Advertisement
ಡೊಂಬಿವಲಿ ಪಶ್ಚಿಮದ ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ ಸಂಚಾಲಕತ್ವದ ಶ್ರೀ ರಾಧಾಕೃಷ್ಣ ಶ್ರೀ ಶನೀಶ್ವರ ಮಂದಿರದ 60 ನೇ ವಾರ್ಷಿಕ ಮಂಗಳ್ಳೋತ್ಸವ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಂದಿರದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ವಾಗಿದೆ. ಎಲ್ಲರು ಒಗ್ಗಟ್ಟಿನಿಂದ ಮಂದಿರವನ್ನು ನಿರ್ಮಿಸೋಣ. ಅದಕ್ಕಾಗಿ ತುಳು-ಕನ್ನಡಿಗರು ಕಟಿ ಬದ್ಧರಾಗೋಣ ಎಂದರು.
Related Articles
Advertisement
ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಸ್ಥಳದಲ್ಲಿ ಉತ್ತಮ ಕಾರ್ಯಕ್ರಮಗಳು ಜರ ಗುತ್ತಿವೆ. ನಿಮ್ಮೆಲ್ಲರ ಸಹಕಾರ ದೇವರ ದಯೆಯಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ. ತಾಯ್ನಾಡಿನ ಸಂಸ್ಕೃತಿಯನ್ನು ಇಲ್ಲಿ ಕಾಣುವಂತಾಯಿತು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ರವಿ ಸನಿಲ್ ಅವರು ಮಾತನಾಡಿ, ಕ್ಷೇತ್ರದ ಮಹಿಳಾ ವಿಭಾಗದ ಕೆಲಸಗಳು ಅಚ್ಚು ಕಟ್ಟಾಗಿ ನಡೆಯುವುದರಿಂದ ನಮ್ಮ ಕಾರ್ಯಕಲಾಪಗಳು ಸುಸಾಂಗವಾಗಿ ನೆರವೇರುತ್ತಿದೆ. ಕಾರ್ಯಕಾರಿ ಸಮಿ ತಿಯ ಬೆಂಬಲ, ಅರ್ಚಕರ ಪ್ರೋತ್ಸಾಹ ಈ ಸಂಸ್ಥೆಯೊಂದಿಗಿದೆ. ನಾವೆಲ್ಲರೂ ಶೀಘ್ರದಲ್ಲೇ ಭವ್ಯ ದೇವಸ್ಥಾನ ನಿರ್ಮಿ ಸೋಣ ಎಂದರು.
ಕಾರ್ಯದರ್ಶಿ ಸೋಮನಾಥ ಪೂಜಾರಿ ಸ್ವಾಗತಿಸಿ ಅಧಿಕ ಧನ ಸಂಗ್ರಹಿಸಿದವರ ಯಾದಿ ಓದಿದರು. ಬೆಳಗ್ಗೆ ಶ್ರೀ ಸತ್ಯನಾರಾಯಣ ಮಹಾ ಪೂಜೆ ನಡೆಯಿತು. ಪೂಜಾ ವಿಧಿ- ವಿಧಾನಗಳಲ್ಲಿ ಶೇಖರ್ ಭುವಾಜಿ ಸಹಕರಿಸಿದರು. ವಜ್ರ ಮಹೋತ್ಸವದ ಕಾರ್ಯದರ್ಶಿ ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ರವಿ ಸನಿಲ್, ರಾಜೀವ ಭಂಡಾರಿ, ರಾಮಣ್ಣ ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಹರೀಶ್ ಶೆಟ್ಟಿ, ಪ್ರಕಾಶ್ ಭಟ್, ಆರ್. ಬಿ. ಶೆಟ್ಟಿ, ಶೇಖರ್ ಭುವಾಜಿ, ಶೇಖರ್ ಪುತ್ರನ್, ಲಕ್ಷ್ಮಣ್ ಸುವರ್ಣ, ಸೋಮನಾಥ ಪೂಜಾರಿ, ವಸಂತ ಸುವರ್ಣ ಉಪಸ್ಥಿತರಿದ್ದರು.