ಅಶೋಕ್‌ನಗರ: ಮಧ್ಯಪ್ರದೇಶದ ಅಶೋಕ್‌ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಾಯಿಯೊಂದು ನವಜಾತ ಶಿಶುವಿನ ಮೃತದೇಹದೊಂದಿಗೆ ಚಲಿಸುತ್ತಿರುವುದು ಕಂಡುಬಂದಿದ್ದು, ಭೀಭತ್ಸ ಘಟನೆಯ ವಿಡಿಯೋ ವೈರಲ್ ಆಗಿದೆ.
ನೈರ್ಮಲ್ಯ ಸಿಬ್ಬಂದಿ ಹಿಂಬಾಲಿಸಿದ ಬಳಿಕ ಶವವನ್ನು ಬಿಟ್ಟು ನಾಯಿ ಪರಾರಿಯಾಗಿದೆ.
ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳು, ನೆಟಿಜನ್‌ಗಳಿಂದ ವ್ಯಾಪಕ ಖಂಡನೆ ಎದುರಾಗಿದೆ. ಸಾಮಾಜಿಕವಾಗಿ ಅಸಹ್ಯವನ್ನು ಹುಟ್ಟುಹಾಕಿದೆ.
ಘಟನೆ ಬುಧವಾರ ನಡೆದಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಡಿ.ಕೆ.ಭಾರ್ಗವ ಶುಕ್ರವಾರ ತಿಳಿಸಿದ್ದಾರೆ.
“ನವಜಾತ ಶಿಶುವಿನ ಅರ್ಧ ದೇಹವನ್ನು ನಾಯಿಯು ಕಂಪೌಂಡ್‌ನಲ್ಲಿ ಸಾಗಿಸುತ್ತಿರುವುದನ್ನು ನೈರ್ಮಲ್ಯ ಕಾರ್ಯಕರ್ತರು ನೋಡಿದ್ದಾರೆ. ಕೋಲುಗಳನ್ನು ಹಿಡಿದು ಬೆನ್ನಟ್ಟಿದ ನಂತರ ಅದು ದೇಹವನ್ನು ಬೀಳಿಸಿ ಓಡಿತು. ಜಿಲ್ಲಾಸ್ಪತ್ರೆಯಲ್ಲಿ ಮಗು ಜನಿಸಿರಲಿಲ್ಲ. ಕೆಲವೊಮ್ಮೆ, ಜನರು ನವಜಾತ ಶಿಶುಗಳ ದೇಹಗಳನ್ನು ಸರಿಯಾಗಿ ಹೂಳುವುದಿಲ್ಲ ಮತ್ತು ನಾಯಿಗಳು ಅವುಗಳನ್ನು ಅಗೆಯುತ್ತವೆ, ಶಿಶುಗಳ ಮೃತದೇಹಗಳನ್ನು ಕೆಲವೊಮ್ಮೆ ಕಸದಲ್ಲಿ ಬಿಸಾಡುವಂತಹ ಈ ಘಟನೆಯಲ್ಲಿ ಆಗಿರಬಹುದು ಎಂದು ಡಾ.ಡಿ.ಕೆ.ಭಾರ್ಗವ ಅವರು ಹೇಳಿದರು.
ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿವೇಕ್ ಶರ್ಮಾ ತಿಳಿಸಿದ್ದಾರೆ.