ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಟಿ.ರಂಗಪ್ಪಅವರ ಪತ್ನಿ ರಶ್ಮಿ ರಂಗಪ್ಪ ಮಿಸಸ್ ಇಂಡಿಯಾ ಪ್ರಶಸ್ತಿಯನ್ನುಮುಡಿಗೇರಿಸಿಕೊಂಡಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 8 ಸುತ್ತಿನಲ್ಲಿ ಸಾಧನೆಮಾಡಿದ ರಶ್ಮಿ ರಂಗಪ್ಪ “ಮಿಸಸ್ ಇಂಡಿಯಾಐ ಯಾಮ್ ಪವರ್ ಫುಲ್’ ಪ್ರಶಸ್ತಿ ಪಡೆದಿದ್ದು ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರುತಾಲೂಕಿನ ಬಿಳಿಚೋಡು ಗ್ರಾಮದ ರಶ್ಮಿರಂಗಪ್ಪ ಶಿವಣಿಯ ಅಪ್ಪಟ ರೈತನಮಗಳಾಗಿದ್ದಾರೆ. ರಶ್ಮಿ ಅವರ ಪತಿ ಟಿ.ರಂಗಪ್ಪಅವರು ದೊಡ್ಡಬಳ್ಳಾಪುರದಲ್ಲಿ ಡಿವೈಎಸ್ಪಿ ಆಗಿಕಾರ್ಯನಿರ್ವಹಿಸುತ್ತಿದ್ದು , ಹಿರಿಯ ಮಗಳು ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾರೆ. ಎರಡನೇ ಮಗಳು ಐದನೇ ತರಗತಿ ಓದುತ್ತಿದ್ದಾರೆ.2004ರಲ್ಲಿ ಪೊಲೀಸ್ ಅಧಿಕಾರಿ ರಂಗಪ್ಪ ಜತೆ ವಿವಾಹವಾದ ರಶ್ಮಿಅವರು, ವಿವಾಹದ ಬಳಿಕ ಹತ್ತಾರು ಕಡೆ ಪತಿ ವರ್ಗಾವಣೆ ಕಾರಣಕ್ಕೆಸುತ್ತಾಟ ನಡುವೆಯೂ ನಿರಂತರ ಪ್ರಯತ್ನದಿಂದ ಈ ಸಾಧನೆ ಮಾಡಿದ್ದಾರೆ.
ಇದು ವಿಶೇಷವಾಗಿ ಗೃಹಿಣಿಯರಿಗೆ ಮಾತ್ರವೇ ನಡೆಯುವ ಸ್ಪರ್ಧೆ.ವಯಸ್ಸಿನ ಮಿತಿ ಇಲ್ಲ. ಆದರೆ ರಾಷ್ಟ್ರೀಯ ಸ್ಪರ್ಧೆಗೆ ಹೋಗುವ ಬಗ್ಗೆ ರಶ್ಮಿಅವರು ಹೆಚ್ಚು ಗಮನ ಹರಿಸಲಿಲ್ಲ. ಆದರೆ ಗೆಳೆತಿಯರು ಸಂಬಂಧಿಕರ ಒತ್ತಾಯದ ಕಾರಣ ಸ್ಪರ್ಧೆಗೆ ಕೇವಲ 10 ದಿನ ಇರುವಾಗಲೇ ತಯಾರಿನಡೆಸಿ ಈಗ ಪ್ರಶಸ್ತಿ ಗೆದ್ದಿದ್ದಾರೆ.
ಬರುವ ಮಾರ್ಚ್- ಏಪ್ರಿಲ್‌ನಲ್ಲಿಅಂತಾರಾಷ್ಟ್ರೀಯ ಮಟ್ಟದ “ಮಿಸೆಸ್ ಇಂಡಿಯಾ ಐಎಮ್ ಫಾವರ್ ಫುಲ್‌ಸ್ಪರ್ಧೆ’ ಸಿಂಗಪೂರನಲ್ಲಿ ನಡೆಯಲಿ¨