Advertisement

ಡೊಂಬಿವಲಿ ಕರ್ನಾಟಕ ಸಂಘ : ದಂಗಲ್‌ ಕ್ರೀಡೋತ್ಸವ ಸಮಾರೋಪ

04:24 PM Feb 08, 2017 | |

ಡೊಂಬಿವಲಿ: ಮುಂಬಯಿ ಹಾಗೂ ಉಪ ನಗರಗಳಲ್ಲದೆ ಸಂಪೂರ್ಣ ಮಹಾರಾಷ್ಟ್ರದಲ್ಲಿಯೇ ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಡೊಂಬಿವಲಿ ಕರ್ನಾಟಕ ಸಂಘ ಶೈಕ್ಷಣಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಅನನ್ಯವಾಗಿದೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಅಭಿವೃದ್ಧಿಗಾಗಿ ನೀಡಿದ ಕೊಡುಗೆ ಅನನ್ಯವಾಗಿದೆ. ಸಂಘದ ಅಭಿವೃದ್ಧಿಗೆ ನನ್ನ ಸಹಕಾರ ಸದಾಯಿದೆ ಎಂದು ಜಾಸ್ಮಿàನ್‌ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ, ಸಮಾಜ ಸೇವಕ ಡಾ| ಸುರೇಂದ್ರ ವಿ. ಶೆಟ್ಟಿ ಅವರು ನುಡಿದರು.

Advertisement

ಫೆ. 5ರಂದು ಸಂಜೆ ಡೊಂಬಿವಲಿ ಪೂರ್ವದ ಜಿಮಾVನದ ಮೈದಾನದಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಸುವರ್ಣ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಕ್ರೀಡಾ ಸಮಿತಿಯ ವತಿಯಿಂದ ನಡೆದ ದಂಗಲ್‌ ವಾರ್ಷಿಕ ಕ್ರೀಡೋತ್ಸವ-2017 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ನಿಮ್ಮೆಲ್ಲರ ಕ್ರೀಡಾಸ್ಫೂರ್ತಿಯನ್ನು ಕಂಡಾಗ ಸಂತೋಷವಾಗುತ್ತಿದೆ. ಮಕ್ಕಳಲ್ಲಿ ಇಂತಹ ಕ್ರೀಡಾಭಾವನೆಯನ್ನು ಬೆಳೆಸುವುದು ನಮ್ಮೆಲ್ಲರ ಆದ‌Â ಕರ್ತವ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಪ್ರಶಾಂತ್‌ ಪಾಠಕ್‌ ಅವರು ಮಾತನಾಡಿ, ಇಂದಿನ ಮೊಬೈಲ್‌, ಟ್ವಿಟರ್‌ ಯುಗದಲ್ಲಿ ಸಂಘನಾತ್ಮಕ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು ವಿಷಾದನೀಯ. ಇಂತಹ ದಿನಗಳಲ್ಲಿ ಡೊಂಬಿವಲಿ ಕರ್ನಾಟಕ ಸಂಘ ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಂಘವು ಭವಿಷ್ಯದಲ್ಲಿ ಸಮಾಜಪರ ಕಾರ್ಯಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದು ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದು ಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ನಾಗಕಿರಣ್‌ ಶೆಟ್ಟಿ ಮಾತನಾಡಿ, ಕರ್ನಾಟಕ ಸಂಘದ ಸುವರ್ಣ ಮಹೋತ್ಸವದ ಯಶಸ್ವಿ ಸರಣಿ ಕಾರ್ಯ ಕ್ರಮಗಳು ಉತ್ತಮವಾಗಿ ಮೂಡಿ ಬರುತ್ತಿದ್ದು, ಕ್ರೀಡೋತ್ಸವವನ್ನು ಕಂಡು ಸಂತೋಷವಾಗುತ್ತಿದೆ. ಇಂತಹ ಯಶಸ್ವಿ ಕಾರ್ಯಕ್ರಮ ಗಳಿಗೆ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದರು. 

