Advertisement
ಚೀನೀ ಕುಟುಂಬವೊಂದು “ಡೌಡೌ’ ನಾಯಿಯನ್ನು ಕರೆದುಕೊಂಡು ಸಂಬಂಧಿ ಗಳ ಮನೆಗೆ ತೆರಳಿದ್ದರು. ಮರಳುವಾಗ ಸರ್ವೀಸ್ ಸ್ಟೇಷನ್ ಬಳಿ ಕಾರು ನಿಲ್ಲಿಸಿ, ಅರ್ಧ ತಾಸು ಕೆಳಗಿಳಿದಿದ್ದರು. ಆದರೆ, ಕಾರಿ ನೊಳಗೆ ಬಿಟ್ಟುಬಂದಿದ್ದ ನಾಯಿ ಅಲ್ಲಿಂದ ನಾಪತ್ತೆಯಾಗಿದೆ. ಮನೆಗೆ ಮರಳುವವ ರೆಗೂ ಮಾಲೀಕನಿಗೆ ನಾಯಿ ನಾಪತ್ತೆಯಾದ ಸಂಗತಿ ಗಮನಕ್ಕೇ ಬಂದಿರಲಿಲ್ಲ.
ಇವೆಲ್ಲ ಘಟಿಸಿ 26ನೇ ದಿನ ಮಾಲೀಕ ಬೆಳಗ್ಗೆದ್ದು ಬಾಗಿಲು ತೆರೆದಾಗ ಡೌಡೌ ಪ್ರತ್ಯಕ್ಷವಾಗಿತ್ತು. ಹಸಿವಿನಿಂದ ಕಂಗಾಲಾಗಿದ್ದ ಪ್ರೀತಿಯ ಶ್ವಾನಕ್ಕೆ ಮೊದಲು ಆಹಾರ ನೀಡಿ, ನಂತರ ಬೆಚ್ಚಗೆ ಸ್ನಾನ ಮಾಡಿಸಿದ್ದಾರೆ. “ನಾಯಿಯ ಈ ಸ್ವಭಾವ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಪ್ರೀತಿ ಕೊಟ್ಟ ಮನೆಯ ಹಾದಿಯನ್ನು ನಾಯಿಗಳು ಎಷ್ಟೇ ದೂರ ಹೋದರೂ ಮರೆಯುವುದಿಲ್ಲ. ತಾನು ಸಾಗಿಬಂದ ಹಾದಿಯ ಪ್ರತಿ ಗುರುತುಗಳನ್ನೂ ಅವು ನೆನಪಿಟ್ಟುಕೊಳ್ಳುತ್ತವೆ’ ಎನ್ನುತ್ತಾರೆ, ಹ್ಯಾಂಗೌ ಮೂಲದ ಶ್ವಾನ ತರಬೇತುದಾರ.