Advertisement

ಪ್ರತಿಯೊಬ್ಬ ದೇಶಭಕ್ತನ ದೇಣಿಗೆ ಸಲ್ಲಲಿ: ಮಲ್ಲಿಕಾರ್ಜುನ ಹಿಪ್ಪರಗಿ

04:09 PM Jan 16, 2021 | Nagendra Trasi |

ಮುದ್ದೇಬಿಹಾಳ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರ ರಾಷ್ಟ್ರ ಮಂದಿರ ಆಗಿರಲಿದೆ. ಅಲ್ಲಿ ನಡೆಯುತ್ತಿರುವುದು ರಾಷ್ಟ್ರಮಂದಿರದ ನಿರ್ಮಾಣ ಕಾರ್ಯ. ಇದಕ್ಕೆ ನಾಡಿನ ಪ್ರತಿಯೊಬ್ಬ ದೇಶಭಕ್ತನ ದೇಣಿಗೆ ಸಲ್ಲಬೇಕು ಎಂದು ಆರ್‌ಎಸ್‌ಎಸ್‌ನ ಕುಟುಂಬ ಪ್ರಬೋಧನ ಜಿಲ್ಲಾ ಸಂಚಾಲಕ ಬೌದ್ಧಿಕ ಪ್ರಮುಖ ಮಲ್ಲಿಕಾರ್ಜುನ ಹಿಪ್ಪರಗಿ ಹೇಳಿದರು.

Advertisement

ಪಟ್ಟಣದ ಶ್ರೀರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಅಡಿ ಶುಕ್ರವಾರ ಏರ್ಪಡಿಸಿದ್ದ ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಮನೆಮನೆ ಸಂಪರ್ಕ ಮೂಲಕ ನಿಧಿ ಸಮರ್ಪಣ ಅಭಿಯಾನದಲ್ಲಿ ಅವರು ಮಾತನಾಡಿದರು.

ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬನ ಸೇವೆ ಸಮರ್ಪಣೆಯಾಗಬೇಕು. ಪ್ರತಿ ಮನೆ, ಮಠ ಮಾನ್ಯಗಳ ಶರಣರು, ಸಂತರು ರಾಷ್ಟ್ರ ಮಂದಿರ ಪುನರುಜ್ಜೀವನ
ಮಾಡಬೇಕಿದೆ. ಈ ನಾಡು ರಾಮರಾಜ್ಯವಾದಾಗ ಮಂದಿರ ನಿರ್ಮಾಣಕ್ಕೆ ಅರ್ಥ ಬರುತ್ತದೆ. ನಮ್ಮ ಮಕ್ಕಳಿಗೆ ದೇಶದ ಸಂಸ್ಕೃತಿ, ಧರ್ಮಾಚರಣೆ ಕಲಿಸಬೇಕು. ಭಾರತದ ವಿಜಯದ ಇತಿಹಾಸ ಜಗತ್ತಿಗೆ ತೋರಿಸಬೇಕು. ಈ ಧಾರ್ಮಿಕ ಕಾರ್ಯವು ಪಕ್ಷಾತೀತವಾಗಿದೆ. ಯಾರು ಬೇಕಾದರೂ ನಿಧಿ ಸಮರ್ಪಿಸಲು ಅವಕಾಶವಿದೆ ಎಂದರು.

ವಿಜಯಪುರ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನದ ಅನ್ನದಾನಭಾರತಿ ಅಪ್ಪಣ್ಣ ಶ್ರೀ, ಕುಂಟೋಜಿ ಘನಮಠೇಶ್ವರ ತಪೋವನದ ವೀರಯ್ಯಶಾಸ್ತ್ರಿ ಮತ್ತಿತರರು ಮಾತನಾಡಿ, ಶ್ರೀರಾಮನ ಆದರ್ಶ ನಾವೆಲ್ಲ ಅಳವಡಿಸಿಕೊಳ್ಳಬೇಕು. ಭಾರತದ ಧರ್ಮ ಹಿಂದೂ ಧರ್ಮವಾಗಿದೆ. ನಮ್ಮಲ್ಲಿ ಬೇರೂರುತ್ತಿರುವ ಹಾಗೂ ಧರ್ಮಕ್ಕೆ ಧಕ್ಕೆ ತಂದೊಡ್ಡುತ್ತಿರುವ ಜಾತೀಯತೆಯ ಅಸ್ಪೃಶ್ಯತೆ ತೊಲಗಬೇಕು. ಎಲ್ಲ ಹಿಂದುಗಳು ಒಂದಾಗಬೇಕು ಎಂದರು.

