Advertisement

ಡೊಂಬಿವಲಿ ಶ್ರೀ ರಾಧಾಕೃಷ್ಣ ಭಜನ ಮಂಡಳಿ ವಜ್ರ ಮಹೋತ್ಸವ ಕಾರ್ಯಕ್ರಮ -2

05:06 PM Jun 28, 2018 | Team Udayavani |

ಡೊಂಬಿವಲಿ: ಹೊರನಾಡ ತುಳು-ಕನ್ನಡಿಗರು ನಾಡು- ಅಭಿಮಾನದೊಂದಿಗೆ ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಿ- ಬೆಳೆಸುವಲ್ಲಿ ಮರಾಠಿ ಮಣ್ಣಿನಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಇಲ್ಲಿನ ಹೆಚ್ಚಿನ ತುಳು-ಕನ್ನಡಪರ ಹಾಗೂ ಜಾತೀಯ ಸಂಘಟನೆಗಳು ಸಮಾಜದ ಹಾಗೂ ನಾಡು-ನುಡಿಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಅಲ್ಲಲ್ಲಿ ಭಜನ ತಂಡಗಳನ್ನು ಸ್ಥಾಪಿಸಿಕೊಂಡು ಭಜನೆಯ ಮೂಲಕ ವಿಭಜನೆಯಿಲ್ಲ ಎಂಬುವುದನ್ನು ಸಾಬೀತುಪಡಿಸಿದ್ದಾರೆ. ಭಜನೆಯು ಮನಸ್ಸಿಗೆ ಶಾಂತಿಯನ್ನು ನೀಡುವುದರೊಂದಿಗೆ ಅನ್ಯೋನ್ಯತೆಯನ್ನು ಬೆಳೆಸುವ ಸಾಧನವಾಗಿದೆ ಎಂದು ಯಕ್ಷಮಾನಸ ಸಂಸ್ಥೆಯ ಅಧ್ಯಕ್ಷ ಶೇಖರ್‌ ಆರ್‌. ಶೆಟ್ಟಿ  ಅವರು ನುಡಿದರು.

Advertisement

ಡೊಂಬಿವಲಿ ಪಶ್ಚಿಮದ ಶ್ರೀ ರಾಧಾಕೃಷ್ಣ ಭಜನ ಮಂಡಳಿ ಸಂಚಾಲಿತ ಶ್ರೀ ರಾಧಾಕೃಷ್ಣ ಮತ್ತು ಶ್ರೀ ಶನೀಶ್ವರ ಮಂದಿರದ ವಜ್ರಮಹೋತ್ಸವ ಆಚರಣೆಯ ಸರಣಿ ಕಾರ್ಯಕ್ರಮ -2 ಅಂಗವಾಗಿ ನಡೆದ ಭಜನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ   ಮಾತನಾಡಿದ ಅವರು, ರಾಧಾಕೃಷ್ಣ ಭಜನ ಮಂಡಳಿಯು ಕಳೆದ 60 ವರ್ಷಗಳಿಂದ ತುಳು-ಕನ್ನಡಿಗರನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದೆ. ವಜ್ರಮಹೋತ್ಸವದ ಈ ಸುಸಂದರ್ಭದಲ್ಲಿ ಭಜನೆಯ 

ಸವಿಯನ್ನು ನೀಡಿದ ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ರವಿ ಎಸ್‌. ಸನಿಲ್‌ ಅವರು ಮಾತನಾಡಿ, ಭಜನೆಯಿಂದ ಮನಸ್ಸು ಪರಿಶುದ್ಧವಾಗುವುದರೊಂದಿಗೆ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ವಜ್ರಮಹೋತ್ಸವದ ಎಲ್ಲಾ ಸರಣಿ ಕಾರ್ಯಕ್ರಮಗಳಿಗೆ ಹಾಗೂ ಭವ್ಯ ಮಂದಿರ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮಂಡಳಿಯು ಕೇವಲ ಧಾರ್ಮಿಕ ಕ್ಷೇತ್ರದಲ್ಲಿ ಮಾತ್ರ ಸೇವೆಗೈಯದೆ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ಹೆಚ್ಚಿನ ಸಾಧನೆಗಳನ್ನು ಮಾಡುವ ಇರಾದೆಯನ್ನು ಹೊಂದಿದ್ದು, ನಮ್ಮ ಎಲ್ಲಾ ನೂತನ ಯೋಜನೆ-ಯೋಚನೆಗಳಿಗೆ ತುಳು-ಕನ್ನಡಿಗರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದರು.

