Advertisement

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

01:56 AM Oct 26, 2024 | Team Udayavani |

ಪುಣೆ: ನಾಯಿಯನ್ನು ಮರಕ್ಕೆ ಕಟ್ಟಿ ಕೊಂದ ಆರೋಪದಡಿ ಪುಣೆಯ ತಾಯಿ ಮತ್ತು ಮಗನ ಮೇಲೆ ಪ್ರಕರಣ ದಾಖಲಾಗಿದೆ. ಅ.22ರಂದು ಈ ಘಟನೆ ನಡೆದಿದ್ದು, ಆರೋಪಿ ಪ್ರಭಾವತಿ ಶ್ವಾನಕ್ಕೆ ಕೋಲಿನಿಂದ ಹೊಡೆದಿದ್ದಾಳೆ. ಬಳಿಕ ಆಕೆಯ ಪುತ್ರ ನಾಯಿಯನ್ನು ಮರಕ್ಕೆ ನೇತುಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯವೆಸಗುವ ಮೊದಲು ಆರೋಪಿಗಳು ಶ್ವಾನ ಪ್ರೇಮಿಯೊಬ್ಬರಿಗೆ ಕರೆ ಮಾಡಿ ನಾಯಿಯನ್ನು ಕೊಂಡೊಯ್ಯುವಂತೆ ತಿಳಿಸಿದ್ದರು. ನಾಯಿಯನ್ನು ನೇತು ಹಾಕಿದ್ದ ಫೋಟೋಗಳನ್ನು ಕಳಿಸಿದ್ದರ ಆಧಾರದಲ್ಲಿ ಶ್ವಾನ ಪ್ರೇಮಿ ಪೊಲೀಸರಿಗೆ ದೂರು ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next