ನವದೆಹಲಿ: ಕಳೆದ ವರ್ಷ ಐಪಿಎಲ್ ಆನ್ ಲೈನ್ ನೇರಪ್ರಸಾರದ ಹಕ್ಕನ್ನು ಮುಕೇಶ್ ಅಂಬಾನಿ ಮಾಲಿಕತ್ವದ ವಯಾಕಾಮ್18 ಮೀಡಿಯಾ ಪಡೆದುಕೊಂಡಿತ್ತು. ಆಗ ವ್ಯಯಿಸಿದ್ದ ಮೊತ್ತ 22,359 ಕೋಟಿ ರೂ.! ಹಾಗಿದ್ದರೂ ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಅದು ಉಚಿತವಾಗಿಯೇ ಪ್ರಸಾರ ಮಾಡಲಿದೆಯಂತೆ. ಇದನ್ನು ಮೂಲಗಳು ತಿಳಿಸಿವೆ. ಈ ವಿಷಯವನ್ನು ರಿಲಯನ್ಸ್ ಇನ್ನೂ ಘೋಷಿಸಿಲ್ಲ.
ಅಷ್ಟು ಭಾರೀ ಮೊತ್ತ ನೀಡಿ ಐಪಿಎಲ್ ಪಂದ್ಯಗಳನ್ನು ವಯಾಕಾಮ್ ಯಾಕೆ ಉಚಿತವಾಗಿ ಪ್ರಸಾರ ಮಾಡುತ್ತದೆ? ಹೀಗೆ ನೋಡಿದರೆ ಉಚಿತವಾಗಿ ಕೊಡುವ ದೊಡ್ಡ ಪರಂಪರೆಯೇ ರಿಲಯನ್ಸ್‌ನಲ್ಲಿದೆ. ಜಿಯೊ ಸಿಮ್ ಮತ್ತು ನೆಟ್ ವರ್ಕನ್ನು ದೀರ್ಘಕಾಲ ರಿಲಯನ್ಸ್ ಉಚಿತವಾಗಿಯೇ ನೀಡಿತ್ತು.
ಇದನ್ನೂ ಓದಿ:ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ 25,000 ಕಿ.ಲೀ ಡೀಸೆಲ್ ಹೆಚ್ಚುವರಿ ವಿತರಣೆಗೆ ಆದೇಶ
ಕಳೆದ ವರ್ಷ ನಡೆದ ವಿಶ್ವಕಪ್ ಫುಟ್‌ಬಾಲ್ ಪಂದ್ಯಗಳನ್ನು ಜಿಯೊ ಹೊಂದಿರುವವರೆಲ್ಲ ಉಚಿತವಾಗಿಯೇ ನೋಡಬಹುದಿತ್ತು. ಈಗಲೂ ಹಾಗೆಯೇ ಎಂದು ಸಾಮಾನ್ಯವಾಗಿ ಭಾವಿಸಬೇಡಿ. ಇದರ ಹಿಂದೆ ಒಂದು ಲೆಕ್ಕಾಚಾರವಿದೆ.
ಏನಿದು ಲೆಕ್ಕಾಚಾರ?: ತಾಂತ್ರಿಕ ಜಗತ್ತಿನಲ್ಲಿ ಉಚಿತವಾಗಿ ಕೊಡುವ ಸೇವೆಗಳಿಗೆ ಭಾರೀ ಮಾರುಕಟ್ಟೆ ಸಿಗುತ್ತಿದೆ. ಗೂಗಲ್, ಫೇಸ್‌ಬುಕ್, ಟ್ವಿಟರ್‌ಗಳೆಲ್ಲ ಯಶಸ್ವಿಯಾಗಿರುವುದು ಉಚಿತವಾಗಿ ನೀಡಲ್ಪಟ್ಟಿದ್ದರಿಂದಲೇ. ಅದೇ ರೀತಿ ಐಪಿಎಲ್ ಪಂದ್ಯಗಳ ವೀಕ್ಷಣೆಯನ್ನು ಉಚಿತವಾಗಿ ನೀಡಿದರೆ, ವಯಾಕಾಮ್ ಮಾರುಕಟ್ಟೆ ಏರುತ್ತದೆ. ಆಗ ಜಾಹೀರಾತು ಸಂಗ್ರಹದ ಮೂಲಕ ಭಾರೀ ಲಾಭ ಗಳಿಸ ಬಹು ದೆಂದು ಲೆಕ್ಕಾಚಾರ ಮಾಡಲಾಗಿದೆಯಂತೆ!