ಮಂದಿರದ ಪ್ರಧಾನ ಅರ್ಚಕ ಕಾನಂಗಿ ಪ್ರಕಾಶ್‌ ಭಟ್‌ ಇವರು ಮಾತನಾಡಿ, ಇಂದಿನ ಬದುಕಿನ ಜಂಜಾಟದಲ್ಲಿ ಮನುಷ್ಯ 60 ವರ್ಷ ಕೂಡಾ ಬದುಕುವ ಭರವಸೆಯಿಲ್ಲ. ಇಂತಹ ಸಂದರ್ಭದಲ್ಲಿ ಸಂಸ್ಥೆಯೊಂದು ಆರು ದಶಕಗಳನ್ನು ಪೂರೈಸಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ವಜ್ರಮಹೋತ್ಸವದ ಈ ಸಂದರ್ಭದಲ್ಲಿ ಇನ್ನೂ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಸಂಸ್ಥೆಯು ಹಮ್ಮಿಕೊಂಡಿದ್ದು, ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ದೇವರ ಅನುಗ್ರಹ ನಿಮ್ಮೆಲ್ಲರ ಮೇಲಿರಲಿ ಎಂದು ನುಡಿದು ಶುಭಹಾರೈಸಿದರು.

Advertisement

ವಜ್ರ ಮಹೋತ್ಸವ ಸಮಿತಿಯ ಕಾರ್ಯದರ್ಶಿ ವಸಂತ ಸುವರ್ಣ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ರವಿ ಸನಿಲ್‌, ಶೇಖರ್‌ ಆರ್‌. ಶೆಟ್ಟಿ, ಪ್ರಕಾಶ್‌ ಭಟ್‌, ಶೇಖರ್‌ ಪುತ್ರನ್‌, ಯು. ಆರ್‌. ಸುವರ್ಣ, ಶೇಖರ ಕೋಟ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಆರ್‌. ಪೂಜಾರಿ, ಗೌರವ ಕೋಶಾಧಿಕಾರಿ ಶೇಖರ್‌ ಎ. ಪುತ್ರನ್‌, ಜತೆ ಕಾರ್ಯದರ್ಶಿ ರಾಜೇಶ್‌ ಸಿ. ಕೋಟ್ಯಾನ್‌, ಜತೆ ಕೋಶಾಧಿಕಾರಿ ಪ್ರಸಾದ ಪೂಜಾರಿ, ಪ್ರಧಾನ ಭುವಾಜಿ ಶೇಖರ್‌ ಎ. ಕೋಟ್ಯಾನ್‌ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಕಾರ್ಯಕ್ರಮವು ಜರಗಿತು. ತುಳು-ಕನ್ನಡಿಗರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಡೆದ ಭಜನ ಕಾರ್ಯಕ್ರಮದಲ್ಲಿ  ಕ್ರಮವಾಗಿ ಶ್ರೀ ಶಾರದಾ ಭಜನಾ ಮಂಡಳಿ, ಶ್ರೀ ಮುಂಬ್ರಾ ಮಿತ್ರ ಮಹಿಳಾ ಭಜನ ಮಂಡಳಿ, ಯಕ್ಷಕಲಾ ಜಗದಂಬಾ ಮಂದಿರ, ಶ್ರೀ ಅಯ್ಯಪ್ಪ ಮಂದಿರ ಆಜೆªಪಾಡಾ, ತುಳು ವೆಲ್ಫೆàರ್‌ ಅಸೋಸಿಯೇಶನ್‌, ಕರ್ನಾಟಕ ಸಂಘ ಡೊಂಬಿವಲಿ, ಬಿಲ್ಲವರ ಅಸೋಸಿಯೇಶನ್‌ ಡೊಂಬಿವಲಿ ಪ್ರಾದೇಶಿಕ ಸಮಿತಿ, ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಫೋರ್ಟ್‌, ಹವ್ಯಕ ಸಂಘ ಡೊಂಬಿವಲಿ, ಮಾತಾ ಅಮೃತಾನಂದಮಯಿ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ ಮಂಡಳಿ, ಮುಂಬ್ರಾ ಮಿತ್ರ ಭಜನ ಮಂಡಳಿಗಳು ಪಾಲ್ಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next