Advertisement
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಲಘು ಹಿಂದುತ್ವ ಅನುಸರಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಆದರೆ ರಾಹುಲ್ ಈ ಸೂಚನೆ ನೀಡಲು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ದಿನೇಶ್ ಗುಂಡೂರಾವ್ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ನೀಡಿರುವ ಹೇಳಿಕೆಗಳು ಕಾರಣವಾಗಿರಬಹುದು. ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಉಗ್ರ ಸಂಘಟನೆಗಳು ಎಂದಿದ್ದರು ಅವರು.
Related Articles
Advertisement
ಈಗಾಗಲೇ ಕರ್ನಾಟದಲ್ಲಿ ಕಾಂಗ್ರೆಸ್ ಹಿಂದು ವಿರುದ್ಧ ಎನ್ನುವ ಭಾವನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ 20ಕ್ಕೂ ಹೆಚ್ಚು ಹಿಂದು ಕಾರ್ಯಕರ್ತರ ಹತ್ಯೆಯಾಗಿರುವುದು ಹಾಗೂ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಪದೇ ಪದೇ ಸಂಭವಿಸಿರುವ ಕೋಮುಗಲಭೆಗಳು. ಇದರ ಜತೆಗೆ ಸರಕಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ಹಠ ಹಿಡಿದು ಆಚರಿಸಿ ತನ್ನ ತುಷ್ಟೀಕರಣ ನೀತಿಯನ್ನು ಜಗಜ್ಜಾಹೀರುಪಡಿಸಿಕೊಂಡಿದೆ. ದನಕಳ್ಳರ ಪ್ರಕರಣಕ್ಕೆ ಸಂಬಂಧಿಸಿ ಮೃದು ಧೋರಣೆ ತಳೆದದ್ದು ಸೇರಿದಂತೆ ಹಿಂದುಗಳಿಗೆ ಅಸಮಾಧಾನವಾಗುವಂತೆ ಹಲವು ನಡೆಗಳನ್ನಿಟ್ಟಿದೆ.
ಇದರಿಂದ ಹಿಂದು ಮತ ಧ್ರುವೀಕರಣವಾಗುತ್ತಿದೆ ಎಂದು ಅರಿವಾಗುತ್ತಿದ್ದಂತೆ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರು ಕೂಡ ಹಿಂದುತ್ವ ಜಪ ಮಾಡಲಾರಂಭಿಸಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಹಿಂದುತ್ವವೇ ಮುಖ್ಯ ವಿಷಯವಾಗುವ ಸಾಧ್ಯತೆಯಿದೆ. ಇದರಿಂದ ಕಾಂಗ್ರೆಸ್‌ಗೆ ಅನುಕೂಲವೂ ಇದೆ ಅನನುಕೂಲವೂ ಇದೆ. ಅನುಕೂಲ ಏನೆಂದರೆ ಅಭಿವೃದ್ಧಿ, ಆಡಳಿತ ವೈಫಲ್ಯ ಇತ್ಯಾದಿ ವಿಚಾರದ ಚರ್ಚೆ ಹಿನ್ನೆಲೆಗೆ ಸರಿಯುತ್ತದೆ. ಸ್ವಲ್ಪಮಟ್ಟಿಗೆ ಮುಸ್ಲಿಂ ಮತ್ತು ಜಾತ್ಯತೀತ ಮತಗಳು ಕೈತಪ್ಪಿದರೆ ಅನನುಕೂಲವಾಗಬಹುದು. ಗುಜರಾತ್ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದಂತೆ ಮುಖ್ಯವಾದ ವ್ಯತ್ಯಾಸವೊಂದಿದೆ.
ಗುಜರಾತಿನ ಚುನಾವಣೆಯಲ್ಲಿ ಭಾವನೆಯೇ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕರ್ನಾಟಕದ ಸಂದರ್ಭದಲ್ಲಿ ಮತದಾರ ಭಾವನೆಯ ಹಿನ್ನೆಲೆಯಲ್ಲಿ ಮತದಾನ ಮಾಡಿದ ಉದಾಹರಣೆಗಳು ಕಡಿಮೆ. ಹಾಗೊಂದು ವೇಳೆ ಭಾವನೆಯೇ ಮುಖ್ಯವಾಗಿದ್ದರೆ 2013ರಲ್ಲೂ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಗಳಿಸಬೇಕಿತ್ತು. ಬಿಜೆಪಿಯ ದುರಾಡಳಿತದಿಂದ ರೋಸಿಹೋಗಿ ಜನರು ಕಾಂಗ್ರೆಸ್‌ನ್ನು ಆರಿಸಿದ್ದಾರೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ನ ಲಘು ಹಿಂದುತ್ವ ಸಫಲವಾಗಬಹುದೇ ಎನ್ನುವುದನ್ನು ಕಾದು ನೋಡಬೇಕು.