Advertisement

ಜಾಹೀರಾತುಗಳ ಪಾಂಪ್ಲೆಟ್ ಹಂಚುತ್ತಿದ್ದೆ..ನಟ ಧನಂಜಯ್ ಬದುಕಿನ ಕಥೆ

05:30 PM Aug 11, 2018 | |

“ಟಗರು’ ಚಿತ್ರದ ಬಳಿಕ ನಟ ಧನಂಜಯ್‍ಗೆ ಸಾಕಷ್ಟು ಚಿತ್ರಗಳಿಗೆ ಅವಕಾಶಗಳು ಸೇರಿದಂತೆ ದೊಡ್ಡ ಅಭಿಮಾನಿಗಳ ಬಳಗವೇ ಹುಟ್ಟಿಕೊಂಡಿದೆ. ಅಲ್ಲದೇ “ಟಗರು’ ಚಿತ್ರದ ಡಾಲಿ ಪಾತ್ರ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ಗುರುಪ್ರಸಾದ್ ನಿರ್ದೇಶನದ “ಡೈರೆಕ್ಟರ್ ಸ್ಪೆಶಲ್’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು.

Advertisement

ಧನಂಜಯ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುವುದಕ್ಕೂ ಮುಂಚೆ ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿ ಚಿತ್ರರಂಗಕ್ಕೆ ಬರಬೇಕು ಎನ್ನುವ ಆಸೆಯಲ್ಲಿದ್ದರು. ಆದರೆ ಆ ಬಯಕೆ ಬೇಗನೆ ಈಡೇರಿರಲಿಲ್ಲ. ಮುಖ್ಯವಾಗಿ ಅವಕಾಶ ಅರಸಿ ಬೆಂಗಳೂರಿಗೆ ಬಂದಿದ್ದ ಧನಂಜಯ್‍ಗೆ ಸಾಕಷ್ಟು ಕಷ್ಟಗಳು ಎದುರಾಗಿದ್ದವಂತೆ, ದುಡ್ಡಿಲ್ಲದೆ ಅಲೆದ ದಿನಗಳನ್ನು, ತಾವು ಅನುಭವಿಸಿದ ನೋವನ್ನು ಅವರು ಮೆಲುಕು ಹಾಕಿದ್ದಾರೆ.

ಹೌದು! ಖಾಸಗಿ ವಾಹಿನಿಯಲ್ಲಿಯ ಕಾರ್ಯಕ್ರಮವೊಂದರಲ್ಲಿ ಹಾಜರಾಗಿದ್ದ ಅವರು, ತಮ್ಮ ಬದುಕಿನ ಕಥೆಯನ್ನು ಹಂಚಿಕೊಂಡಿದ್ದಾರೆ. ನಾನು ಜಯನಗರದಲ್ಲಿ ವಾಸವಿದ್ದಾಗ ಯಾವುದೇ ಅವಕಾಶಗಳು ಸಿಕ್ಕಿರಲಿಲ್ಲ. ಅದೇ ವೇಳೆ ಪ್ರತಿ ದಿನ ಜಾಹೀರಾತುಗಳ ಪಾಂಪ್ಲೆಟ್ಸ್​​​ ಹಂಚಲು ಹೋಗುತ್ತಿದ್ದೆ.

ಇದಕ್ಕೆ ಪಡೆಯುತ್ತಿದ್ದ ಸಂಬಳ 100 ರೂಪಾಯಿ. ಒಮ್ಮೊಮ್ಮೆ ಕೈಯಲ್ಲಿ ಬಿಡಿಗಾಸು ಇಲ್ಲದ ದಿನಗಳನ್ನು ಕಳೆದಿದ್ದೇನೆ. ಅದೇ ಸಮಯಕ್ಕೆ ಚಿತ್ರವೊಂದಕ್ಕೆ ವಾಯ್ಸ್​​ ಡಬ್​ಗೆ ಅವಕಾಶ ಬಂತು. ಕೇವಲ ಎರಡು ಡೈಲಾಗ್ ಹೇಳಿದ್ದಕ್ಕೆ 1200 ರೂ. ಹಣವನ್ನು ನಾನು ಪಡೆದೆ ಎಂದು ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next