Advertisement

ಮದ್ಯ ಪತ್ತೆಗೆ ಶ್ವಾನಪಡೆ

04:42 PM Jun 11, 2018 | Team Udayavani |

ಸ್ಫೋಟಕಗಳ ಪತ್ತೆಗೆ, ಕ್ರಿಮಿನಲ್‌ಗ‌ಳ ಬೆನ್ನಟ್ಟಿ ಹಿಡಿಯಲು ಶ್ವಾನಗಳನ್ನು ಬಳಸುವುದು ಎಲ್ಲರಿಗೂ ಗೊತ್ತಿದೆ. ಆದರೆ, ಬಿಹಾರ ಸರ್ಕಾರ ಮದ್ಯ ಪಾನಿಗಳು ಮತ್ತು ಮದ್ಯವನ್ನು ಹಿಡಿ ಯಲು ಶ್ವಾನಗಳ ಮೊರೆ ಹೋಗಿದೆ. ರಾಜ್ಯದಲ್ಲಿ ಮದ್ಯ ನಿಷೇಧವಾದ ಬಳಿಕವೂ ಹೊರ ರಾಜ್ಯಗಳಿಗೆ ಮದ್ಯ ಕಳ್ಳಸಾಗಣೆ ಯಾಗುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯು 20 ಲ್ಯಾಬ್ರಡಾರ್‌ ತಳಿಯ ಶ್ವಾನಗಳನ್ನು ಖರೀದಿಸಿ, ತೆಲಂಗಾಣಕ್ಕೆ ತರಬೇತಿಗಾಗಿ ಕಳುಹಿಸಿದೆ. ಆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ತರಬೇತಿ ಎಲ್ಲಿ, ಹೇಗೆ?
ಈಗಾಗಲೇ ಖರೀದಿಸಲಾಗಿರುವ ಲ್ಯಾಬ್ರಡಾರ್‌ ತಳಿಯ ಶ್ವಾನಗಳನ್ನು ತೆಲಂಗಾಣದ ಇಂಟೆಲಿಜೆನ್ಸ್‌ ಇಂಟಗ್ರೇಟೆಡ್‌ ಟ್ರೈನಿಂಗ್‌  ಅಕಾಡೆಮಿ(ಐಐಟಿಎ)ಗೆ ಕಳುಹಿಸಲಾಗಿದೆ. ಇಲ್ಲಿ ಅವುಗಳಿಗೆ 8ರಿಂದ 9 ತಿಂಗಳ ತರಬೇತಿ ನೀಡಲಾಗುತ್ತದೆ. ಮೂಸುವ ಮೂಲಕ ಮದ್ಯವನ್ನು ಪತ್ತೆ ಹಚ್ಚುವಂಥ ವಿಶೇಷ ತರಬೇತಿ ನೀಡಿದ ಬಳಿಕ ಬಿಹಾರ ಪೊಲೀಸರು ಅದನ್ನು ತಮ್ಮ ರಾಜ್ಯದಲ್ಲಿ ನಿಯೋಜಿಸುತ್ತಾರೆ. ಶ್ವಾನಗಳು ತಮ್ಮ ನಿರ್ವಾಹಕರೊಂದಿಗೆ ಒಗ್ಗಿಕೊಳ್ಳಲಿ ಎಂಬ ಉದ್ದೇಶದಿಂದ ನಿರ್ವಾಹಕರನ್ನೂ ತೆಲಂಗಾಣಕ್ಕೆ ಕಳುಹಿಸಲಾಗಿದೆ.

*2019ರ ಮಾರ್ಚ್‌ ತಿಂಗಳಲ್ಲಿ ಪೊಲೀಸ್‌ ಪಡೆಗೆ ನಿಯೋಜನೆ

*1.75 ಲಕ್ಷ ಒಂದು ಲ್ಯಾಬ್ರಡಾರ್‌ ಶ್ವಾನದ ಬೆಲೆ

*9 ತಿಂಗಳು ಐಐಟಿಎನಲ್ಲಿ ನಾಯಿಗಳಿಗೆ ತರಬೇತಿ ಅವಧಿ

Advertisement

*20 ಪೊಲೀಸ್‌ ಪಡೆಗೆ ಸೇರ್ಪಡೆಯಾಗಲಿರುವ ಶ್ವಾನಗಳು

*1.15 ಲಕ್ಷ ನಿಷೇಧ ಉಲ್ಲಂಘಿಸಿ ಬಂಧಿತರಾದವರ ಸಂಖೆ

*2016ರ ಏಪ್ರಿಲ್‌ ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಾಗಿದ್ದು.

ಉದ್ದೇಶವೇನು?
ಆಲ್ಕೋಹಾಲ್‌ ವಿರುದ್ಧದ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದು 

ಮದ್ಯವನ್ನು ಹೊರ ರಾಜ್ಯಗಳಿಗೆ ಕಳ್ಳಸಾಗಣೆ ಮಾಡುವುದಕ್ಕೆ ಕಡಿವಾಣ ಹಾಕುವುದು

Advertisement

Udayavani is now on Telegram. Click here to join our channel and stay updated with the latest news.

Next