Advertisement
ಏಕೆಂದರೆ ಕೆಲವು ಗ್ರಾಪಂಗಳ ಪಿಡಿಒಗಳು, ಆಯಾ ಗ್ರಾಮಗಳ ಕುಡಿಯುವ ನೀರು ಪೂರೈಕೆ,ಬೀದಿದೀಪ ನಿರ್ವಹಣೆ ಹೊಣೆ ನಮ್ಮದಲ್ಲ. ನಮ್ಮದೇನಿದ್ದರೂ ಗ್ರಾಪಂನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಜವಾಬ್ದಾರಿ ಎಂಬಂತಿವೆ. ವಿದ್ಯುತ್ ಬಾಕಿ ವಿಷಯದಲ್ಲಿ ಬಹುತೇಕ ಗ್ರಾಪಂಗಳೂ ಹಾಗೆ ನಡೆದುಕೊಳ್ಳುತ್ತಿವೆ ಎಂಬುದು ಹೆಸ್ಕಾಂ ಅಧಿಕಾರಿಗಳ ಬೇಸರದ ಮಾತು.
Related Articles
Advertisement
ಪ್ರಭಾವಿಗಳಿಂದ ಫೋನ್ ಕರೆ: 2021ರ ಕಳೆದ ಸೆಪ್ಟಂಬರ್‌ನಲ್ಲಿ ಜಿಲ್ಲೆಯಾದ್ಯಂತ ಅಭಿಯಾನ ನಡೆಸಿ ವಿದ್ಯುತ್ ಬಾಕಿ ಕೊಡಲು ತಿಳಿಸಲಾಗಿತ್ತು. ಪ್ರತಿ ಗ್ರಾಪಂ ಮಟ್ಟದಲ್ಲೂ ಕುರಿತು ಹೆಸ್ಕಾಂನಿಂದ ಎಚ್ಚರಿಕೆಯ ನೋಟಿಸ್ ನೀಡಿದ್ದು, ಆಗ ಜಿಲ್ಲೆಯಾದ್ಯಂತ ಒಟ್ಟು 60ರಿಂದ 70 ಗ್ರಾಪಂಗಳು ಒಟ್ಟು 11 ಕೋಟಿಯಷ್ಟು ಬಾಕಿ ಪಾವತಿಸಿದ್ದವು. ಅಂದಿನಿಂದ ಪ್ರತಿ ತಿಂಗಳು ಪ್ರತಿಯೊಂದು ಗ್ರಾಪಂಗೂ ಆಯಾ ತಿಂಗಳ ವಿದ್ಯುತ್ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲು ಸ್ವತಃ ಜಿಪಂ ಸಿಇಒ, ಆಯಾ ತಾಪಂ ಇಒಗಳಿಗೆ ಮಾಹಿತಿ ಪತ್ರ ಹಾಗೂ ಗ್ರಾಪಂ ಪಿಡಿಒಗಳಿಗೆ ನೋಟಿಸ್ ಕೂಡ ಕೊಡಲಾಗುತ್ತಿದೆ.
ಕೆಲವು ಗ್ರಾಪಂಗಳ ಪಿಡಿಒಗಳು ನಿಯಮಿತವಾಗಿ ವಿದ್ಯುತ್ ಬಾಕಿ ಪಾವತಿಸಿದರೆ, ಇನ್ನೂ ಕೆಲವು ಪಂಚಾಯಿತಿಗಳ ಪಿಡಿಒಗಳು ಬಾಕಿಯೇ ಪಾವತಿಸಲ್ಲ. ಅತ್ಯಧಿಕ ವಿದ್ಯುತ್ ಬಾಕಿ ಉಳಿಸಿಕೊಳ್ಳುವ ಗ್ರಾಪಂಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದಾಗ, ಆಯಾ ಕ್ಷೇತ್ರದ ಶಾಸಕರು, ಇಲ್ಲವೇ ಸಚಿವರಿಂದ ಕರೆ ಮಾಡಿಸಿ, ಒತ್ತಡ ಹಾಕುವ ಪ್ರಸಂಗಗಳೂ ನಡೆಯುತ್ತಿವೆ. ಇಂತಹ ವಿಷಯದಲ್ಲಿ ಇಂಧನ ಸಚಿವ ಸುನೀಲಕುಮಾರವರೆಗೂ ಕೆಲವರು ಫೋನ್ ಕರೆ ಮಾಡಿದ ಪ್ರಸಂಗ ನಡೆದಿವೆ ಎನ್ನಲಾಗಿದೆ.ಯಾವುದಕ್ಕೂ ಹೆಸ್ಕಾಂ ಮಾತ್ರ ಈ ಬಾರಿ ಜಗ್ಗುವ ಪ್ರಸಂಗ ಬರಲ್ಲ. ಬಾಕಿ ಕೊಡದ ಗ್ರಾಪಂ ವಿದ್ಯುತ್ ಸಂಪರ್ಕ ಯಾವುದೇ ಮುಲಾಜಿಲ್ಲದೇಕಡಿತಗೊಳ್ಳಲಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಶ್ರೀಶೈಲ ಕೆ. ಬಿರಾದಾರ