Advertisement

ಎರಡನೇ ಟೆಸ್ಟ್: ಇಂಗ್ಲೆಂಡ್ ಗೆ ಆಧಾರವಾದ ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್

01:27 PM Jul 17, 2020 | keerthan |

ಮ್ಯಾಂಚೆಸ್ಟರ್: ಕೋವಿಡ್-19 ಭೀತಿಯ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಇಂಗ್ಲೆಂಡ್ ತಂಡವನ್ನು ಡೊಮಿನಿಕ್ ಸಿಬ್ಲೆ ಮತ್ತು ಬೆನ್ ಸ್ಟೋಕ್ಸ್ ಆಧರಿಸಿದ್ದಾರೆ.

Advertisement

ಮಳೆಯ ಕಾರಣದಿಂದ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಫೀಲ್ಡಿಂಗ್ ನಡೆಸಿತು.

ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಆರಂಭದಲ್ಲೇ ಆಘಾತ ನೀಡಿದ್ದು ರೋಸ್ಟನ್  ಚೇಸ್. 29 ರನ್ ಆಗುವಷ್ಟರಲ್ಲಿ ರೋರಿ ಬರ್ನ್ಸ್ ಮತ್ತು ಜ್ಯಾಕ್ ಕ್ರಾವ್ಲಿ ವಿಕೆಟ್ ನ್ನು ಇಂಗ್ಲೆಂಡ್ ಕಳೆದುಕೊಂಡಿತು. ನಾಯಕ ಜೋ ರೂಟ್ ಕೂಡಾ 23 ರನ್ ಗಳಿಸಿ ಔಟಾದರು.

ನಂತರ ತಂಡವನ್ನು ಆಧರಿಸಿದ ಡೊಮಿನಿಕ್ ಸಿಬ್ಲಿ ಮತ್ತು ಬೆನ್ ಸ್ಟೋಕ್ಸ್ ಅರ್ಧಶತಕ ಬಾರಿಸಿದರು. ಸಿಬ್ಲಿ 86 ರನ್ ಗಳಿಸಿದರೆ, ಸ್ಟೋಕ್ಸ್ 59 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ರೋಸ್ಟನ್ ಚೇಸ್ ಎರಡು ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ ಒಂದು ವಿಕೆಟ್ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next