Advertisement

ಮಕ್ಕಳ ಜತೆಗೆ ಮೆಲಾನಿಯಾ ಮಾತು

11:09 AM Feb 27, 2020 | Hari Prasad |

‘ಅಮೆರಿಕ ಎಷ್ಟು ದೊಡ್ಡದಿದೆ?’…. “ಭಾರತದಿಂದ ಅಮೆರಿಕ ತುಂಬಾ ದೂರಾನಾ?’… ಇವು ದಿಲ್ಲಿಯ ಸರಕಾರಿ ಶಾಲೆಯಲ್ಲಿ ಪ್ರೀ-ನರ್ಸರಿಯಲ್ಲಿ ಕಲಿಯುತ್ತಿರುವ ಪುಟಾಣಿ ಮಕ್ಕಳ ಪ್ರಶ್ನೆಗಳು. ಟ್ರಂಪ್‌ ಪತ್ನಿ ಮೆಲಾನಿಯಾ ಟ್ರಂಪ್‌ ಅವರು ಬುಧವಾರ ದಿಲ್ಲಿಯ ಸರಕಾರಿ ಶಾಲೆಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ಮಕ್ಕಳು ಕೇಳಿದ ಇಂಥ ಮುಗ್ಧ ಪ್ರಶ್ನೆಗಳಿಗೆ ನಸುನಗುತ್ತಾ ಉತ್ತರಿಸಿದರು.

Advertisement

ಮೊದಲಿಗೆ, ನರ್ಸರಿ ವಿಭಾಗದ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿದ್ದ ಚಟುವಟಿಕೆ ಕೊಠಡಿಗೆ ತೆರಳಿದರು. ಪುಟಾಣಿಗಳ ಒಂದು ಗುಂಪು ಜೇಡಿಮಣ್ಣಿನ ಆಕೃತಿಗಳನ್ನು ತಯಾರಿಸುತ್ತಿತ್ತು. ಅವರೊಂದಿಗೆ ಸೇರಿ, ಕೆಲವಾರು ಆಕೃತಿಗಳನ್ನು ತಯಾರಿಸಿದರು.

ಅನಂತರ ಬಿಲ್ಡಿಂಗ್‌ ಬ್ಲಾಕ್ಸ್‌ ಆಟಿಕೆಗಳಿಂದ ಆಡುತ್ತಿದ್ದ ಬೇರೊಂದು ವಯೋಮಾನದ ಮಕ್ಕಳನ್ನು ಮಾತನಾಡಿಸಿದರು. ಅಲ್ಲೊಬ್ಬ ಪುಟಾಣಿ ಹೆಣ್ಣುಮಗು, ಅಮೆರಿಕದ ಅಧ್ಯಕ್ಷರ ಪತ್ನಿಯಾಗಿ ನಿಮ್ಮ ಕರ್ತವ್ಯವೇನು ಎಂಬ ದೊಡ್ಡ ಪ್ರಶ್ನೆಯನ್ನೇ ಕೇಳಿತು. ಅದಕ್ಕೆ ಉತ್ತರ ನೀಡಿದರು.

ಮಕ್ಕಳೊಂದಿಗೆ ಮಾತನಾಡಿ ಮನಸ್ಸು ಹಗುರಾಯಿತು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 2018ರಲ್ಲಿ ದಿಲ್ಲಿ ಸಿಎಂ ಕೇಜ್ರಿವಾಲ್‌ರ ಹ್ಯಾಪಿನೆಸ್‌ ಕ್ಲಾಸ್‌ ಎಂಬ ಪರಿಕಲ್ಪನೆಯಡಿ ಅದೇ ಹೆಸರಿನಲ್ಲಿ ಸರಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೆ ಏರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next