Advertisement

ಕೋವಿಡ್‌ 19 ಬಗ್ಗೆ ಉದಾಸೀನ ಬೇಡ‌

07:01 AM May 19, 2020 | Lakshmi GovindaRaj |

ನಂಜನಗೂಡು: ಕೋವಿಡ್‌ 19 ಕುರಿತು ಯಾವುದೇ ಕಾರಣಕ್ಕೂ ಉದಾಸೀನ ಮಾಡಬೇಡಿ. ಸದಾ ಎಚ್ಚರಿಕೆ ಯಿಂದ ಜೀವನ ನಡೆಸಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರೀದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Advertisement

ನಗರದ ಶ್ರೀಕಂಠೇಶ್ವರನ  ಸನ್ನಿಧಿಯಲ್ಲಿ ಸೋಮವಾರ ಮೈಸೂರು ನಾಗರಿಕ ವೇದಿಕೆಯಿಂದ ಅಗತ್ಯ ವಸ್ತುಗಳ ಕಿಟ್‌ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್‌ 19 ಮುಕ್ತವಾಗಿದೆ ಎಂದು ಉದಾಸೀನ ಮಾಡಬಾರದು. ನಮಗೆ ಮುಖ್ಯವಾಗಿರುವುದು  ಹಣವಲ್ಲ, ಜೀವ ಎಂಬ ಪಾಠವನ್ನು ಕೋವಿಡ್‌ 19 ಕಲಿಸಿದೆ. ಉಳ್ಳವರು ಬಡವರಿಗೆ ನೆರವು ನೀಡಬೇಕು.

ಇದೇ ನಮ್ಮ  ಸಂಸ್ಕೃತಿ ಎಂದರು. ತಾಲೂಕಿನಲ್ಲಿ ಕೋವಿಡ್‌ 19 ತಡೆಗೆ ಶ್ರಮಿಸಿದ ತಹಶೀಲ್ದಾರ್‌ ಮಹೇಶ ಕುಮಾರ, ನಗರ ಆಯುಕ್ತ ಕರಿಬಸವಯ್ಯ, ವೃತ್ತ ನೀರಿಕ್ಷಕ ರಾಜಶೇಖರ್‌ ಅವರನ್ನು ಗೌರವಿಸಲಾಯಿತು. ಶಾಸಕ ಹರ್ಷವರ್ಧನ, ನಾಗರಿಕ ವೇದಿಕೆ ಸಂಚಾಲಕ ವಾಸುದೇವ ಭಟ್‌, ತಾಪಂ ಅಧ್ಯಕ್ಷ ಬಿ.ಎಸ್‌.ಮಹದೇವಪ್ಪ, ಸದಸ್ಯ ಶಿವಣ್ಣ, ನಗರಸಭಾ ಸದಸ್ಯರಾದ  ಮಹದೇವಪ್ರಸಾದ,

ಕಪಿಲೇಶ, ಮಹದೇವ ಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ, ಶ್ರೀನಿವಾಸ ರೆಡ್ಡಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಇಂಧನ ಬಾಬು, ಸದಸ್ಯರಾದ ಶ್ರೀಧರ್‌, ಗಿರೀಶ, ಶಶಿರೇಖಾ ಮುಖಂಡರಾದ ಯು.ಎನ್‌.ಪದ್ಮನಾಭ ರಾವ್‌, ಬೋಮ್ಮಾಯಿ, ಕುಂಬರಳ್ಳಿ ಸುಬ್ಬಣ್ಣ, ಬಸವರಾಜು, ಜಿಪಂ ಸದಸ್ಯ ಸದಾನಂದ, ಮಾಜಿ ಸದಸ್ಯ ಸಿಂಧುವಳ್ಳಿ ಕೆಂಪ್ಪಣ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next