ಹೊಟೇಲ್‌ ಫೆಡರೇಷನ್‌ ಆಫ್‌ ಮಹಾರಾಷ್ಟÅ ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಅವರು ಮಾತನಾಡಿ, ಸಂಘದ ಕಾರ್ಯಕ್ರಮಗಳು ನಿಂತ ನೀರಾಗದೆ ಹರಿಯುವ ನೀರಿನಂತಿರಬೇಕು. ಸಂಘದ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳು ಯಶಸ್ಸನ್ನು ಕಾಣುವಂತಾಗಲಿ ಎಂದು ನುಡಿದು ಶುಭ ಹಾರೈಸಿದರು.
ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ವಿಟuಲ ಶೆಟ್ಟಿ ಅವರು ಸಂಘವು ನಡೆದು ಬಂದ ಬಗೆ, ಸಿದ್ಧಿ-ಸಾಧನೆಗಳನ್ನು ವಿವರಿಸಿ, ಡೊಂಬಿವಲಿಯ ವಿವಿಧ ಸಂಘ-ಸಂಸ್ಥೆಗಳ ಸಹಕಾರ ದೊಂದಿಗೆ ಕ್ರೀಡೋತ್ಸವವು ಅದ್ದೂರಿಯಾಗಿ, ಯಶಸ್ವಿ ಯಾಗಿ ನಡೆದಿದೆ ಎನ್ನಲು ಸಂತೋಷವಾಗುತ್ತಿದೆ ಎಂದರು.

Advertisement

ಸುಕುಮಾರ್‌ ಎನ್‌. ಶೆಟಿ ಸ್ವಾಗತಿಸಿದರು. ಡಾ| ವಿಜಯ್‌ ಎಂ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ದರು. ಸಂಘದ ಪದಾಧಿಕಾರಿಗಳಾದ ರಾಜೀವ್‌ ಭಂಡಾರಿ, ದೇವದಾಸ್‌ ಕುಲಾಲ್‌, ಐಕಳ ಗಣೇಶ್‌ ಶೆಟ್ಟಿ, ಸನತ್‌ ಕುಮಾರ್‌ ಜೈನ್‌, ಲೋಕನಾಥ್‌ ಶೆಟ್ಟಿ, ರವೀಂದ್ರ ವೈ. ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಪ್ರಭಾಕರ ಶೆಟ್ಟಿ, ರಮೇಶ್‌ ಕುಕ್ಯಾನ್‌, ಜಗನ್ನಾಥ ಶೆಟ್ಟಿ, ಸತೀಶ್‌ ಆಲಗೂರ, ಪ್ರೊ| ಉಮ್ರಾಣಿ, ವಿಮಲಾ ಶೆಟ್ಟಿ, ಮಾಧುರಿಕಾ ಬಂಗೇರ, ಆಶಾ ಎಲ್‌. ಶೆಟ್ಟಿ ಉಪಸ್ಥಿತರಿದ್ದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ದೇವದಾಸ್‌ ಕುಲಾಲ್‌ ವಂದಿಸಿದರು.

ಸಂಘದ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಡಾ| ವಿಜಯ ಎಂ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್‌ ಶೆಟ್ಟಿ, ರಾಜೀವ್‌ ಭಂಡಾರಿ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರ  ಪರಿಶ್ರಮ, ವಿಶೇಷ ಮುತುವರ್ಜಿಯಿಂದ, ಕನ್ನಡಿಗರ ಪೋತ್ಸಾಹದಿಂದ ಕ್ರೀಡೋತ್ಸವ
ಯಶಸ್ವಿಯಾಗಿದೆ. ಕನ್ನಡಿಗರು ಒಮ್ಮತದಿಂದ, ಒಗ್ಗಟ್ಟಿನಿಂದ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ. ಡೊಂಬಿವಲಿಯ ತುಳು-ಕನ್ನಡಿಗರನ್ನು ಒಂದೇ ವೇದಿಕೆಯಡಿಯಲ್ಲಿ ನೋಡುವ ಆಸೆಯು ಕ್ರೀಡೋತ್ಸವದಿಂದ ಈಡೇರಿದೆ. ಸೋಲು-ಗೆಲುವು ಸ್ಪರ್ಧೆಯಲ್ಲಿ ಸಾಮಾನ್ಯ. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ 
   -ಇಂದ್ರಾಳಿ ದಿವಾಕರ ಶೆಟ್ಟಿ  (ಕಾರ್ಯಾಧ್ಯಕ್ಷರು: ಡೊಂಬಿವಲಿ ಕರ್ನಾಟಕ  ಸಂಘ).

Advertisement

Udayavani is now on Telegram. Click here to join our channel and stay updated with the latest news.

Next