Advertisement

ಶಿಕ್ಷಣ ಕಲಿಕೆಯ ಬಗ್ಗೆ ಉದಾಸೀನ ಬೇಡ. ಕಂಬದ ರಂಗಯ್ಯ

08:43 PM Nov 16, 2021 | Team Udayavani |

ಕೊರಟಗೆರೆ: ಮಕ್ಕಳೇ ಶಿಕ್ಷಣ ಕಡೆ ಗಮನ ಹರಿಸಿ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಬಗ್ಗೆ ಉದಾಸೀನ ಮಾಡದೇ ಹೆಚ್ಚು ಗಮನ ಹರಿಸಬೇಕು ಎಂದು ಸರಿಗಮಪ ಖ್ಯಾತಿಯ ಸೂರೇನಹಳ್ಳಿ ಕಂಬದರಂಗಯ್ಯ ಕರೆ ನೀಡಿದರು.

Advertisement

ತೋವಿನಕೆರೆಯ ಚಂದ್ರನಾಥ ಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಹಳ್ಳಿಸಿರಿ ಮತ್ತು ಶ್ರಮಿಕ ಸಿರಿಸಂಘಗಳ ವತಿಯಿಂದ ಡಿ ಎಸ್ ಜಿ ಪಾಳ್ಯದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಗೀತಾರವರನ್ನು ಸನ್ಮಾನಿಸಿ ಮಾತನಾಡಿದರು.ತಮ್ಮ ಶಾಲಾ ದಿನದಲ್ಲಿ ಶಿಕ್ಷಕ ದಿವಂಗತ ವೆಂಕಟೇಶ್ ಮೂರ್ತಿಯವರು ಪದ್ಯವನ್ನು, ಸಂಗೀತವನ್ನು ಚೆನ್ನಾಗಿ ಹಾಡುತ್ತೇನೆ ಎಂದು ಹಲವಾರು ಸಲ ವಿವಿಧ ಸ್ವರಗಳಲ್ಲಿ ಹೇಳಿಸುತ್ತಿದ್ದರು ಎಂದು ಸ್ಮರಿಸಿದರು.

ನಾದ ಬ್ರಹ್ಮ ಹಂಸಲೇಖರವರ ಪರಿಚಯದ ನಂತರನನ್ನನ್ನು ಪ್ರತಿ ಹಂತದಲ್ಲೂ ತಿದ್ದಿ ತೀಡಿ ಸಂಗೀತ ಕ್ಷೇತ್ರದಲ್ಲಿ ಹೆಸರು ಗಳಿಸಲು ಅವಕಾಶ ನೀಡಿದ್ದಾರೆ. ಹಂಸಲೇಖರವರ ಮಾರ್ಗದರ್ಶನ ಇಲ್ಲದಿದ್ದರೆ ನನ್ನ ಹಣೆ ಬರಹ ಬದಲಾಗಲು ಸಾಧ್ಯವಾಗುತ್ತೀರಲಿಲ್ಲ ಎಂದು ಅಭಿಪ್ರಾಯ ಪಟ್ಟರು.

ತಾವು ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ನೋವುಗಳನ್ನು ಹೇಳಿಕೊಂಡು ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ಹಂತದಲ್ಲಿ ಮಾರ್ಗದರ್ಶನ ನೀಡಿ ಉತ್ತಮ ಶಿಕ್ಷಣ ಪಡೆಯುವಂತೆ ಮಾಡಬೇಕು.

ಇದನ್ನೂ ಓದಿ:ಪುನೀತ್‌ ಹೆಸರಲ್ಲಿ ಕಲಾವಿದರ ತರಬೇತಿ ಕೇಂದ್ರ ಸ್ಥಾಪಿಸಲು: ಡಿ.ಕೆ. ಶಿವಕುಮಾರ್‌ ಆಗ್ರಹ

Advertisement

ಮಕ್ಕಳಿಗೆ ಇದರಿಂದ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅದ್ಯಕ್ಷೆ ಹೆಚ್.ಜಿ.ಲಕ್ಷ್ಮಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕ ಟಿ.ಎಅ್ ಸಚ್ಚಿದಾನಂದ, ಸಿ ಆರ್ ಪಿ. ಹರ್ಷ, ಟಿ.ಎಲ್ ಸಿದ್ದಗಂಗಣ್ಣ,ಮಂಜಮ್ಮ ಜಿ.ಎಲ್ ಸುನೀತಾ , ಒಕ್ಕೂಟದ ಅಧ್ಯಕ್ಷೆ ಕೆಂಪಕ್ಕ,ಸದಸ್ಯ ಜಾಟಣ್ಣ, ಮುಖಂಡ ಟಿ.ಡಿ.ಪ್ರಸನ್ನಕುಮಾರ್, ಹೆಚ್.ಜಿ. ಪದ್ಮರಾಜ್, ಜೈನ ಸಂಘದ ಬಾಬು,ಶಿಕ್ಷಕರುಗಳಾದ ಕಾಂತಚಾರ್ಯ, ಮಂಗಳಮ್ಮ, ಚಂದ್ರಕಲಾ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next