ರೂಢಗಿಯ ಯಲ್ಲಾಲಿಂಗ ಶ್ರೀ, ಬನೋಶಿಯ ಮೌನೇಶ್ವರ ಶ್ರೀ, ಶರಣಮ್ಮತಾಯಿ, ಆರ್‌ಎಸ್‌ಎಸ್‌ ಪ್ರಮುಖ ಜಗನ್ನಾಥ ಗೌಳಿ ವೇದಿಕೆಯಲ್ಲಿದ್ದರು. ಗಣ್ಯರಾದ ಪ್ರಭು ಕಡಿ, ಮಲಕೇಂದ್ರಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ, ಚನ್ನಪ್ಪ ಕಂಠಿ, ಗಿರೀಶಗೌಡ ಪಾಟೀಲ, ಮಾಣಿಕಚಂದ ದಂಡಾವತಿ, ವಿಕ್ರಮ ಓಸ್ವಾಲ್‌, ಬಸಯ್ಯ ನಂದಿಕೇಶ್ವರಮಠ, ಡಾ| ವೀರೇಶ ಪಾಟೀಲ, ರಾಜಶೇಖರ ಹೂಳಿ, ಪುನೀತ ಹಿಪ್ಪರಗಿ, ಸುನೀಲ ಇಲ್ಲೂರ, ದೇವೇಂದ್ರ ವಾಲಿಕಾರ, ಸಿ.ಎಸ್‌. ರಾಜಪುರೋಹಿತ, ಜೋಯಾರಾಮ್‌ ಸಾಳುಂಕೆ, ಜಗದೀಶ ವೈಷ್ಣವ, ಗೋಪಾಲ ಪ್ರಜಾಪತಿ, ಪ್ರಭು ನಂದೆಪ್ಪನವರ, ಲಕ್ಷ್ಮಣ ಬಿಜೂರ, ಅನಿಲಕುಮಾರ ತೇಲಂಗಿ, ನಿಂಗರಾಜ ಮಹಿಂದ್ರಕರ, ರಾಮನಗೌಡ ಸಿದರೆಡ್ಡಿ, ವಿಜಯ ಬಡಿಗೇರ, ಕಾಶಿಬಾಯಿ ರಾಂಪೂರ, ಸರಸ್ವತಿ ಪೀರಾಪೂರ, ಬಸಮ್ಮ ಸಿದರೆಡ್ಡಿ ಇನ್ನಿತರರು ಇದ್ದರು.

Advertisement

ಸ್ವಾಮೀಜಿಗಳು ಸೇರಿದಂತೆ ಹಲವರು ತಮ್ಮ ನೆರವಿನ ಮೊತ್ತ ಘೋಷಿಸಿ ಪ್ರೇರಣೆ ನೀಡಿದರು. ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಡಾ| ಪರಶುರಮ ಪವಾರ ರಾಮಭಜನೆ ನಡೆಸಿಕೊಟ್ಟರು. ಪ್ರಕಾಶ ಮಠ ಸ್ವಾಗತಿಸಿದರು. ನಿಧಿ ಅಭಿಯಾನದ ಮಂಡಲ ಪ್ರಮುಖ ಎಂ.ಡಿ. ಕುಂಬಾರ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ನಿರೂಪಿಸಿದರು. ಮಹಾಂತೇಶ ಸಜ್ಜನವರ ವಂದಿಸಿದರು.

ಮಾಜಿ ಪ್ರಧಾನಿ ವಾಜಪೇಯಿಯವರ ತತ್ವಾದರ್ಶಗಳಿಗೆ, ಪಕ್ಷ ಸಿದ್ಧಾಂತಕ್ಕೆ ಮಾರುಹೋಗಿ ಬಿಜೆಪಿಗೆ ಬಂದಿದ್ದೇನೆ. ಸಂಘ ಮತ್ತು ಪಕ್ಷ ಸಿದ್ಧಾಂತ ಒಂದೇ ಆಗಿದೆ. ಶ್ರೀರಾಮಮಂದಿರ ನಿರ್ಮಾಣಕ್ಕೆ ವೈಯಕ್ತಿವಾಗಿ ಲಕ್ಷ ರೂ. ದೇಣಿಗೆ ಸಲ್ಲಿಸುತ್ತಿದ್ದೇನೆ.
ಪ್ರಭುಗೌಡ ದೇಸಾಯಿ, ಜಿಪಂ
ಉಪಾಧ್ಯಕ್ಷ

ಜ. 15ರಿಂದ ಫೆ. 5ರವರೆಗೆ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತದೆ. ಪ್ರತಿ ಮನೆ ಸಂಪರ್ಕಿಸಲಾಗುತ್ತದೆ. ಹಿಂದೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಲಾಗುತ್ತದೆ. 10 ರೂ. ದಿಂದ ಎರಡು ಸಾವಿರ ರೂ. ವರೆಗೆ ಕೂಪನ್‌ ಇದ್ದು, ಸಾರ್ವಜನಿಕರು ಶಕ್ತಾನುಸಾರ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.
ಎಂ.ಡಿ. ಕುಂಬಾರ .ವಕೀಲರು, ಅಭಿಯಾನದ
ಮುದ್ದೇಬಿಹಾಳ ಮಂಡಲ ಪ್ರಮುಖರು

Advertisement

Udayavani is now on Telegram. Click here to join our channel and stay updated with the latest news.

Next