Advertisement

ಶಸ್ತ್ರಾಸ್ತ್ರ ದಾಖಲೆಗಳಿಗಾಗಿ ಡೊನಾಲ್ಡ್‌ ಟ್ರಂಪ್‌ ರೆಸಾರ್ಟ್‌ನಲ್ಲಿ ಶೋಧ

05:47 PM Aug 12, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫ್ಲಾರಿಡಾದಲ್ಲಿ ಹೊಂದಿರುವ ರೆಸಾರ್ಟ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರ ಮತ್ತು ಇತರ ಅಮೂಲ್ಯ ಮಾಹಿತಿಗಳನ್ನು ಇರಿಸಿದ್ದರೇ ಎಂಬ ಬಗ್ಗೆ ಸೋಮವಾರ (ಆ.8) ಶೋಧ ನಡೆಸಲಾಗಿತ್ತು. ಆ ದಿನ ನಡೆದಿದ್ದ ದಾಳಿಯ ಬಗ್ಗೆ ಎಫ್ಬಿಐ ನಡೆಸಿದ್ದ ದಾಳಿಯ ಬಗ್ಗೆ “ದ ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿದೆ.

Advertisement

ಮಾಜಿ ಅಧ್ಯಕ್ಷರ ಮಾಲೀಕತ್ವದ ರೆಸಾರ್ಟ್‌ ಮೇಲೆ ದಾಳಿ ನಡೆಸುವಂತೆ ಅಲ್ಲಿನ ಅಟಾರ್ನಿ ಜನರಲ್‌ ಮೆರಿಕ್‌ ಗಾರ್ಲೆಂಡ್‌ ಅವರೇ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಮನೆ ಬಾಡಿಗೆ ಮೇಲೆ ಜಿಎಸ್‌ಟಿ ಸುದ್ದಿ ಸುಳ್ಳು; ದಾರಿ ತಪ್ಪಿಸುವ ಮಾಹಿತಿ ಎಂದ ಕೇಂದ್ರ ಸರ್ಕಾರ

ಜತೆಗೆ ನ್ಯಾಯ ಖಾತೆಯಿಂದಲೇ ಫ್ಲಾರಿಡಾ ಕೋರ್ಟ್‌ಗೆ ಶೋಧ ನಡೆಸುವ ಬಗೆಗಿನ ವಾರಂಟ್‌ ಅನ್ನು ಮೊಹರು ರಹಿತವಾಗಿ ನೀಡಬೇಕು ಎಂದು ಮನವಿ ಸಲ್ಲಿಕೆಯಾಗಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next