ಕಾಬೂಲ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಆಂತರಿಕ ಜಗಳದ ವಿಚಾರದಲ್ಲಿ ಅಫ್ಘಾನಿಸ್ತಾನವನ್ನು ಎಳೆದು ತರಬೇಡಿ ಎಂದು ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕಝೈ ಸಿಎನ್ ಎನ್ ನ್ಯೂಸ್ 18ಗೆ ತಿಳಿಸಿದ್ದು, ಶೇರ್ ಮೊಹಮ್ಮದ್ ಅಫ್ಘಾನಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವರಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ : ಮಾಡೆಲ್ ಸೋನಿಯಾ ಸೇರಿ ಮೂವರ ಬಂಧನ
ಆಂತರಿಕ ಕದನದ ವಿಚಾರದಲ್ಲಿ ಉಭಯ ದೇಶಗಳು ಅಫ್ಘಾನಿಸ್ತಾನದ ಹೆಸರನ್ನು ಎಳೆದು ತರಲಾರವು ಎಂಬ ಭರವಸೆ ಹೊಂದಿದ್ದೇವೆ. ಭಾರತ ಮತ್ತು ಪಾಕಿಸ್ತಾನ ದೀರ್ಘವಾದ ಗಡಿಯನ್ನು ಹಂಚಿಕೊಂಡಿವೆ. ಅವರು ಗಡಿಯಲ್ಲಿ ಹೋರಾಟ ನಡೆಸಲಿ. ಆದರೆ ಈ ವಿಚಾರದಲ್ಲಿ ಅಫ್ಘಾನಿಸ್ತಾನವನ್ನು ಬಳಸಿಕೊಳ್ಳುವುದು ಬೇಡ. ಇದಕ್ಕಾಗಿ ಯಾವುದೇ ದೇಶವು ನಮ್ಮ ಭೂಮಿಯನ್ನು ಬಳಸಿಕೊಳ್ಳಲು ಬಿಡುವುದಿಲ್ಲ ಎಂದು ಶೇರ್ ಮೊಹಮ್ಮದ್ ಸಿಎನ್ ಎನ್-ನ್ಯೂಸ್ 18ಗೆ ತಿಳಿಸಿರುವುದಾಗಿ ವರದಿ ಹೇಳಿದೆ.
ಎಲ್ಲಾ ನೆರೆಯ ದೇಶಗಳ ಜೊತೆ ಉತ್ತಮ ಬಾಂಧವ್ಯ ಹೊಂದಲು ಬಯಸಿರುವುದಾಗಿ ತಾಲಿಬಾನ್ ಹೇಳಿಕೊಂಡಿದೆ. ತಾಲಿಬಾನ್ ಭಾರತದ ವಿರುದ್ಧ ಹಗೆತನ ಸಾಧಿಸಬಹುದು ಎಂಬ ಭಯವಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶೇರ್ ಮೊಹಮ್ಮದ್, ಅಂತಹ ಯಾವುದೇ ಉದ್ದೇಶ ಇಲ್ಲ. ಇಂತಹ ಸುದ್ದಿಗಳನ್ನು ಮಾಧ್ಯಮಗಳೇ ತಪ್ಪಾಗಿ ವರದಿ ಮಾಡುತ್ತಿರುವುದಾಗಿ ಆರೋಪಿಸಿರುವುದಾಗಿ ವರದಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ಭಾರತ ಕೈಗೊಂಡಿರುವ ಯೋಜನೆಗಳ ಬಗ್ಗೆ ಯಾವುದೇ ತಕರಾರು ಇಲ್ಲ ಎಂದು ಇತ್ತೀಚೆಗಷ್ಟೇ ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ತಿಳಿಸಿದ್ದು, ಭಾರತ ಅಶ್ರಫ್ ಘನಿ ಸರ್ಕಾರಕ್ಕೆ ಭಾರತ ಬೆಂಬಲ ನೀಡಿರುವುದಕ್ಕೆ ತಾಲಿಬಾನ್ ವಿರೋಧ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.