Advertisement

ಡೋಕ್ಲಾಂನಿಂದ ಭಾರತ ಪಾಠ ಕಲಿತಿಲ್ಲ: ಚೀನ

09:25 AM Jan 26, 2018 | Team Udayavani |

ಬೀಜಿಂಗ್‌: ಸಿಕ್ಕಿಂ ಬಳಿ ಇರುವ ಡೋಕ್ಲಾಂ ಚೀನಕ್ಕೆ ಸೇರಿದ್ದು. ಕಳೆದ ವರ್ಷ ಉಂಟಾದ 73 ದಿನಗಳ ಬಿಕ್ಕಟ್ಟಿನಿಂದ ಭಾರತ ಇನ್ನೂ ಪಾಠ ಕಲಿಯಬೇಕಾಗಿದೆ ಎಂದು ಚೀನದ ಸೇನಾ ವಕ್ತಾರ ಹೇಳಿದ್ದಾರೆ. ಭಾರತದ ಪ್ರತಿಕ್ರಿಯೆಯಿಂದಾಗಿ ಅವರೂ ಅಕ್ರಮವಾಗಿಯೇ ಸ್ಥಳ ಪ್ರವೇಶ ಮಾಡಿದ್ದಾರೆ ಎನ್ನುವುದು ಸ್ಪಷ್ಟ ಎಂದು ಹೇಳಿದ್ದಾರೆ. ಪ್ರಭಾವ ಬೀರುವಂಥ ಹೇಳಿಕೆಗಳ ಮೂಲಕ ಶೀತಲ ಸಮರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಈ ಬೆಳವಣಿಗೆಯನ್ನು ಚೀನ ವಿರೋಧಿಸುತ್ತದೆ ಎಂದೂ ಹೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭಾರತದ ಭೂಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಪಾಕಿಸ್ಥಾನ ಗಡಿಯ ಬದಲಾಗಿ ಡೋಕ್ಲಾಂನತ್ತ ಗಮನ ಹರಿಸಬೇಕು. ಚೀನದ ಸವಾಲುಗಳನ್ನು ಎದುರಿಸಲು ಸೇನೆ ಸಿದ್ಧ ಎಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next