕೈಗಾರಿಕೆಗಳಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು ಕನಿಷ್ಠ ಬೆಂಗಳೂರಿಗೆ 2 ರೈಲು ಮಾತ್ರ ಸಂಚರಿಸುತ್ತಿವೆ. ಇನ್ನೂ 3-4 ರೈಲುಗಳ ಸಂಚಾರ ಕಲ್ಪಿಸಿಕೊಡಬೇಕಿದೆ.

ಇದನ್ನೂ ಓದಿ:ಪಾತ್ರಗಳ ಸುತ್ತ ದರ್ಶನ್‌ ಕಟೌಟ್: ಅಭಿಮಾನಿಗಳ ಹೊಸ ಪ್ರಯತ್ನ

ರಸ್ತೆ ಕಾಮಗಾರಿ ನನೆಗುದಿಗೆ: ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಹೆಚ್ಚು ಅಪಘಾತ ಸಂಭವಿಸಿ ಸಾವುನೋವುಗಳು ಹೆಚ್ಚಾಗಿದೆ. ನಗರದಲ್ಲಿ ಸಂಚಾರ ಸಮಸ್ಯೆ ಮಿತಿ ಮೀರಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬೈಪಾಸ್‌ ರಸ್ತೆಯನ್ನು ದಾಬಸ್‌ ಪೇಟೆಯಿಂದ ಹೊಸೂರು ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮ ಗಾರಿ ನನೆಗುದಿಗೆ ಬಿದ್ದಿದೆ. ಜಿಎಸ್‌ಟಿ ಹೆಚ್ಚಳದಿಂದ ಪ್ರತಿ ವಸ್ತುವಿಗೂ ಹೆಚ್ಚಿನ  ತೆರಿಗೆ ಕಟ್ಟುವಂತಾಗಿದೆ. ಇದರಿಂದಾಗಿ ವರ್ತಕರಿಗೆ ಸಾಕಷ್ಟು ಅನಾನುಕೂಲ ಆಗುತ್ತಿದೆ.

Advertisement

ಆನ್‌ಲೈನ್‌ ಶಾಪಿಂಗ್‌ ನಿಂದಾಗಿ ಸ್ಥಳೀಯವಾಗಿ ವ್ಯಾಪಾರ ವಹಿವಾಟುಸ್ಥಗಿತವಾಗುತ್ತಿದೆ. ಹೀಗಾಗಿ ಕೂಡಲೇ ಜಿಎಸ್‌ಟಿ ರದ್ದುಗೊಳಿಸಬೇಕು ಎಂದು ವರ್ತಕರು ಆಗ್ರಹಿಸಿದ್ದಾರೆ.  ಜಿಎಸ್‌ಟಿ ಹೆಚ್ಚಳ ಮುಂದೂಡಿ, ಸೀರೆ ಮಾರಾಟಕ್ಕೆಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ, ನೇಕಾರರಿಗೆ  ಅನುಕೂಲವಾಗಲಿದೆ.
ಕೇವಲ ಅರ್ಧ ಪ್ರಮಾಣದಲ್ಲಿ ರಸ್ತೆ ಕಾಮಗಾರಿ ನಡೆದು ಸ್ಥಗಿತಗೊಂಡಿದೆ. ಈ ಬಜೆಟ್‌ನಲ್ಲಾದರೂ ಅನು ದಾನ ನೀಡಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವುದೇ ಎಂಬ ನಿರೀಕ್ಷೆ ಕಾಡುತ್ತಿದೆ. ಕೇಂದ್ರ ಸರ್ಕಾರ ಮಂಡಿಸಲಿರುವ ಆಯವ್ಯಯ  ದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲಮನ್ನಾ, ರೈತರಿಗೆ ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸಲು, ಸ್ವಾಮಿನಾಥನ್‌ ವರದಿ ಬಜೆಟ್‌ನಲ್ಲಿ ವ್ಯಕ್ತವಾಗಬೇಕು ಎಂಬುದು ಜಿಲ್ಲೆ ರೈತರ ಆಗ್ರಹವಾಗಿದೆ.

ಲೋಪದೋಷಗಳಿಗೆ ಕಡಿವಾಣ ಹಾಕಿ: ಪೆಟ್ರೋಲ್‌, ಡೀಸೆಲ್‌ಗ‌ಳ ಬೆಲೆ ಏರಿಕೆ ನಿಯಂತ್ರಣ ಮಾಡಿ, ಆದಾಯ ತೆರಿಗೆ ಮೇಲಿನ ತೆರಿಗೆ, ಮಿತಿ ಏರಿಕೆ, ಕೃಷಿ, ತೋಟಗಾರಿಕೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು.ಈ ಹಿಂದಿನ ನಿರೀಕ್ಷೆಗಳೆಲ್ಲಾ ಹುಸಿ: ಕಳೆದ ಜುಲೈನಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ಯೋಜನೆ ಮಂಜೂರಾಗಿಲ್ಲ. ಈ ಬಜೆಟ್‌ನಲ್ಲಾದರೂಯೋಜನೆ ಜಾರಿಯಾಗಬೇಕೆಂದು ಆಗ್ರಹಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಆಗಿರುವು ¨ ‌ರಿಂದ ಸಾಕಷ್ಟು ಅನುದಾನ ಬರುವಂತೆ ಆಗ   ಬೇಕು. ದೇವನಹಳ್ಳಿ ರೈಲು ನಿಲ್ದಾಣ ಮೇಲ್ದರ್ಜೆಗೇರಿಸಿ ಮೂಲಭೂತ ಸೌಲಭ್ಯ ನೀಡಬೇಕು. ರೇಷ್ಮೆ

ಬೆಳೆಗಾರರು ಹೆಚ್ಚು ಇದ್ದು ಆಮದು ಸುಂಕ ಏರಿಸಿದರೆ ಅನುಕೂಲವಾಗುವುದು. ಕೇಂದ್ರ ಸರ್ಕಾರದ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಲೇ ಬಂದಿದೆ. ಇದೀಗ ಈ ಬಜೆಟ್‌ನಲ್ಲಿಯಾದರೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಮಾಡಿರುವ ಸಾಲ ಮನ್ನಾ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಎಸ್‌.ಮಹೇಶ್

Advertisement

Udayavani is now on Telegram. Click here to join our channel and stay updated with the latest news.

Next