Advertisement

Mumbai: ಸಾವಿನ ನೆರಳು-5ನೇ ಮಹಡಿಯಿಂದ ಬಿದ್ದ ನಾಯಿ- 3 ವರ್ಷದ ಮಗು ಮೃತ್ಯು

04:31 PM Aug 07, 2024 | Team Udayavani |

ಮಹಾರಾಷ್ಟ್ರ: ಜನನಿಬಿಢ ರಸ್ತೆಯಲ್ಲಿ ತಾಯಿ ಜತೆ ನಡೆದುಕೊಂಡು ಹೋಗುತ್ತಿದ್ದ ಮೂರು ವರ್ಷದ ಮಗುವಿನ ಮೈಮೇಲೆ ಐದನೇ ಮಹಡಿಯಿಂದ ನಾಯಿಯೊಂದು ಬಿದ್ದ ಪರಿಣಾಮ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ಮುಂಬೈನ ಥಾಣೆಯ ಮುಂಬ್ರಾದಲ್ಲಿ ಮಂಗಳವಾರ (ಆಗಸ್ಟ್‌ 06) ನಡೆದಿದೆ.

Advertisement

ನಿನ್ನೆ ಮಧ್ಯಾಹ್ನ ಅಮೃತ್‌ ನಗರದಲ್ಲಿ ಈ ದುರಂತ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋದಲ್ಲಿ ಗೋಲ್ಡನ್‌ ರಿಟ್ರೈವರ್‌ (Golden Retriever) ತಳಿಯ ನಾಯಿ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ 3 ವರ್ಷದ ಬಾಲಕಿ ಮೈಮೇಲೆ ಬಿದ್ದಿರುವ ದೃಶ್ಯ ಸೆರೆಯಾಗಿದೆ. ನಾಯಿ ಬೊಬ್ಬೆ ಹೊಡೆಯುತ್ತಾ ಕುಂಟುತ್ತಾ ಸಾಗುತ್ತಿರುವುದು ವಿಡಿಯೋದಲ್ಲಿದೆ.

ವರದಿಯ ಪ್ರಕಾರ, ನಾಯಿ ಐದನೇ ಮಹಡಿಯಿಂದ ಬಿದ್ದ ಪರಿಣಾಮ 3 ವರ್ಷದ ಮಗು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿತ್ತು. ಕೂಡಲೇ ಸುತ್ತಮುತ್ತಲಿನವರು ತಾಯಿಯ ಸಹಾಯಕ್ಕೆ ಆಗಮಿಸಿದ್ದು, ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಗು ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದರು.

ಇದೊಂದು ಆಕಸ್ಮಿಕ ಸಾವು ಎಂದು ಮುಂಬ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.  ಮೃತ ಮಗುವಿನ ತಾಯಿಯ ಹೇಳಿಕೆ ಪಡೆಯಬೇಕಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Duniya Vijay: ಓಟಿಟಿಗಳು ಕನ್ನಡಿಗರು, ಕನ್ನಡ ಸಿನಿಮಾಗಳಿಗೆ ಅವಮಾನ ಮಾಡುತ್ತಿದೆ – ವಿಜಯ್

Advertisement

Udayavani is now on Telegram. Click here to join our channel and stay updated with the latest news.

Next