Advertisement

2021ರ ಆರಂಭದವರೆಗೂ ಕೋವಿಡ್ ಲಸಿಕೆಗಳನ್ನು ನಿರೀಕ್ಷಿಸಬೇಡಿ: WHO

12:39 PM Jul 23, 2020 | Mithun PG |

ಜಿನಿವಾ: ಜಗತ್ತಿನಲ್ಲಿ ಕೋವಿಡ್ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧಕರು ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ, ಹಲವೆಡೆ ಕೊನೆಯ ಹಂತದ ಪ್ರಯೋಗಗಳು ನಡೆಯುತ್ತಿದ್ದು, ಆದರೆ ಅವುಗಳ ಮೊದಲ ಬಳಕೆಯನ್ನು 2021ರ ಆರಂಭದವರೆಗೆ ನಿರೀಕ್ಷಿಸಲಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಜ್ಞರು ಬುಧವಾರ ಹೇಳಿದ್ದಾರೆ.

Advertisement

ಜಗತ್ತಿನಲ್ಲಿ ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಪ್ರತಿದಿನ ದಾಖಲೆಯ ಮಟ್ಟದಲ್ಲಿ ಸೊಂಕಿತರು ಕಂಡುಬರುತ್ತಿದ್ದಾರೆ.  ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ನ್ಯಾಯಯುತ ಲಸಿಕೆ ವಿತರಣೆ ಮಾಡಬೇಕೆಂದು ಪಣತೊಟ್ಟಿದೆ. ಏತನ್ಯಧ್ಯೆ ವೈರಸ್ ಹರಡುವುದನ್ನು ತಡೆಗಟ್ಟುವುದು ಕೂಡ ನಮ್ಮ ಮುಖ್ಯ ಕರ್ತವ್ಯ ಎಂದು WHO ತುರ್ತು ಕಾರ್ಯಕ್ರಮದ ಮುಖ್ಯಸ್ಥ ಮೈಕ್ ರಯಾನ್ ತಿಳಿಸಿದ್ದಾರೆ.

ಲಸಿಕೆ ತಯಾರಿಕೆಯಲ್ಲಿ ನಾವು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದೇವೆ, ಹಲವಾರು ಲಸಿಕೆ ಸಂಶೋಧನೆಗಳು ಈಗ 3ನೇ ಹಂತದ ಪ್ರಯೋಗಗಳಲ್ಲಿವೆ ಮತ್ತು ಯಾವುದೂ ವಿಫಲವಾಗಿಲ್ಲ, ಇಲ್ಲಿಯವರೆಗೆ, ಸುರಕ್ಷತೆ ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲಸಿಕೆಗೆ ಪ್ರಾಧ್ಯಾನ್ಯತೆ ನೀಡಲಾಗಿದೆ. 2021ರಲ್ಲಿ ಮೊದಲ ಹಂತದ ಲಸಿಕೆಯನ್ನು ನಿರೀಕ್ಷಿಸಬಹುದು ಎಂದು ರಯಾನ್ ತಿಳಿಸಿದ್ದಾರೆ.

Advertisement

ಈ ಸಾಂಕ್ರಾಮಿಕ ರೋಗದ ಲಸಿಕೆಗಳು ಕೇವಲ ಶ್ರೀಮಂತ-ಬಡವರಿಗೆ ಮಾತ್ರ ಲಭ್ಯವಿರುವುದಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ  ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳು ಶೀಘ್ರದಲ್ಲಿ ಸಿಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next