Advertisement

ಹಾವಳಿ ಕೊಟ್ಟ ನಾಯಿಗಳು ಸೆರೆ

11:29 AM Aug 18, 2017 | |

ಬೆಂಗಳೂರು: ಇತ್ತೀಚೆಗೆ ನಗರದ ಎಂ.ಎಸ್‌.ರಾಮಯ್ಯ ರಸ್ತೆಯಲ್ಲಿ ಇಬ್ಬರು ಸಹೋದರಿಯರು ಸೇರಿ ಆರು ಮಂದಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಸಿಬ್ಬಂದಿ ಗುರುವಾರ ಸುಮಾರು 24 ಬೀದಿ ನಾಯಿಗಳನ್ನು ಸೆರೆ ಹಿಡಿದಿದ್ದಾರೆ. 

Advertisement

ನಗರದ ಎಂ.ಎಸ್‌. ರಾಮಯ್ಯ ಆಸ್ಪತ್ರೆ ರಸ್ತೆಯಲ್ಲಿ ಕಳೆದ ಒಂದು ವಾರದಿಂದ ರಸ್ತೆಯಲ್ಲಿ ಓಡಾಡುವ ಸುಮಾರು 10ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದವು. ಈ ಕುರಿತು ಹಲವಾರು ಬಾರಿ ಪಾಲಿಕೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇತ್ತೀಚೆಗೆ ನಾಯಿಗಳು ವ್ಯಾಘ್ರವಾಗಿ ಯುವತಿಯ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಾಲಿಕೆ ಗುರುವಾರ ಕಾರ್ಯಾಚರಣೆ ನಡೆಸಿದೆ. 

ಸದ್ಯ 24 ನಾಯಿಗಳನ್ನು ಬಿಬಿಎಂಪಿ ಸಿಬ್ಬಂದಿ ಸೆರೆ ಹಿಡಿದಿದ್ದು, ಪ್ರಾಣಿ ಸಂತಾನಹರಣ ಘಟಕಕ್ಕೆ ಸಾಗಿಸಿದ್ದಾರೆ. ಘಟಕದಲ್ಲಿ ಅವುಗಳಿಗೆ ವೈದ್ಯರು ಸಂತಾನ ಹರಣ ಚಿಕ್ಸಿತೆ ನಡೆಸಲಿದ್ದಾರೆ. ಆನಂತರ ಹಿಡಿದ ಸ್ಥಳಕ್ಕೆ ತೆಗದು ಕೊಂಡು ಹೋಗಿ ಬಿಡಲಾಗುವುದು. ವರ್ಷದಲ್ಲಿ ಮೂರು ಬಾರಿ ಇಂತಹ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. 
ಕಾರ್ಯಾದೇಶ ನೀಡಲಾಗಿದೆ.

ಮಹದೇವಪುರ ವಲಯವನ್ನು ಹೊರತುಪಡಿಸಿ ಉಳಿದೆಲ್ಲ 7 ವಲಯಗಳಲ್ಲಿಯೂ ಪ್ರಾಣಿ ಸಂತಾನಹರಣ ಚಿಕಿತ್ಸೆಗಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಹಲವು ವಲಯಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಪ್ರಾಣಿ ಸಂತಾನಹರಣ ಚಿಕಿತ್ಸೆಯಿಂದ ನಾಯಿಗಳಲ್ಲಿ ಆಕ್ರಮಣಶೀಲ ಸ್ವಭಾವ ಕಡಿಮೆಯಾಗಲಿದೆ ಎಂದು ಪಾಲಿಕೆ ಪಶುಸಂಗೋಪನಾ ವಿಭಾಗ ತಿಳಿಸಿದೆ. 

ನಾಯಿಗಳು ವ್ಯಾಘ್ರವಾಗಲು ಕಾರಣಗಳುಂಟು. ಗುಂಪು ಸೇರಿದ ಸಂದರ್ಭದಲ್ಲಿ ಹೆಚ್ಚು ಆಕ್ರಮಣಶೀಲವಾಗಿರುತ್ತವೆ. ಮಾಂಸದಂಗಡಿಯವರು ರಸ್ತೆಬದಿಯಲ್ಲಿ ಎಸೆಯುವ ತ್ಯಾಜ್ಯವನ್ನು ತಿನ್ನುವುದರಿಂದಲೂ ಅವು ಹೆಚ್ಚು ಆಕ್ರಮಣಶೀಲವಾಗಿದ್ದು, ಜನರ ಮೇಲೆ ದಾಳಿ ಮಾಡುತ್ತವೆ 
-ಆನಂದ್‌, ಪಾಲಿಕೆಯ ಪಶುಸಂಗೋಪಣೆ ವಿಭಾಗದ ಜಂಟಿ ಆಯುಕ್ತ 

Advertisement
Advertisement

Udayavani is now on Telegram. Click here to join our channel and stay updated with the latest news.

Next