Advertisement

ಡೊಂಬಿವಲಿಯ ಯಕ್ಷಕಲಾ ಸಂಸ್ಥೆಯ ವಾರ್ಷಿಕ ಮಹಾಸಭೆ

02:22 PM Sep 06, 2017 | Team Udayavani |

ಡೊಂಬಿವಲಿ: ದೇವಸ್ಥಾನದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒಂದಾಗಿ ದುಡಿದು ಮುಂಬರುವ ನವರಾತ್ರಿ ಉತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲು ಎಲ್ಲಾ ಸದಸ್ಯ ಬಾಂಧವರ ಸಹಕಾರ ಅಗತ್ಯವಾಗಿದೆ ಎಂದು ಯಕ್ಷಕಲಾ ಸಂಸ್ಥೆಯ ಅಧ್ಯಕ್ಷ ಹರೀಶ್‌ ಶೆಟ್ಟಿ ಅವರು ನುಡಿದರು.

Advertisement

ಇತ್ತೀಚೆಗೆ ಡೊಂಬಿವಲಿಯ ಕ್ಷಿತಿಜಾ ಹೈಸ್ಕೂಲ್‌ನ ಸಭಾಗೃಹದಲ್ಲಿ ನಡೆದ ಯಕ್ಷಕಲಾ ಸಂಸ್ಥೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಯಿಯ ಕೃಪೆಯು ಸಂಸ್ಥೆ ಹಾಗೂ ಭಕ್ತಾದಿಗಳ ಮೇಲೆ ಸದಾಯಿರಲಿ. ಇಷ್ಟರವರೆಗೆ ನಮ್ಮ ಎಲ್ಲಾ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನೆರವೇರಿದ್ದು, ಅದಕ್ಕೆ ಸದಸ್ಯರ ಸಹಕಾರ ಕೂಡಾ ದೊರಕಿರುವುದು ಅಭಿನಂದನೀಯ. ಮಂದಿರದ ಆರ್ಥಿಕ ಮಟ್ಟ ಉತ್ತಮಗೊಳಿಸಲು ತಾವೆಲ್ಲರೂ ಕೈಜೋಡಿಸಬೇಕು ಎಂದರು.

ಪ್ರಾರಂಭದಲ್ಲಿ ಸಂಘದ ಅಧ್ಯಕ್ಷ ಹರೀಶ್‌ ಶೆಟ್ಟಿ, ಗೌರವಾಧ್ಯಕ್ಷ ದಿವಾಕರ ರೈ, ಉಪಾಧ್ಯಕ್ಷ ಮಾಧವ ಪೂಜಾರಿ ಮತ್ತು ಉದಯ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಕೋಟ್ಯಾನ್‌, ಕೋಶಾಧಿಕಾರಿ ನಾಗರಾಜ ಮೊಗವೀರ, ಜ್ಯೋತಿಷಿಗಳಾದ ಕೇಶವ ಪೇರಾರ ಅವರು ಜ್ಯೋತಿ ಬೆಳಗಿಸಿ ಸಭೆಗೆ ಚಾಲನೆ ನೀಡಿದರು. ದೇವಸ್ಥಾನದ ಭುವಾಜಿ ಜಗದೀಶ್‌ ನಿಟ್ಟೆ ಪ್ರಾರ್ಥನೆಗೈದರು.

ಸಂಘದ ಗೌರವ ಪ್ರದಾನ ಕಾರ್ಯದರ್ಶಿ ರಾಜೇಶ್‌ ಕೋಟ್ಯಾನ್‌ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಭರತ್‌ ಕುಮಾರ್‌ ಪುಂಜಾಲಕಟ್ಟೆ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಕೋಶಾಧಿಕಾರಿ ನಾಗರಾಜ ಮೊಗವೀರ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. 2017-2018ನೇ ಸಾಲಿಗೆ ಲೆಕ್ಕ ಪರಿಶೋಧಕರಾಗಿ ರಾವ್‌ ಆ್ಯಂಡ್‌ ಅಶೋಕ್‌ ಚಾರ್ಟೆಡ್‌ ಆಕೌಂಟೆಂಟ್‌ ಅವರನ್ನು ನೇಮಿಸಲಾಯಿತು. ಆಂತರಿಕ ಲೆಕ್ಕ ಪರಿಶೋಧಕರನ್ನಾಗಿ ಜಯರಾಮ ಶೆಟ್ಟಿ ಅವರು ಆಯ್ಕೆಯಾದರು.

ಸದಸ್ಯರಾದ ಆರ್‌. ಬಿ. ಶೆಟ್ಟಿ, ರವಿ ಸನಿಲ್‌, ಎಂ. ಎಸ್‌. ಕೋಟ್ಯಾನ್‌, ಸುಂದರ ಶೆಟ್ಟಿ, ವಸಂತ ಸುವರ್ಣ, ಅರುಣ್‌ ಕೋಟ್ಯಾನ್‌, ಸುರೇಶ್‌ ಅಂಚನ್‌, ತಿಲಕ್‌ ಕುಮಾರ್‌ ಸನಿಲ್‌, ಪುರುಷೋತ್ತಮ ಕೋಟ್ಯಾನ್‌ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು.

Advertisement

ಸಂಸ್ಥೆಯ ಗೌರವಾಧ್ಯಕ್ಷ ದಿವಾಕರ ರೈ ಮಾತನಾಡಿ, ದೇವಸ್ಥಾನದ ಏಳ್ಗೆಗಾಗಿ ಯಾವುದೇ ಮತ ಭೇದವಿದ್ದರೂ ಅದನ್ನು ಮರೆತು ನಾವೆಲ್ಲರೂ ಒಂದಾಗಿ ದುಡಿದು ಸಂಸ್ಥೆ ಹಾಗೂ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದರು. ಸಂಸ್ಥೆಯ ಸದಸ್ಯರಾದ ರಾಜಗೋಪಾಲ್‌ ರಾವ್‌ ಮೊದಲಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಕೋಟ್ಯಾನ್‌ ವಂದಿಸಿದರು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next