Advertisement

ನಾಯಿ ಮಾಂಸ ಮಾರಾಟ ಭೀತಿ?

09:05 AM May 02, 2018 | Team Udayavani |

ಕೋಲ್ಕತಾ: ಕಸದ ತೊಟ್ಟಿಗಳಿಂದ ಸತ್ತ ನಾಯಿ ಮತ್ತು ಬೆಕ್ಕುಗಳನ್ನು ತಂದು ಸಣ್ಣಪುಟ್ಟ ಹೋಟೆಲ್‌ಗ‌ಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಕೋಲ್ಕತಾದೆಲ್ಲೆಡೆ ಹರಡಿದ್ದು, ಮಾಂಸಾಹಾರ ಪ್ರಿಯರನ್ನು ಚಿಂತೆಗೀಡುಮಾಡಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಭಾರತ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಸಂಘ ತನ್ನ ಸದಸ್ಯರಿಗೆ ಹಾಗೂ ರೆಸ್ಟೋರೆಂಟ್‌ಗಳಿಗೆ ನೋಂದಾಯಿತ ಮಾರಾಟಗಾರರಿಂದ ಮಾತ್ರ ಮಾಂಸ ಖರೀದಿಸುವಂತೆ ಸಲಹೆ  ನೀಡಿದೆ.

Advertisement

ಕೋಲ್ಕತಾ ನಗರ ಮತ್ತು ಸುತ್ತಮುತ್ತ ಕೋಳಿ, ಕುರಿ, ಹಂದಿ ಸೇರಿದಂತೆ ಮಾಂಸಾಹಾರ ಮಾರಾಟ ಮಾಡುವವರಿಗೂ ಈಗಾಗಲೇ ಸೂಚನೆ ನೀಡಿರುವ ಸಂಘವು, ಸಂಶಯಾಸ್ಪದ ಮೂಲಗಳಿಂದ ಮಾಂಸ ಖರೀದಿ ಮಾಡದಂತೆ ತಿಳಿಸಿದೆ. ರಸ್ತೆ ಬದಿ ಮಾರಾಟಗಾರರ ಮೇಲೂ ನಿಗಾವಹಿಸಲಾಗಿದೆ. ಘನೀಕೃತ ಮಾಂಸದ ಮೇಲೆ ಸಂಶಯವಿರುವ ಕಾರಣ ಅದನ್ನು ಬಳಸದಂತೆ ಎಲ್ಲಾ ರೆಸ್ಟೋರೆಂಟ್‌ಗಳಿಗೆ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next