Advertisement

ಶ್ವಾನ ಕಾನೂನು ವಾಪಸ್‌

11:44 AM Jun 22, 2018 | Team Udayavani |

ಬೆಂಗಳೂರು: ಸಾಕು ನಾಯಿಗಳಿಗೆ ಕಡ್ಡಾಯ ಲೈಸೆನ್ಸ್‌, ಒಂದು ಫ್ಲ್ಯಾಟ್‌ನಲ್ಲಿ ಒಂದು ನಾಯಿ ಸಾಕಲು ಮಾತ್ರ ಅವಕಾಶ ಸೇರಿ ಹಲವು ನಿರ್ಬಂಧಗಳನ್ನು ವಿಧಿಸಿ ಹೊರಡಿಸಿದ್ದ ವಿವಾದಾತ್ಮಕ ಅಧಿಸೂಚನೆಯನ್ನು ರಾಜ್ಯಸರ್ಕಾರ ಹಿಂಪಡೆದಿದೆ.

Advertisement

ಅಧಿಸೂಚನೆ ರದ್ದು ಕೋರಿ ಕಂಪ್ಯಾಶನ್‌ ಅನ್‌ಲಿಮಿಟೆಡ್‌ ಪ್ಲಸ್‌ ಆ್ಯಕ್ಷನ್‌, ಪೀಪಲ್ಸ್‌ ಫಾರ್‌ ಅನಿಮಲ್ಸ್‌ ಸ್ವಯಂಸೇವಾ ಸಂಸ್ಥೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನು ° ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ಈ ಕುರಿತು ಮಾಹಿತಿ ನೀಡಿದರು. ಜತೆಗೆ, ಅಧಿಸೂಚನೆ ರದ್ದುಪಡಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹೊರಡಿಸಿದ್ದ ಆದೇಶ ಪ್ರತಿ ಸಲ್ಲಿಸಿದರು.

ಅಧಿಸೂಚನೆಯಲ್ಲಿನ ಕೆಲವು ನಿಯಮಗಳನ್ನು ಆಕ್ಷೇಪಿಸಿ ಪ್ರಾಣಿಪ್ರಿಯರು, ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಪಾಲಿಕೆಗೆ ಮನವಿ ಸಲ್ಲಿಕೆಯಾಗಿವೆ. ಅಲ್ಲದೆ, ಸದ್ಯ ಹೊರಡಿಸಲಾಗಿರುವ ಕೆಲವು ನಿಯಮಗಳ ಜಾರಿ ಕೂಡ ಕಠಿಣವಾಗಿದೆ. ಹೀಗಾಗಿ ಮತ್ತೂಮ್ಮೆ ಮರುಪರಿಶೀಲಿಸಲು ನಿರ್ಧರಿಸಿದ್ದು, ಜನರಿಂದ ಅಭಿಪ್ರಾಯ ಸಂಗ್ರಹಿಸಿ ಹೊಸ ನಿಯಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. 

ವಿಚಾರಣೆ ವೇಳೆ ನ್ಯಾಯಪೀಠ, ಸರ್ಕಾರದ ಹೊರಡಿಸಿರುವ ಅಧಿಸೂಚನೆಯಲ್ಲಿನ ಕೆಲವು ನಿಯಮಗಳು ನಗರದ ಕೆಲವೆಡೆ ಅಗತ್ಯವಿದೆ. ಆದರೆ, ಸರ್ಕಾರ ಹಾಗೂ ಪಾಲಿಕೆ ಈ ಕುರಿತು ಸಮಾಲೋಚಿಸಿ ಕಾನೂನು ನಿಯಮಗಳಿಗೆ ಅನುಗುಣವಾಗಿ ಹಾಗೂ ಸಾರ್ವಜನಿಕರಿಂದ, ಪ್ರಾಣಿ ಪ್ರಿಯರಿಂದಲೂ ಅಭಿಪ್ರಾಯ ಸಂಗ್ರಹಿಸಿ ರಚನಾತ್ಮಕ ಹಾಗೂ ಸಮಗ್ರ ನಿಯಮ ರೂಪಿಸಲಿ ಎಂದು ಸಲಹೆ ನೀಡಿತು.

ಅಪಾರ್ಟ್‌ಮೆಂಟ್‌ಗಳಲ್ಲಿ ಎಷ್ಟು ನಾಯಿ ಇರಬೇಕು ಎಂಬ ಬಗ್ಗೆ ರಚನಾತ್ಮಕ ನಿಯಮ ರೂಪಿ ಸುವ ಅಗತ್ಯವಿದೆ. ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ ಮಾಲೀಕರು ಎಷ್ಟು ನಾಯಿಗಳನ್ನು ಹೊಂದಬೇಕು ಎಂಬುದು ತಮಗೆ ಸೇರಿದ್ದು ಎಂದು ಹೇಳುತ್ತಿದ್ದಾರೆ ಸರಿ. ಆದರೆ, ಮನುಷ್ಯರು ಕೂಡ ಮುಖ್ಯ ಅಲ್ಲವೇ ಎಂದು  ಅಭಿಪ್ರಾಯಪಟ್ಟಿತು. ಪಾಲಿಕೆ ರೂಪಿಸಲಿರುವ ಹೊಸ ನಿಯಮಗಳಿಗೆ ನಿಮ್ಮ ಅಗತ್ಯ ಸಲಹೆಗಳನ್ನು ನೀಡಬಹುದು ಎಂದು ಅರ್ಜಿದಾರರಿಗೆ ಸೂಚಿಸಿದ ನ್ಯಾಯಪೀಠ, ವಾದ -ಪ್ರತಿವಾದ ಆಲಿಸಿ ಪಿಐಎಲ್‌ಗ‌ಳನ್ನು ಇತ್ಯರ್ಥಪಡಿಸಿತು. 

Advertisement

ಏನದು ಅಧಿಸೂಚನೆ?: ಒಂದು ಮನೆಗೆ ಮೂರು, ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ ನಿವಾಸಿಗಳು ಒಂದು ನಾಯಿ ಸಾಕಲಷ್ಟೇ ಅವಕಾಶ. ಸಾಕು ನಾಯಿಗಳಿಗೆ ಲೈಸೆನ್ಸ್‌ ಕಡ್ಡಾಯ. ಪರವಾನಗಿ ಜತೆಗೆ ಮೈಕ್ರೋ ಚಿಪ್‌ ಅಳ ವ ಡಿ ಸು ವುದು ಕೂಡ ಕಡ್ಡಾಯ. ನಾಯಿಗಳು  ಬೀದಿಗೆ ಬಂದರೆ 72 ಗಂಟೆಗಳಲ್ಲಿ ದಂಡ ಪಾವತಿಸಿ ವಾಪಸ್‌ ಪಡೆಯಬೇಕು ಎಂಬ ನಿಯಮಗಳನ್ನೊಳಗೊಂಡ ಅಧಿಸೂಚನೆಯನ್ನು ಫೆ.28ರಂದು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿತ್ತು, ಬಿಬಿಎಂಪಿ ಇತ್ತೀಚೆಗೆ ನಿಯಮಗಳನ್ನು ಜಾರಿಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next