Advertisement
ಆ ಮೂಲಕ ತಂತಮ್ಮ ಮಧ್ಯೆ ಒಂದು ಆರೋಗ್ಯಕರ ಅಂತರ ಬೆಳೆಸಿಕೊಳ್ಳುತ್ತಾರೆ. ಜೊತೆಗೆ ಇದ್ದವರಿಂದ ಏನೂ ಕೆಡುಕಾಡದಿರಲಿ ಎಂದು ಮೊದಲೇ ಯೋಚಿಸಿಯೇ, ಅಣ್ಣಾ, ಅಕ್ಕ, ಅಂಕಲ್ ಎಂದುಬಿಟ್ಟಿರುತ್ತಾರೆ. ಈ ಅಣ್ಣ, ಅಕ್ಕ, ಅಂಕಲ್ ಅನ್ನಿಸಿಕೊಂಡವರು ತಮಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂಬುದು ಹಲವರ ಗಾಢ ನಂಬಿಕೆ. ಇಲ್ಲಿ ಒಂದು ಪ್ರಶ್ನೆ: ಒಬ್ಬ ವ್ಯಕ್ತಿ ನಮಗೆ ಪ್ರೇಮಿ, ಅಣ್ಣ, ಅಂಕಲ್, ಮಗಳು, ತಂಗಿ, ಪ್ರಂಡು ಇವಿಷ್ಟೇ ಆಗಿಬಿಡಬೇಕಾ? ಇದ್ಯಾವುದೂ ಆಗದೆಯೇ ನಮ್ಮ ಆತ್ಮೀಯನಾಗಿ ಬಾಳಲು ಸಾಧ್ಯವಿಲ್ಲವಾ? ಖಂಡಿತ ಸಾಧ್ಯವಿದೆ. ಆದರೆ ಅಂಥದೊಂದು ಬಾಂಧವ್ಯ ಸೃಷ್ಟಿಗೆ ಹೆಚ್ಚಿನವರು ಅವಕಾಶವನ್ನೇ ಕೊಡುವುದಿಲ್ಲ. ಪರಿಚಯವೊಂದು ಬೆಳೆಯುತ್ತಲೇ ಪರಸ್ಪರ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ. ಹಾಗಂತ ಮೂರೇ ದಿನಕ್ಕೆ ಅವರ ಮುಂದೆ ಕೂತುಎಲ್ಲವನ್ನುಒದರಿಬಿಡಬಾರದು.ಅವಸರಕ್ಕೆಬಿದ್ದು ಅಣ್ಣಾ, ಅಂಕಲ್, ಅಕ್ಕಾ ಅನ್ನುತ್ತಾ ಅಂತರಂಗವನ್ನೆಲ್ಲಾತೆರೆದಿಡಲು ಹೋಗಬಾರದು. ಸ್ವಲ್ಪ ದಿನಕಾಯಬೇಕು. ಪರಿಚಯ ಗಾಢವಾಗುತ್ತಾ ಹೋದಂತೆ ನಮ್ಮ ಜೊತೆಗಿರುವ ವ್ಯಕ್ತಿಯ ಶಕ್ತಿ, ದೌರ್ಬಲ್ಯ ಮತ್ತು ಮಿತಿಗಳೂ ಅರ್ಥವಾಗುತ್ತವೆ. ಆನಂತರವೇ ಅವರಲ್ಲಿ ಗುಟ್ಟಿನ ವಿಚಾರ ಹೇಳಿಕೊಳ್ಳಬಹುದಾ, ಅವರ ಸಲಹೆ ಪಡೆಯಬಹುದಾ ಎಂಬ ಬಗ್ಗೆ ಯೋಚಿಸಬೇಕು.ಹೀಗೆ ಮಾಡದೆ ಅವಸರದ ಕೈಗೆ ಬುದ್ಧಿ ಕೊಟ್ಟು ಖಾಸಗಿ ವಿಷಯಗಳನ್ನೆಲ್ಲಾ ಹೇಳಿಕೊಂಡು ಬಿಟ್ಟರೆ, ಅದನ್ನು ಕೇಳಿಸಿಕೊಂಡವರು- “ಇದು ಸೀಕ್ರೆಟ್ಟೂ, ಯಾರಿಗೂ ಹೇಳಬೇಡಿ…’ ಅನ್ನುತ್ತಾ ಹತ್ತು ಜನಕ್ಕೆ ಸಾರಿಕೊಂಡು ಬಂದರೆ, ಅದರಿಂದ ನಮ್ಮ ನೆಮ್ಮದಿ ಮತ್ತಷ್ಟು ಹಾಳಾಗುವ ಸಂಭವವಿರುತ್ತದೆ, ನೆನಪಿರಲಿ.
Advertisement
ಅವಸರದ ಕೈಗೆ ಬುದ್ಧಿ ಕೊಡಬಾರದು…
07:13 PM Dec 08, 2020 | Suhan S |
Advertisement
Udayavani is now on Telegram. Click here to join our channel and stay updated with the latest news.