ಡೊಂಬಿವಲಿ: ರೋಟರಿ ಸಂಸ್ಥೆ ಡೊಂಬಿವಲಿ ಉತ್ತರ ವಲಯದ ವತಿಯಿಂದ ಇತರ ಸ್ಥಳೀಯ ಸಂಸ್ಥೆಯ ಸಹಕಾರದೊಂದಿಗೆ ರುಬೇಲಾ ಮತ್ತು ದಡಾರ ಲಸಿಕೆಗಳ ಬಗ್ಗೆ ವಿಚಾರಗೋಷ್ಠಿ ಮತ್ತು ಮಾಹಿತಿ ಶಿಬಿರವು ಇತ್ತೀಚೆಗೆ ನಡೆಯಿತು.
ಮಾಹಿತಿ ಶಿಬಿರದಲ್ಲಿ ವಿವಿಧ ಶಾಲೆಗಳ ಅಧ್ಯಾಪಕರು ಹಾಗೂ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ರವಿ ನಂದನ್ ಅವರು ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು. ರೋಹನ್ ಅವರು ಸ್ವಾಗತ ಗೀತೆ ಹಾಡಿದರು. ಅಧ್ಯಕ್ಷ ರವಿ ನಂದನ್ ಅವರು ರುಬೇಲಾ ಮತ್ತು ದಡಾರ ಲಸಿಕೆಗಳ ಉಪಯೋಗ ಹಾಗು ಭಾರತ ಸರಕಾರವು ಈ ಯೋಜನೆಯನ್ನು ಯಾಕೆ ಕೈಗೊಂಡಿದೆ ಎಂಬುವುದರ ಬಗ್ಗೆ ಮಾಹಿತಿ ನೀಡಿದರು.
ಡಾ| ಮಯುರೇಶ್ ವಾಖೆ ಅವರು ಮಾತನಾಡಿ, ರುಬೇಲಾ ಹಾಗು ದಡಾರಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ರೋಟರಿ ಸಂಸ್ಥೆ ಡೊಂಬಿವಲಿ ಉತ್ತರ ವಲಯದ ಪೂರ್ವಾಧ್ಯಕ್ಷ ಡಾ| ರಾಹುಲ್ ಬಿರೂಡ್ ಅವರು, ಸಂಸ್ಥೆಯು ಕಳೆದ ಐದು ವರ್ಷಗಳಿಂದ ರುಬೇಲಾ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿರುವ ಬಗ್ಗೆ ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಎಸ್‌ಎಂಒ ಡಾ| ಅರುಣ್ ಕಾಟ್ಕರ್ ಅವರು ಈ ಲಸಿಕೆಯ ಯೋಜನೆಯಲ್ಲಿ ಭಾರತ ಸರಕಾರದ ಕೊಡುಗೆಯನ್ನು ವಿವರಿಸಿದರು. ಕೆಡಿಎಂಸಿ ಅಧಿಕಾರಿ ಡಾ| ಸಂದೀಪ್ ನಿಂಬಾಲ್ಕರ್ ಅವರು ಲಸಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಡಾ| ಚಂದ್ರಶೇಖರ್ ಕೊಲ್ವೆಕರ್ ಅವರು ಮಾತನಾಡಿ, ವಿಶ್ವದಲ್ಲಿ ಪೋಲಿಯೋ ನಿರ್ಮೂಲನಕ್ಕಾಗಿ ಇಂಟರ್ ನ್ಯಾಷನಲ್ ರೋಟರಿ ಸಂಸ್ಥೆ ನೀಡಿದ ಕೊಡುಗೆಯ ಬಗ್ಗೆ ತಿಳಿಸಿದರು. ಪ್ರತಿಯೊಂದು ರೋಟರಿ ಸಂಸ್ಥೆಗಳು ರುಬೇಲಾ ಮತ್ತು ದಡಾರವನ್ನು 2020 ರ ಒಳಗೆ ಶೇ. 90 ರಷ್ಟು ನಿರ್ಮೂಲನೆ ಮಾಡುವುದರ ಗುರಿಯನ್ನು ಇಟ್ಟುಕೊಳ್ಳಬೇಕು. ರುಬೇಲಾ ಮತ್ತು ದಡಾರ ವ್ಯಾಕ್ಸಿನೇಷನ್ ಡೆೆùವ್‌ನ್ನು ಕಲ್ಯಾಣ್, ಡೊಂಬಿವಿಲಿ ವಿಸ್ತಾರದಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದು, ಲಸಿಕಾ ಶಿಬಿರದಲ್ಲಿ 9 ತಿಂಗಳಿಂದ ಹಿಡಿದು 15 ವರ್ಷದವರೆಗಿನ ಎÇÉಾ ಮಕ್ಕಳಿಗೆ ಲಸಿಕೆಗಳನ್ನು ಒದಗಿಸಲು ಕಾರ್ಯಾಚರಣೆ ಮಾಡುತ್ತಿದೆ. ಈ ಕಾರ್ಯಾಚರಣೆಯಲ್ಲಿ ಇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿವೆ ಎಂದರು.
ಸಭೆಯಲ್ಲಿ ರುಬೇಲಾ ಮತ್ತು ದಡಾರದ ಬಗ್ಗೆ ಭಾರತ ಸರಕಾರವು ತೆಗೆದುಕೊಂಡಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಹಲವು ವೀಡಿಯೋ ಕ್ಲಿಪ್‌ಗ್ಳ ಮೂಲಕ ತಿಳಿಸಲಾಯಿತು. ಕೊನೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಶರತ್ ಅವರು ವಂದಿಸಿದರು. ಸಂಸ್ಥೆ ಯ ಸದಸ್ಯರಾದ ಅಮಿತ್ ಶ್ರೀವಾತ್ಸವ್ ಕಾರ್ಯಕ್ರಮ ನಿರ್ವಹಿಸಿದರು.
ಡೊಂಬಿವಿಲಿ (ಉತ್ತರ) ರೋಟರಿ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಈ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಸ್ತುತ ವರ್ಷವೂ ಡೊಂಬಿವಿಲಿ ಹಾಗೂ ಕಲ್ಯಾಣ್ ರೊಟರಿ ಸಂಸ್ಥೆ, ಕಲ್ಯಾಣ್-ಡೊಂಬಿವಿಲಿ ಮುನ್ಸಿಪಾಲ್ ಕಾರ್ಪೋರೇಷನ್ ಹಾಗು ವಿಶ್ವ ಆರೋಗ್ಯ ಸಂಸ್ಥೆ ಗಳೊಂದಿಗೆ ಸೇರಿ, ಡೊಂಬಿವಿಲಿ ಮತ್ತು ಕಲ್ಯಾಣ್ ಶಾಲೆಗಳ ಎÇÉಾ ಮಕ್ಕಳಿಗೆ ಈ ಲಸಿಕೆಗಳನ್ನು ಒದಗಿಸುವ ಗುರಿಯಲ್ಲಿ ನೆರವಾಗುತ್ತಿದೆ.